More

    ವರ್ಷದ ಮೊದಲ ಗ್ರಾಂಡ್​ ಸ್ಲಾಂ ಹಣಾಹಣಿಗೆ ವೇದಿಕೆ ಸಜ್ಜು: ಇಂದಿನಿಂದ ಆಸ್ಟ್ರೆಲಿಯನ್​ ಓಪನ್​

    ಮೆಲ್ಬೋರ್ನ್​: ವರ್ಷದ ಮೊದಲ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿ ಆಸ್ಟ್ರೆಲಿಯನ್​ ಓಪನ್​ಗೆ ವೇದಿಕೆ ಸಜ್ಜಾಗಿದ್ದು, ಭಾನುವಾರದಿಂದ ಮೆಲ್ಬೋರ್ನ್​ ಪಾರ್ಕ್​ನಲ್ಲಿ ರ್ಯಾಕೆಟ್​ ಸಮರ ನಡೆಯಲಿದೆ. ಹಾಲಿ ಚಾಂಪಿಯನ್​ ವಿಶ್ವ ನಂ.1 ಆಟಗಾರ ಸೆರ್ಬಿಯಾದ ನೊವಾಕ್​ ಜೋಕೊವಿಕ್​ ಪ್ರಶಸ್ತಿ ಉಳಿಸಿಕೊಳ್ಳುವುದರ ಜತೆಗೆ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲುವಿನ ಓಟವನ್ನು 25ಕ್ಕೆ ವಿಸ್ತರಿಸುವ ಹಂಬಲದಲ್ಲಿದ್ದಾರೆ.

    ಮೆಲ್ಬೋರ್ನ್​ನಲ್ಲಿ ದಾಖಲೆಯ 10 ಬಾರಿ ಪ್ರಶಸ್ತಿ ಜಯಿಸಿರುವ ಜೋಕೋ ೇವರಿಟ್​ ಎನಿಸಿದ್ದಾರೆ. ಆದರೆ 24 ಗ್ರಾಂಡ್​ ಸ್ಲಾಂ ಒಡೆಯನಿಗೆ ಸವಾಲೊಡ್ಡಬಲ್ಲ ಸ್ಪೇನ್​ನ ಕಾಲೋರ್ಸ್​ ಅಲ್ಕರಾಜ್​ ಟೂರ್ನಿಯಲ್ಲಿ 2ನೇ ಶ್ರೇಯಾಂಕ ಪಡೆದಿದ್ದು, ಇವರಿಬ್ಬರು ೈನಲ್​ನಲ್ಲಿ ಮುಖಾಮುಖಿಯಾಗುವಂಥ ಡ್ರಾವನ್ನೂ ಪಡೆದುಕೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಬೆಲಾರಸ್​ ಬೆಡಗಿ ಅರಿನಾ ಸಬಲೆಂಕಾ ಹಾಲಿ ಚಾಂಪಿಯನ್​ ಎನಿಸಿದ್ದಾರೆ.

    22 ಗ್ರಾಂಡ್​ ಸ್ಲಾಂ ಪ್ರಶಸ್ತಿ ವಿಜೇತ ಸ್ಪೇನ್​ ರೆಲ್​ ನಡಾಲ್​ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹಿಂದೆಸರಿದಿದ್ದಾರೆ, ಇದರಿಂದ ವರ್ಷದ ಬಳಿಕ ಅವರ ಪುನಾರಾಗಮನವೂ ಮುಂದೂಡಿಕೆಯಾಗಿದೆ. ಮೂರು ವರ್ಷಗಳ ಬಳಿಕ ಟೂರ್ನಿಯ ಸಿಂಗಲ್ಸ್​ ವಿಭಾಗದಲ್ಲಿ ಭಾರತೀಯ ಆಟಗಾರ ಸುಮಿತ್​ ನಗಾಲ್​ ಆಡಲಿದ್ದಾರೆ. ಪುರುಷರ ಸಿಂಗಲ್ಸ್​ನಲ್ಲಿ 36 ವರ್ಷದ ಜೋಕೋ ಮೊದಲ ಸುತ್ತಿನಲ್ಲಿ 18 ವರ್ಷದ, ಕ್ರೋವೇಷಿಯಾದ ಡಿನೊ ಪ್ರಿಜಿಮಿಕ್​ ಸವಾಲು ಎದುರಿಸಲಿದ್ದಾರೆ. ಇನ್ನೊಂದು ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆದ್ದರೆ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್​ನಲ್ಲಿ ಸಾರ್ವಕಾಲಿಕ ಅತಿಹೆಚ್ಚು ಪ್ರಶಸ್ತಿ ಜಯಿಸಿದ ವಿಶ್ವದ ಮೊದಲ ಆಟಗಾರ ಎನಿಸಲಿದ್ದಾರೆ. ಗ್ರೀಸ್​ನ ​ ಸಿಸಿಪಾಸ್​, ನಾರ್ವೆಯ ಕ್ಯಾಸ್ಪರ್​ ರುಡ್​, ರಷ್ಯಾದ ಡೆನಿಲ್​ ಮೆಡ್ವೆಡೇವ್​, ಇಟಲಿಯ ಜನ್ನಿಕ್​ ಸಿನ್ನರ್​, ಅಮೆರಿಕದ ಟೇಲರ್​ ಫ್ರಿಟ್ಜ್​, ಬೆನ್​ ಶೆಲ್ಟನ್​ರಿಂದ ನಿಕಟ ಪೈಪೋಟಿ ಎದುರಾಗುವ ನಿರೀೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts