More

    ಆಸ್ಟ್ರೇಲಿಯಾ ಟಿ20 ತಂಡದ ನೂತನ ಜೆರ್ಸಿಯ ವಿಶೇಷತೆ ಏನು ಗೊತ್ತಾ..?

    ಮೆಲ್ಬೋರ್ನ್: ಮುಂಬರುವ ಭಾರತ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡದ ಆಟಗಾರರು ವಿಶೇಷ ಜೆರ್ಸಿ ತೊಡಲಿದ್ದಾರೆ. ಆಸ್ಟ್ರೇಲಿಯಾದ ಕ್ರೀಡೆಯಲ್ಲಿ ಸ್ಥಳೀಯ ಪಾತ್ರವನ್ನು ಗುರುತಿಸುವುದು ಹಾಗೂ ಪ್ರೋತ್ಸಾಹಿಸುವುದೇ ನೂತನ ಜೆರ್ಸಿಯ ಮುಖ್ಯ ಉದ್ದೇಶ ಎನ್ನಲಾಗಿದೆ. ಮೂಲ ನಿವಾಸಿ ಮಹಿಳೆಯರಾದ ಅಂಟಿ ಫಿಯೊನಾ ಕ್ಲಾರ್ಕ್ ಹಾಗೂ ಕಂಟ್ನಿ ಹೇಗೆನ್ ನೂತನ ಜೆರ್ಸಿಯನ್ನು ವಿನ್ಯಾಸಗೊಳಿಸಿದ್ದರೆ, ಸಿಎಸ್‌ಐಸಿಎಸ್ ಉತ್ಪಾದನಾ ಸಂಸ್ಥೆ ಜೆರ್ಸಿ ತಯಾರಿಸಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

    ಅಂಟಿ ಫಿಯೊನಾ ಕ್ಲಾರ್ಕ್, ಆಸ್ಟ್ರೇಲಿಯಾ ತಂಡದೊಂದಿಗೆ 1868ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಮಾಸ್‌ಕ್ವೀಟೊ ಅವರ ವಂಶಸ್ಥರು. ಮಾಸ್‌ಕ್ವೀಟೊ ಆಸ್ಟ್ರೇಲಿಯಾದ ಮೊದಲ ವಿದೇಶ ಪ್ರವಾಸದಲ್ಲಿ ಸ್ಥಾನ ಪಡೆದ ದೇಶದ ಮೊದಲ ಮೂಲ ನಿವಾಸಿ ಎನಿಸಿದ್ದರು. ಮೂಲ ನಿವಾಸಿಗಳ, ಇತಿಹಾಸ, ಪೂರ್ವಜರ ಪರಿಚಯ, ಭೂತ ಹಾಗೂ ಭವಿಷ್ಯದ ಕುರಿತು ಜೆರ್ಸಿಯಲ್ಲಿ ಚಿತ್ರಿಸಲಾಗಿದೆ. ಇದಕ್ಕೂ ಮೊದಲು ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ಕೂಡ ಇದೇ ಮಾದರಿ ಜೆರ್ಸಿ ಧರಿಸಿ ಇಂಗ್ಲೆಂಡ್ ವಿರುದ್ಧ ಆಡಿತ್ತು.

    ಆಸ್ಟ್ರೇಲಿಯಾದ ವೇಳೆ ಮಿಚೆಲ್ ಸ್ಟಾರ್ಕ್ ನೂತನ ಜೆರ್ಸಿ ತೊಟ್ಟಿರುವ ಚಿತ್ರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಬಿಡುಗಡೆ ಮಾಡಿದೆ. ಏಕದಿನ ಸರಣಿ ಮೂಲಕ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಆರಂಭಿಸಲಿದೆ. ನವೆಂಬರ್ 27 ರಂದು ಸಿಡ್ನಿಯಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಡಿಸೆಂಬರ್ 4 ರಂದು ಮೊದಲ ಟಿ20 ಪಂದ್ಯ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts