More

    ಫಸಲ್‌ಬಿಮಾ ಯೋಜನೆ ಲಾಭ ಪಡೆಯಿರಿ

    ಮುದಗಲ್: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ರೈತರು ಜಮೀನುಗಳ ದಾಖಲೆಗಳೊಂದಿಗೆ ಆಧಾರ್ ಜೋಡಣೆ ಮಾಡುವ ಕುರಿತು ಸ್ಥಳೀಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಆಕಾಶ ದಾನಿ, ಅಭಿಯಾನದ ಮೂಲಕ ರೈತರಿಗೆ ಶನಿವಾರ ಅರಿವು ಮೂಡಿಸಿದರು. ಹೋಬಳಿ ವ್ಯಾಪ್ತಿಯಲ್ಲಿ 1758 ರೈತರು ಯೋಜನೆಯಿಂದ ಹೊರಗುಳಿದಿದ್ದಾರೆ. ಕೂಡಲೇ ಇ-ಕೆವೈಸಿ ಮಾಡಿಕೊಳ್ಳುವ ಮೂಲಕ ಯೋಜನೆಯ ಲಾಭ ಪಡೆಯಬೇಕು ಎಂದು ತಿಳಿಸಿದರು.

    ಇದನ್ನೂ ಓದಿ:ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರಿಂದ ಕಾಡಾ ಕಚೇರಿ ಮುಂದೆ ಪ್ರತಿಭಟನೆ
    ಸ್ಥಳೀಯ ನಾಡ ಕಚೇರಿ ಹಾಗೂ ಸಮೀಪದ ಅಡವಿಬಾವಿ (ಆ) ಗ್ರಾಮಕ್ಕೆ ಖುದ್ದು ನೀಡಿ ರೈತರ ದಾಖಲೆಗಳನ್ನು ಪಡೆದು ಸ್ಥಳದಲ್ಲಿಯೇ ಇ-ಕೆವೈಸಿ ಮಾಡಿಸುವ ಮೂಲಕ ಫಸಲ್ ಬಿಮಾ ಯೋಜನೆ ಕುರಿತು ಮಾಹಿತಿ ನೀಡಿದರು. ರೈತರಾದ ಶೋಯಬ್ ಅಕ್ತಾರ್, ರಾಮನಗೌಡ, ಶಿವಾನಂದ, ಶಾಬುದ್ದೀನ್, ಯಮನೂರುಸಾಬ, ಅಮರೇಶ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts