More

    ಶೌಚಾಲಯದ ಜಾಗ ಅತಿಕ್ರಮಣ ತಡೆಯಿರಿ

    ರಾಯಚೂರು: ದೇವದುರ್ಗ ತಾಲೂಕಿನ ಮಲದಕಲ್ ಗ್ರಾಮದಲ್ಲಿನ ಸರ್ಕಾರಿ ಜಾಗದಲ್ಲಿರುವ ಮಹಿಳಾ ಶೌಚಾಲಯ ಜಾಗವನ್ನು ಅತಿಕ್ರಮಿಸಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
    ಸಂಘದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಬುಧವಾರ ಮನವಿ ಸಲ್ಲಿಸಿ, ಸರ್ಕಾರಿ ಜಾಗದಲ್ಲಿ ಹಲವರು ವರ್ಷಗಳಿಂದ ನಿರ್ಮಿಸಿರುವ ಮಹಿಳಾ ಶೌಚಾಲಯದ ಸ್ಥಳದಲ್ಲಿ ಮರಂ ಹಾಕಿ ಲಕ್ಷ್ಮಣ ಭೋವಿ ಅತಿಕ್ರಮಣ ಮಾಡಿದ್ದಾರೆ ಎಂದು ದೂರಿದರು.
    ಸರ್ಕಾರಿ ಜಾಗವನ್ನು ಇ ಸ್ವತ್ತು ಕಚೇರಿಯಿಂದ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದೇನೆ ಎಂದು ಲಕ್ಷ್ಮಣ ಹೇಳುತ್ತಿದ್ದು, ಸರ್ಕಾರಿ ಜಾಗವನ್ನು ಮತ್ತೊಬ್ಬರ ಹೆಸರಿಗೆ ಮಾಡುವ ಮೂಲಕ ಅಕಾರಿಗಳು ಕಾನೂನು ಉಲ್ಲಂಸಿದ್ದಾರೆ. ಕೂಡಲೇ ಜಾಗದ ಅತಿಕ್ರಮಣ ತಡೆಯಬೇಕು. ಅತಿಕ್ರಮಣ ಮಾಡಿದ ವ್ಯಕ್ತಿ ಹಾಗೂ ಅದಕ್ಕೆ ಸಹಕರಿಸಿದ ಅಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
    ನಿಯೋಗದಲ್ಲಿ ಸಂಘದ ಉಪಾಧ್ಯಕ್ಷ ಬೂದಯ್ಯಸ್ವಾಮಿ, ಪದಾಕಾರಿಗಳಾದ ಬ್ರಹ್ಮಯ್ಯ ಆಚಾರಿ, ಗನಿಸಾಬ್, ಉಮ್ಮಣ್ಣ ನಾಯಕ, ಶರಣಗೌಡ, ಪೀರ್‌ಸಾಬ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts