More

    ಆಟೋ ನಾರಿಗೆ ನೆರವಿನ ಹಸ್ತ: ವಿಜಯವಾಣಿ ವರದಿ ನೋಡಿ ಸುಮಾಗೆ ಕರೆ; ಕೌಟುಂಬಿಕ ಕಷ್ಟಕ್ಕೆ ಮರುಗಿದ ಜನರು

    ಬೆಂಗಳೂರು: ರಾಜ್ಯದ ನಂ.1 ಪತ್ರಿಕೆಯಾದ ವಿಜಯವಾಣಿ ‘ನಮಸ್ತೆ ಬೆಂಗಳೂರು’ ಪುರವಣಿಯಲ್ಲಿ ಆರಂಭಿಸಿದ ಸಾರಥಿ ಕಾಲಂಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬುಧವಾರ ಪ್ರಕಟವಾದ ‘ಆಟೋ ನಾರಿ ಸುಮಾ ಸ್ವಾಭಿಮಾನಿನಿಯ ಶ್ರಮಗಾಥೆ’ ವರದಿ ಓದಿದ ನೂರಾರು ಓದುಗರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ, ಆಟೋ ನಾರಿ ಸುಮಾಗೆ ನೆರವಿನ ಹಸ್ತ ಚಾಚಲು ಕೆಲವರು ಮುಂದೆ ಬಂದಿದ್ದಾರೆ.

    ವಿಜಯವಾಣಿ ಕಚೇರಿಗೆ ಕರೆ ಮಾಡಿ ಸುಮಾ ಅವರ ಮೊಬೈಲ್​ಫೋನ್​ ನಂಬರ್ ಪಡೆದು ಖುದ್ದು ಅವರೊಟ್ಟಿಗೆ ಮಾತನಾಡಿದ್ದಾರೆ. ಜಯನಗರ 1ನೇ ಬ್ಲಾಕ್ ನಿವಾಸಿ ಕೃಷ್ಣಮೂರ್ತಿ ಎಂಬುವವರು ಸುಮಾ ಸ್ವಂತ ಆಟೋ ರಿಕ್ಷಾ ಖರೀದಿಸಲು 10 ಸಾವಿರ ರೂ. ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವುದಾಗಿ ಹೇಳಿದ್ದಾರೆ.

    ಚಿಕ್ಕಪೇಟೆ ನಿವಾಸಿ ರಾಮಚಂದ್ರ ಅವರು ಸುಮಾ ಜತೆ ಮಾತನಾಡಿ ಪ್ರತಿ ತಿಂಗಳು 10 ಕೆ.ಜಿ. ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ಹಲವರು ಸುಮಾ ಅವರ ಕಷ್ಟಕ್ಕೆ ಮರುಗಿ ವಿಜಯವಾಣಿ ಕಚೇರಿಗೆ ಕರೆ ಮಾಡಿ ಸಹಾಯ ಹಸ್ತ ಚಾಚುವ ಭರವಸೆ ನೀಡಿದ್ದಾರೆ.

    ಕಬಡ್ಡಿ ಆಡುತ್ತಿದ್ದ ವಿದ್ಯಾರ್ಥಿನಿಗೆ ಹೃದಯಾಘಾತ; ಕುಸಿದು ಬಿದ್ದು ಸಾವು

    ಪ್ರೇಮಿಗಳ ದಿನದಂದು ‘ಅಪ್ಪಿಕೋ ದನ’; ಫೆ. 14 ‘ಕೌ ಹಗ್ ಡೇ’ ಎಂದು ಆಚರಿಸಲು ಸರ್ಕಾರದ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts