More

    ಬಾಲ ಕಾರ್ವಿುಕರ ನೇಮಕ ಶಿಕ್ಷಾರ್ಹ ಅಪರಾಧ

    ಶಿವಮೊಗ್ಗ: ಕಾರ್ವಿುಕ ಇಲಾಖೆ ಅಧಿಕಾರಿಗಳು ಗಾರ್ಡನ್ ಏರಿಯಾ ಸೇರಿ ನಗರದ ಹಲವೆಡೆ ಬುಧವಾರ ಬಾಲ ಕಾರ್ವಿುಕರ ಪತ್ತೆ ಕಾರ್ಯ ನಡೆಸಿ, ಬಾಲಾ ಕಾರ್ವಿುಕರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳದಂತೆ ಅಂಗಡಿಗಳ ಮಾಲೀಕರಿಗೆ ಕರಪತ್ರ ವಿತರಿಸಿ ಜಾಗೃತಿ ಮೂಡಿಸಿದರು.

    ಜಿಲ್ಲಾಡಳಿತ, ಕಾರ್ವಿುಕ ಇಲಾಖೆ, ಜಿಲ್ಲಾ ಬಾಲಾಕಾರ್ವಿುಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜಾಗೃತಿ ಕಾರ್ಯ ಹಮ್ಮಿಕೊಂಡಿದ್ದು ಅಂಗಡಿಗಳಿಗೆ ಭೇಟಿ ನೀಡಿ ಬಾಲ ಕಾರ್ವಿುಕರ ಬಗ್ಗೆ ಮನವರಿಕೆ ಮಾಡಿಕೊಟ್ಟರು.

    ಕರೊನಾ ವೇಳೆ ಶಾಲೆಗಳು ಮುಚ್ಚಿದ್ದು ಕುಟುಂಬ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ಬಾಲ ಕಾರ್ವಿುಕರಾಗಿ ದುಡಿಯುತ್ತಿದ್ದಾರೆ. ಇದನ್ನು ಮನಗಂಡ ಸರ್ಕಾರ ಮತ್ತೆ ಶಾಲೆಗೆ ತೆರಳುವಂತೆ ಮನವೊಲಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

    14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು, ಅಪಾಯಕಾರಿ ಉದ್ದಿಮೆಗಳಲ್ಲಿ 18 ವರ್ಷದೊಳಗಿನ ಕಿಶೋರರನ್ನು ನೇಮಕ ಮಾಡಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೇಮಕ ಮಾಡಿಕೊಂಡಲ್ಲಿ ವಾರೆಂಟ್ ರಹಿತ ಬಂಧನಕ್ಕೆ ಒಳಪಡಿಸುವ ಜತೆಗೆ 2 ವರ್ಷ ಜೈಲು ಶಿಕ್ಷೆ, 20ರಿಂದ 50 ಸಾವಿರ ರೂ.ವರೆಗೆ ದಂಡ ವಿಧಿಸಬಹುದು. ಪ್ರತಿ ಮಗುವಿಗೆ 20 ಸಾವಿರ ರೂ. ಪರಿಹಾರವನ್ನು ತಪ್ಪತಸ್ಥ ಮಾಲೀಕರು ಮಕ್ಕಳ ಪುನರ್ವಸತಿ ಕಲ್ಯಾಣ ನಿಧಿಗೆ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts