More

    ವಿಶ್ವ ಟೆಸ್ಟ್ ಚಾಂಪಿಯನ್ನರ ಬಿಗಿ ಹಿಡಿತದಲ್ಲಿ ಪಾಕಿಸ್ತಾನ: 500 ವಿಕೆಟ್ ಸಾಧನೆಯ ಸನಿಹ ಆಸ್ಟ್ರೇಲಿಯಾದ ನಾಥನ್ ಲ್ಯಾನ್

    ಪರ್ತ್: ಸ್ಪಿನ್ನರ್ ನಾಥನ್ ಲ್ಯಾನ್ (66ಕ್ಕೆ 3) ಬಿಗಿ ದಾಳಿ ಹಾಗೂ ಇತರ ಬೌಲರ್‌ಗಳ ಸಂಘಟಿತ ನಿರ್ವಹಣೆಯ ಬಲದಿಂದ ಆತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ಎದುರು ಸಂಪೂರ್ಣ ಹಿಡಿತ ಸಾಧಿಸಿದೆ.

    ಪರ್ತ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶನಿವಾರ 2 ವಿಕೆಟ್‌ಗೆ 132 ರನ್‌ಗಳಿಂದ 3ನೇ ದಿನದ ಆಟ ಮುಂದುವರಿಸಿದ ಪಾಕ್, 101.5 ಓವರ್‌ಗಳಲ್ಲಿ 271 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಕ್ತಾಯಗೊಳಿಸಿತು. 216 ಮುನ್ನಡೆ ಸಾಧಿಸಿದರೂ ಾಲೋಆನ್ ಹೇರದ ಆಸೀಸ್ ದಿನದಂತ್ಯಕ್ಕೆ
    ದ್ವಿತೀಯ ಇನಿಂಗ್ಸ್‌ನಲ್ಲಿ 33 ಓವರ್‌ಗಳಲ್ಲಿ 2 ವಿಕೆಟ್‌ಗೆ 84 ರನ್‌ಗಳಿಸಿ ಭರ್ತಿ 300 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. 3ನೇ ವಿಕೆಟ್‌ಗೆ ಉಸ್ಮಾನ್ ಖವಾಜ (34*) ಹಾಗೂ ಸ್ಟೀವನ್ ಸ್ಮಿತ್ (43*) 79 ರನ್ ಸೇರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಪಾಕಿಸ್ತಾನ: 101.5 ಓವರ್‌ಗಳಲ್ಲಿ 271 (ಬಾಬರ್ 21, ಶಕೀಲ್ 28, ಆಘಾ28*, ಲ್ಯಾನ್ 66ಕ್ಕೆ3, ಕಮ್ಮಿನ್ಸ್ 35ಕ್ಕೆ2, ಸ್ಟಾರ್ಕ್ 68ಕ್ಕೆ 2). ಆಸ್ಟ್ರೇಲಿಯಾ: 487 ಹಾಗೂ 2 ವಿಕೆಟ್‌ಗೆ 84 (ವಾರ್ನರ್ 0, ಖವಾಜ 34*, ಲಬುಶೇನ್ 2, ಸ್ಮಿತ್ 43*).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts