More

    ಪತ್ನಿಯಿಂದ ದೂರವಿದ್ದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ ಯತ್ನ

    ಶಿವಮೊಗ್ಗ: ಮದುವೆಯಾದ ಬಳಿಕ ಒಂದೂವರೆ ವರ್ಷ ಪತ್ನಿಯಿಂದ ದೂರವಿದ್ದ ವ್ಯಕ್ತಿಯೊಬ್ಬ ಶನಿವಾರ ಬೆಳಗ್ಗೆ ನಗರದ ಹಳೇ ತುಂಗಾ ಸೇತುವೆ ಬಳಿ ನದಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದಾನೆ. ಗಂಭೀರ ಗಾಯಗೊಂಡಿರುವ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
    ಮೂಲತಃ ಆಯನೂರಿನ, ಹಾಲಿ ಕಾಶಿಪುರದ ನಿವಾಸಿ 35 ವರ್ಷದ ಫಿಟೆನೆಸ್ ತರಬೇತುದಾರ, ಪೈಂಟರ್ ಆತ್ಮಹತ್ಯೆ ಯತ್ನಿಸಿದವ. ಒಂದೂವರೆ ವರ್ಷದ ಹಿಂದೆ ಯುವತಿಯನ್ನು ಮದುವೆಯಾಗಿದ್ದ. ಸಂಸಾರದಲ್ಲಿ ವಿರಸ ಮೂಡಿ ಪತ್ನಿ ತವರು ಮನೆ ಸೇರಿದ್ದಳು. ಆಗಾಗ್ಗೆ ಕಾಶಿಪುರದಲ್ಲಿದ್ದ ಗಂಡನ ಮನೆಗೆ ಬಂದು   ಹೋಗುತ್ತಿದ್ದಳು. ಆದರೆ ಶಾಶ್ವತವಾಗಿ ಜತೆಗಿರಲು ನಿರಾಕರಿಸಿದ್ದಳು. ಹಣ ಸಂಪಾದಿಸಿ ಉತ್ತಮ ಜೀವನ ನಡೆಸುವಂತೆ ಆಗುವಂತೆ ಪದೇ ಪದೇ ಗಂಡನಿಗೆ ಹೇಳುತ್ತಿದ್ದಳು. ಇಷ್ಟಪಟ್ಟು ಮದುವೆಯಾದರೂ ಪತ್ನಿ ಜತೆಗಿಲ್ಲವೆಂಬ ಕಾರಣಕ್ಕೆ ಆತ ಮನನೊಂದಿದ್ದ. ಇದೇ ವೇಳೆ ಶನಿವಾರ ಬೆಳಗ್ಗೆ ತುಂಗಾನದಿ ಸೇತುವೆ ಮೇಲೆ ಪತ್ನಿ ಎದುರಾಗಿದ್ದಳು.
    ಪತ್ನಿ ಬಳಿ ಇದ್ದ ಮೊಬೈಲ್ ಕಸಿದುಕೊಳ್ಳಲು ಮುಂದಾಗಿದ್ದಲ್ಲದೆ ಮನೆಗೆ ಬರುವಂತೆ ಕರೆದಿದ್ದಾನೆ. ಇದಕ್ಕೆ ನಿರಾಕರಿಸಿದ್ದು, ಒಂದಾಗಿ ಬಾಳುವ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಮೊದಲು ಪತ್ನಿಯನ್ನು ನದಿಗೆ ತಳ್ಳಿ ಆನಂತರ ತಾನು ನದಿಗೆ ಹಾರಲು ಮುಂದಾಗಿದ್ದ. ಈ ವೇಳೆ ಪತ್ನಿ ತಪ್ಪಿಸಿಕೊಂಡಿದ್ದು ಆತ ಮಾತ್ರ ನದಿಗೆ ಹಾರಿದ್ದ. ಸಮೀಪದಲ್ಲೇ ಇದ್ದ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ರಕ್ಷಣೆ ಮಾಡಿ ಆಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದರು. ನದಿಯಲ್ಲಿ ನೀರಿಲ್ಲದ ಕಾರಣ ಬಂಡೆ ಮೇಲೆ ಬಿದ್ದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
    ಡೆತ್‌ನೋಟ್ ಬರೆದಿಟ್ಟಿ ವ್ಯಕ್ತಿ: ಇತ್ತ ಬದುಕುಳಿದ ಪತಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಉಲ್ಟಾ ಹೇಳಿಕೆ ನೀಡಿದ್ದಾನೆ. ತಲೆ, ಕೈಕಾಲು, ದೇಹದ ವಿವಿಧೆಡೆ ಗಾಯಗೊಂಡಿರುವ ವ್ಯಕ್ತಿ, ಮೊಬೈಲ್ ಬೀಳುವುದನ್ನು ತಡೆಯಲು ಮುಂದಾದಾಗ ಆಯ ತಪ್ಪಿ ನದಿಗೆ ಬಿದ್ದಿದ್ದಾಗಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ವಾಹನ ಇಲ್ಲದ ಕಾರಣ ವ್ಯಕ್ತಿ ತನ್ನ ದೊಡ್ಡಪ್ಪನ ಮಗನ ಬಳಿ ಹೇಳಿಕೊಂಡಿದ್ದು 15 ದಿನ ಹಿಂದಷ್ಟೇ ಹಳೆ ವಾಹನವನ್ನು ರಿಪೇರಿಗೆ ಬಿಟ್ಟು ಹೊಸ ವಾಹನ ಖರೀದಿಸಿದ್ದನು. ಈ ನಡುವೆ ಆತ ನನ್ನ ಸಾವಿಗೆ ನಾನೇ ಕಾರಣ ಯಾರನ್ನೂ ವಿಚಾರ ಮಾಡಬೇಡಿ ಎಂದು ಡೆತ್‌ನೋಟ್ ಕೂಡ ಬರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts