More

    ಅರಿವು ಮೂಡಿಸುವುದೇ ದೀಪೋತ್ಸವ

    ಕಾಗವಾಡ: ಅಂಧಕಾರ ತೊಲಗಿಸಿ ಜ್ಞಾನದ ಅರಿವು ಮೂಡಿಸುವ ಕಾರ್ಯವನ್ನು ದೀಪೋತ್ಸವ ಮಾಡುತ್ತದೆ. ಮಾನವನ ಜೀವನದಲ್ಲಿ ಬಂದೊದಗುವ ಕಷ್ಟಗಳಿಗೆ ಬೆಳಕಿನ ಆಶಾಕಿರಣಗಳ ಮೂಲಕ ಚೈತನ್ಯ ತುಂಬುವ ಮಾಸವೇ ಕಾರ್ತಿಕ ಮಾಸವಾಗಿದೆ ಎಂದು ಬೆಳ್ಳಂಕಿ ಹಿರೇಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಸಮೀಪದ ಮಂಗಸೂಳಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ದಶ ಸಹಸ್ರ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ಬದುಕಿಗೆ ಬೆಳಕಿನ ಅವಶ್ಯಕತೆ ಇದೆ.

    ಸಮಾಜಮುಖಿ ಕಾರ್ಯಗಳಿಂದ ಮನುಷ್ಯ ಈ ಬೆಳಕನ್ನು ಬದುಕಿನಲ್ಲಿ ಕಂಡುಕೊಳ್ಳುತ್ತಾನೆ ಎಂದರು. ಅಂತರಂಗ ಮತ್ತು ಬಹಿರಂಗ ಶುದ್ಧಗೊಳಿಸಿ ಸದ್ಭಾವ ತುಂಬಿ ಮಾನವನ ಜೀವನಕ್ಕೆ ಚೇತನ ಶಕ್ತಿಯನ್ನು ನೀಡಿ ವಿಶ್ವದಲ್ಲೆಡೆ ಬೆಳಕಿನ ಮಹತ್ವ ನೀಡುವ ಶ್ರೇಷ್ಠತೆ ದೀಪಕ್ಕಿದೆ ಎಂದು ಶ್ರೀಗಳು ತಿಳಿಸಿದರು. ದೇವಸ್ಥಾನದ ಅಧ್ಯಕ್ಷ ಚಿದಾನಂದ ಮಾಳಿ, ಎಪಿಎಂಸಿ ಮಾಜಿ ಅಧ್ಯಕ್ಷ ರವೀಂದ್ರ ಪೂಜಾರಿ, ಪಿಕೆಪಿಎಸ್ ಅಧ್ಯಕ್ಷ ಮುಕುಂದ ಪೂಜಾರಿ, ಟ್ರಸ್ಟಿಗಳಾದ ಮಲ್ಲಪ್ಪ ಕೋಷ್ಠಿ, ಅಶೋಕ ಮಾಳಿ, ಶ್ರೀಶೈಲ ಮಾಳಿ, ಮಲ್ಲಪ್ಪ ಮಗದುಮ್ಮ, ಪ್ರಕಾಶ ಮಾಳಿ, ಅಶೋಕ ಕುಂಬಾರ, ರವಿ ಮಾಳಿ, ಧನಪಾಲ ಕೋಷ್ಠಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts