More

    ಕೇಂದ್ರದ ದಿಟ್ಟ ನಿರ್ಧಾರದಿಂದ ಕರೊನಾ ನಿಯಂತ್ರಣ

    ಶೃಂಗೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡ ದಿಟ್ಟ ನಿರ್ಧಾರದಿಂದ ಭಾರತದಲ್ಲಿ ಕರೊನಾ ತೀವ್ರತೆ ಕಡಿಮೆ ಇದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ತಿಳಿಸಿದರು.

    ತಾಲೂಕು ಬಿಜೆಪಿ ಘಟಕ ಸೋಮವಾರ ರೋಟರಿ ಭವನದಲ್ಲಿ ಆಯೋಜಿಸಿದ್ದ ಮೋದಿ ಸರ್ಕಾರದ ಒಂದು ವರ್ಷದ ಸಾಧನೆ ಪ್ರಚಾರ ಪಡಿಸುವ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕರೊನಾದ ಭಯದಿಂದ ದೇಶದ ನಾಗರಿಕರು ಮಾನಸಿಕ ಸದೃಢತೆ ಪಡೆಯಲು ಮೋದಿ ಅವರು ದೀಪ ಹಾಗೂ ಜಾಗಟೆ ಹೊಡೆಯುವ ಮೂಲಕ ಜಾಗೃತಗೊಳಿಸಿದರು. 700ಕ್ಕೂ ಹೆಚ್ಚು ಕರೊನಾ ತಪಾಸಣೆ ಪ್ರಯೋಗ ಕೇಂದ್ರಗಳನ್ನು ಸ್ಥಾಪಿಸಿದರು. ದೇಶದಲ್ಲೇ ಉತ್ತಮ ಗುಣಮಟ್ಟದ ಎನ್-95 ಮುಖಗವಸು ಮತ್ತು ದಿನಕ್ಕೆ ಮೂರು ಲಕ್ಷಗಿಂತ ಹೆಚ್ಚು ಪಿಪಿಇ ಕಿಟ್ ತಯಾರಿಸಲು ಪ್ರೇರಣೆ ನೀಡಿದರು ಎಂದರು.

    ಕೇಂದ್ರ ಸರ್ಕಾರ ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಆರ್ಟಿಕಲ್ 370ರ ರದ್ಧತಿ, ಪೌರತ್ವ ತಿದ್ದುಪಡಿ ವಿಧೇಯಕ-2019, ರಾಮಮಂದಿರ ನಿರ್ವಣ, ತ್ರಿವಳಿ ತಲಾಕ್ ಮುಂತಾದ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದರು.

    ಆತ್ಮನಿರ್ಭರ ಭಾರತ , ನಿರ್ಮಾಣ ಗರೀಭ್ ಕಲ್ಯಾಣ ಯೋಜನೆಯಡಿ 1.7ಲಕ್ಷ ಕೋಟಿ ರೂ. ಪ್ಯಾಕೇಜ್ ಘೊಷಿಸಿ ಉಚಿತ ಪಡಿತರ ವಿತರಣೆ, ಜನಧನ್ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 500 ರೂ. ಹಾಗೂ ಪಿಎಂ ಕಿಸಾನ್ ಯೋಜನೆ ಮೂಲಕ ರೈತರ ಖಾತೆಗೆ ಎರಡು ಸಾವಿರ ರೂ.ಗಳನ್ನು ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts