More

    ಬಿಬಿಎಂಪಿಯಿಂದ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಅರಿವು

    ಬೆಂಗಳೂರು: ಬಿಬಿಎಂಪಿಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಭಾನುವಾರ ಘನತ್ಯಾಜ್ಯ ನಿರ್ವಹಣೆ ವಿಭಾಗದಿಂದ ಏಕ ಬಳಕೆ ಪ್ಲಾಸ್ಟಿಕ್ ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ಜನಜಾಗೃತಿ ಮೂಡಿಸಲಾಯಿತು.

    ಪದ್ಮನಾಭನಗರ ವಿಭಾಗದ ಗಣೇಶ ಮಂದಿರ ವಾರ್ಡ್, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ, ಬಿಟಿಎಂ ಬಡಾವಣೆಯ ಮಡಿವಾಳ ಮಾರುಕಟ್ಟೆ, ಬಸವನಗುಡಿಯ ಕತ್ರಿಗುಪ್ಪೆ, ವಿಜಯನಗರದ ಜಿಟಿ ಮಾಲ್, ಜಯನಗರದ ಸಾರಕ್ಕಿ ಮಾರುಕಟ್ಟೆ ಹಾಗೂ ಚಿಕ್ಕಪೇಟೆಯ ಲಾಲ್ಬಾಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾಲಿಕೆಯನ ಅಧಿಕಾರಿ/ಸಿಬ್ಬಂದಿಗಳು, ನಾಗರಿಕ ಸಂಘಟನೆಗಳು ಹಾಗೂ ಎನ್‌ಜಿಒ ಕಾರ್ಯಕರ್ತರು ಜಾಥಾ ನಡೆಸಿ ವ್ಯಾಪಾರಿಗಳಿಗೆ ಕರಪತ್ರ ಹಂಚಿ ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ವಿನಂತಿಸಿದರು.

    ಜಾಗೃತಿ ಕಾರ್ಯಕ್ರಮದ ಭಾಗವಾಗಿ ಕಾರ್ಯಕರ್ತರು ಮಾರುಕಟ್ಟೆ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಟಕ ಪ್ರದರ್ಶಿಸಿದರು. ಪ್ಲಾಸ್ಟಿಕ್ ಬಳಸದಂತೆ ಭಿತ್ತಿಪತ್ರ ಹಾಗೂ ಕರಪತ್ರಗಳನ್ನೂ ವಿತರಿಸಲಾಯಿತು. ಹಸಿ ಕಸ, ಒಣ ಕಸ ಹಾಗೂ ಸ್ಯಾನಿಟರಿ ಕಸ ವಿಂಗಡಣೆ, ಮೂಲದಲ್ಲಿಯೆ ತ್ಯಾಜ್ಯ ಸಂಸ್ಕರಣೆ, ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಬಿಸಾಡದಿರುವುದು, ಖಾಲಿ ಸೈಟ್‌ಗಳಲ್ಲಿ ಕಸ ಹಾಕದಿರುವುದು ಸೇರಿ ಇನ್ನಿತರ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು.

    ಈ ವೇಳೆ ಮಾತನಾಡಿದ ಘನತ್ಯಾಜ್ಯ ವಿಭಾಗದ ಇಂಜಿನಿಯರ್‌ಗಳು, ಪ್ರತಿನಿತ್ಯ ಆಟೋ ಟಿಪ್ಪರ್‌ಗಳ ಮೂಲಕ ಮನೆ- ಮನೆಗೆ ತರಳಿ ಹಸಿ ಕಸ ಸಂಗ್ರಹಿಸಲಾಗುತ್ತದೆ. ವಾರಕ್ಕೆ 2 ದಿನ ಒಣ ಕಸವನ್ನು ಸಂಗ್ರಹಿಸಲಾಗುತ್ತದೆ. ಎಲ್ಲ ನಾಗರಿಕರು ರಸ್ತೆ, ಬೀದಿ ಬದಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸವನ್ನು ಬಿಸಾಡದೆ ಆಟೋ ಟಿಪ್ಪರ್‌ಗಳಿಗೆ ಕಸವನ್ನು ನೀಡಿ ನಗರವನ್ನು ಸ್ವಚ್ಛ ಸುಂದರವಾಗಿಸಲು ಪಣ ತೊಡಬೇಕಿದೆ ಎಂದು ವಿನಂತಿಸಲಾಯಿತು.

    ನಾಗರಿಕರಿಗೆ ಬಟ್ಟೆ ಬ್ಯಾಗ್ ವಿತರಣೆ:

    ಜಾಗೃತಿ ಕಾರ್ಯಕ್ರಮದ ಭಾಗವಾಗಿ ಮಡಿವಾಳ ಹಾಗೂ ಸಾರಕ್ಕಿ ಮಾರುಕಟ್ಟೆಗೆ ಬಂದಂತಹ ನಾಗರಿಕರಿಗೆ ಒಮ್ಮೆ ಬಳಸುವ ಪ್ಲಾಸಿಕ್‌ಅನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ದುಷ್ಪರಿಣಾಮ ಬೀರಲಿದೆ. ಹಾಗಾಗಿ ಬಟ್ಟೆಯಿಂದ, ನಾರಿನಿಂದ ಹಾಗೂ ಪೇಪರ್‌ನಿಂದ ತಯಾರಿಸಿದ ಬ್ಯಾಗ್‌ಗಳನ್ನು ಮಾತ್ರ ಬಳಸಲು ಅರಿವು ಮೂಡಿಸಲಾಯಿತು. ಜತೆಗೆ ಪಾಲಿಕೆಯಿಂದಲೇ ಬಟ್ಟೆ ಬ್ಯಾಗ್‌ಗಳನ್ನು ಸ್ವಯಂಸೇವಕರು ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts