More

    ಅನ್ಯಾಯದ ವಿರುದ್ಧ ಸಿಡಿದೆದ್ದ ಆಟೋ ಡಾಕ್ಟರ್ ಈಗ ಕುಟುಂಬ ಕಲ್ಯಾಣಾಧಿಕಾರಿ

    ದಾವಣಗೆರೆ: ಮೇಲಧಿಕಾರಿಗಳ ಕಿರುಕುಳಕ್ಕೆ ನಲುಗಿ ಹೆಚ್ಚು-ಕಡಿಮೆ ಕಳೆದೊಂದು ವರ್ಷದಿಂದ ವನವಾಸ ಅನುಭವಿಸಿದ್ದ, ಆಟೋ ಚಾಲನೆ ಮೂಲಕ ತಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದ ವೈದ್ಯಾಧಿಕಾರಿಯ ಹೋರಾಟಕ್ಕೆ ಕೊನೆಗೂ ಯಶಸ್ಸು ಸಿಕ್ಕಿದೆ. ವೈದ್ಯಾಧಿಕಾರಿ ಡಾ.ರವೀಂದ್ರನಾಥ್ ಅವರನ್ನು ಕೊಪ್ಪಳ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ದಾವಣಗೆರೆಯಲ್ಲಿ ಆಟೋ ಓಡಿಸುವ ಮೂಲಕ ಆಟೋ ಡಾಕ್ಟರ್ ಎನಿಸಿಕೊಂಡಿದ್ದ ರವೀಂದ್ರನಾಥ್ ಇದೀಗ ಮೂಲ ವೃತ್ತಿಗೆ ಮರಳಿದ್ದಾರೆ.

    ಮತ್ತೆ ಜಿಲ್ಲಾಮಟ್ಟದ ಅಧಿಕಾರಿಯನ್ನಾಗಿ ಸ್ಥಳ ನಿಯುಕ್ತಿ ಮಾಡಿರುವುದಕ್ಕೆ ಖುಷಿಯಾಗಿದೆ.ವಿಳಂಬವಾಗಿಯಾದರೂ ನ್ಯಾಯ ಸಿಕ್ಕಿದ್ದಕ್ಕೆ ಸಮಾಧಾನವಾಗಿದೆ.
    ಡಾ. ರವೀಂದ್ರನಾಥ

    ದಾವಣಗೆರೆ ತಾಲೂಕು ಬಾಡಾ ಗ್ರಾಮದ ಡಾ. ರವೀಂದ್ರನಾಥ ಎಂ.ಎಚ್, ತಾವು ಬಳ್ಳಾರಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿಯಾಗಿದ್ದಾಗ ಕೆಲ ಅಧಿಕಾರಿಗಳಿಂದ ನೋವು ಅನುಭವಿಸಬೇಕಾಯಿತು ಎಂದು ದೂರಿದ್ದರು. ಇಲಾಖೆಯಲ್ಲಿ ಹಿರಿತನ ಪರಿಗಣಿಸದೆ, ಜಿಲ್ಲಾ ಮಟ್ಟದ ಅಧಿಕಾರಿಯಾಗಿದ್ದ ತಮ್ಮನ್ನು ತಾಲೂಕು ಮಟ್ಟದ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಯಿತು ಎಂದು ಅಸಮಾಧಾನ ಹೊರ ಹಾಕಿದ್ದರು.

    ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರಕ್ಕೆ ತೀವ್ರ ಮುಖಭಂಗ: ಕಂಗನಾ ಕಚೇರಿ ತೆರವಿಗೆ ಬಾಂಬೈ ಹೈಕೋರ್ಟ್​ ತಡೆ!

    ತಮಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ( ಕೆಎಟಿ) ಮೊರೆ ಹೋಗಿದ್ದರು. 15 ತಿಂಗಳಿಂದ ತಮಗೆ ವೇತನ ಕೂಡ ನೀಡಿಲ್ಲ ಎಂದು ಹೇಳಿಕೊಂಡಿದ್ದರು. ಕಳೆದ ಕೆಲವು ದಿನಗಳ ಹಿಂದೆ ಲೋನ್ ಮೂಲಕ ಆಟೋ ಖರೀದಿಸಿ ಅದರ ಮೇಲೆ ‘ಐಎಎಸ್ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ’ ಎಂದು ಬರೆದುಕೊಂಡು ನಗರದಲ್ಲಿ ಆಟೋ ಚಾಲನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

    ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲೂ ಆನ್‌ಲೈನ್ ಕ್ಲಾಸ್

    ಬಡವರಿಗೆ ಆಟೊ ಕೊಡುಗೆ: ವೈದ್ಯ ವೃತ್ತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ, ತಾವು ಹಣಕಾಸು ಸಂಸ್ಥೆಯೊಂದರಲ್ಲಿ ಸಾಲ ಪಡೆದು ಖರೀದಿಸಿರುವ ಆಟೋವನ್ನು ಕಡು ಬಡವ ಆಟೋ ಚಾಲಕರೊಬ್ಬರಿಗೆ ನೀಡಲು ಡಾ. ರವೀಂದ್ರನಾಥ್ ನಿರ್ಧರಿಸಿದ್ದಾರೆ. ಈಗಾಗಲೇ ಡೌನ್ ಪೇಮೆಂಟ್​ 40 ಸಾವಿರ ರೂಪಾಯಿ ಪಾವತಿಸಿದ್ದೇನೆ. ಬಾಕಿ ಇರುವ ಸಾಲದ ಕಂತನ್ನು ಮರುಪಾವತಿಸಿ ಜೀವನ ನಿರ್ವಹಣೆ ಮಾಡಲಿ. ಇದರಿಂದ ಅವರ ಕುಟುಂಬಕ್ಕೂ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.

    ಕೇರಳದ ಸ್ಮಗ್ಲಿಂಗ್​ ರಾಣಿಗೂ, ಕರ್ನಾಟಕದ ಡ್ರಗ್ಸ್​ ದಂಧೆಗೂ ಲಿಂಕ್​: ತನಿಖೆಯಿಂದ ಬಯಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts