More

    ಹಬ್ಬಗಳ ಆಚರಣೆಯ ಅರಿವು ಅಗತ್ಯ

    ಬಾಳೆಹೊನ್ನೂರು: ವಿದ್ಯಾರ್ಥಿಗಳಲ್ಲಿ ಹಬ್ಬಗಳ ಆಚರಣೆ ಕುರಿತು ಅರಿವು ಮೂಡಿಸುವುದು ಪಾಲಕರು, ಶಿಕ್ಷಕರ ಕರ್ತವ್ಯ ಎಂದು ಸಂಸ್ಕೃತಿ ಶಾಲೆ ಪ್ರಾಚಾರ್ಯೆ ರಜನಿ ದೇವಯ್ಯ ಹೇಳಿದರು.

    ಪಟ್ಟಣದ ರೇಣುಕನಗರದ ಸಂಸ್ಕೃತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಕರ ಸಂಕ್ರಾಂತಿ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಮಕರ ಸಂಕ್ರಾಂತಿ ಸಮೃದ್ಧಿಯ ಹಬ್ಬ. ರೈತರಿಗೆ ಸುಗ್ಗಿ ಹಬ್ಬ. ರೈತರು ಸಲು ಪಡೆದು ಪೂಜಿಸುತ್ತಾರೆ. ಈ ಹಬ್ಬದಂದು ಹೊಸ ಬೆಳೆಯ ತಿನಿಸು ಹಾಗೂ ಎಳ್ಳು-ಬೆಲ್ಲವನ್ನು ತಿಂದು ಒಳ್ಳೆಯ ಮಾತನಾಡು ಎಂಬ ನುಡಿಯಿದೆ. ವಿಶಿಷ್ಟವಾಗಿ ಹಬ್ಬ ಆಚರಿಸುವ ಮೂಲಕ ಮಕ್ಕಳಿಗೆ ಕಿರಿಯ ವಯಸ್ಸಿನಲ್ಲಿ ಹಬ್ಬಗಳ ಮಹತ್ವ ಸದಾ ಉಳಿಯುವಂತೆ ಮಾಡಲಾಗುತ್ತಿದೆ ಎಂದರು.
    ಮಕರ ಸಂಕ್ರಾಂತಿ ಅಂಗವಾಗಿ ವಿದ್ಯಾರ್ಥಿಗಳು ಗಾಳಿಪಟ ಹಾರಿಸಿ ಸಂಭ್ರಮಿಸಿದರು. ವಿದ್ಯಾರ್ಥಿಗಳಿಗೆ ಎಳ್ಳು-ಬೆಲ್ಲ ಹಂಚಲಾಯಿತು. ಶಿಕ್ಷಕಿಯರಾದ ದೀಪಿಕಾ, ನಾಜಿಲಾ, ದರ್ಶಿನಿ, ದೀಪಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts