More

    ವಿಶ್ವಕಪ್​ನಲ್ಲಿ ಮೊದಲ ಪಂದ್ಯದ ಆತಿಥ್ಯಕ್ಕೆ ಬೆಂಗಳೂರು ಸಜ್ಜು; ಇಂದು ಆಸೀಸ್​-ಪಾಕ್​ ಕಾದಾಟ

    ಬೆಂಗಳೂರು: ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್​ ಹಬ್ಬ ಶುರುವಾಗಿ ಎರಡು ವಾರಗಳು ಕಳೆದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹಾಲಿ ಆವೃತ್ತಿಯ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಲು ಸಜ್ಜಾಗಿದೆ. ಟೂರ್ನಿಯಲ್ಲಿ ಈಗಾಗಲೆ ಆತಿಥೇಯ ಭಾರತ ತಂಡದ ಎದುರು ಶರಣಾಗಿರುವ ತಂಡಗಳಾದ 5 ಬಾರಿಯ ಚಾಂಪಿಯನ್​ ಆಸ್ಟ್ರೆಲಿಯಾ ಮತ್ತು ಪಾಕಿಸ್ತಾನ ತಂಡಗಳು ಶುಕ್ರವಾರ ಉದ್ಯಾನನಗರಿಯ ಕ್ರಿಕೆಟ್​ ಪ್ರೇಮಿಗಳಿಗೆ ರಸದೌತಣ ಉಳಿಸಲು ಸಜ್ಜಾಗಿವೆ.

    ಆರಂಭಿಕ 2 ಪಂದ್ಯಗಳಲ್ಲಿ ಭಾರತ, ದಣ ಆಫ್ರಿಕಾ ವಿರುದ್ಧ ಸೋತಿದ್ದ ಆಸೀಸ್​, ಕಳೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆಲುವಿನ ಹಳಿ ಏರಿದೆ. ಆದರೆ ಬ್ಯಾಟಿಂಗ್​ ವಿಭಾಗದ ವೈಲ್ಯ ಪ್ಯಾಟ್​ ಕಮ್ಮಿನ್ಸ್​ ಬಳಗಕ್ಕೆ ಹಿನ್ನಡೆಯಾಗಿದೆ. ಇನ್ನು ಸ್ಪಿನ್​ ಬೌಲಿಂಗ್​ ವಿಭಾಗದಲ್ಲಿ ಆಡಂ ಜಂಪಾಗೆ ಸಮರ್ಥ ಬೆಂಬಲ ಒದಗಿಸಲು ಮ್ಯಾಕ್ಸ್​ವೆಲ್​ ಒಬ್ಬರೇ ಶ್ರಮಿಸುತ್ತಿದ್ದಾರೆ. ಬ್ಯಾಟಿಂಗ್​ನಲ್ಲಿ ಉಪನಾಯಕ ಸ್ಟೀವನ್​ ಸ್ಮಿತ್​ ವೈಫಲ್ಯ ಹಿನ್ನಡೆಯಾಗಿದೆ. ಚಿನ್ನಸ್ವಾಮಿಯ ಬ್ಯಾಟಿಂಗ್​ ಸ್ನೇಹಿ ಪಿಚ್​ ಆಸೀಸ್​ ಬ್ಯಾಟರ್​ಗಳಿಗೆ ಫಾರ್ಮ್​ ಕಂಡುಕೊಳ್ಳಲು ಸೂಕ್ತ ವೇದಿಕೆ ಎನಿಸಿದೆ.

    ಮತ್ತೊಂದೆಡೆ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಗೆದ್ದಿದ್ದ ಪಾಕ್​, ಕಳೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧದ ಹೈ&ವೋಲ್ಟೇಜ್​ ಪಂದ್ಯದಲ್ಲಿ ಹೀನಾಯವಾಗಿ ಸೋತು ಮಾನಸಿಕವಾಗಿಯೂ ಕುಗ್ಗಿದೆ. ಲಂಕಾ ಎದುರು ದಾಖಲೆಯ 344 ರನ್​ ಬೆನ್ನಟ್ಟಿ ಗೆದ್ದಿದ್ದ ಪಾಕ್​, ಭಾರತದ ಬಿಗಿ ದಾಳಿ ಎದುರು ನಾಟಕೀಯ ಕುಸಿತ ಕಂಡಿತ್ತು. ಹೀಗಾಗಿ ಆಸೀಸ್​ ವೇಗಿಗಳೂ ಪಾಕ್​ಗೆ ಸವಾಲೆನಿಸಬಹುದು. ಶಹೀನ್​ ಷಾ ಅಫ್ರಿದಿ ಸಹಿತ ಪಾಕ್​ ವೇಗಿಗಳೂ ಟೂರ್ನಿಯಲ್ಲಿ ತಮ್ಮ ವರ್ಚಸ್ಸಿಗೆ ತಕ್ಕ ಬೌಲಿಂಗ್​ ದಾಳಿ ಪ್ರದರ್ಶಿಸಲು ವಿಫಲರಾಗಿದ್ದಾರೆ. ಉಪನಾಯಕ ಹಾಗೂ ಸ್ಪಿನ್ನರ್​ ಶಾದಾಬ್​ ಖಾನ್​ ಫಾರ್ಮ್​ನಲ್ಲಿಲ್ಲದಿರುವ ಕಾರಣ, ಲೆಗ್​ ಸ್ಪಿನ್ನರ್​ ಉಸ್ಮಾನ್​ ಮಿರ್​ಗೆ ಅವಕಾಶದ ನಿರೀಕ್ಷೆ ಇದೆ.

    ಫಖರ್​, ಸಲ್ಮಾನ್​ ಅಲಭ್ಯ
    ಗಾಯಾಳು ಆರಂಭಿಕ ಫಖರ್​ ಜಮಾನ್​ ಮತ್ತು ಜ್ವರದಿಂದ ಬಳಲುತ್ತಿರುವ ಆಲ್ರೌಂಡರ್​ ಸಲ್ಮಾನ್​ ಅಲಿ ಅಘಾ ಆಸೀಸ್​ ವಿರುದ್ಧದ ಪಂದ್ಯಕ್ಕೆ ಪಾಕ್​ ತಂಡಕ್ಕೆ ಅಲಭ್ಯರಾಗಿದ್ದಾರೆ. ಇದರಿಂದ ಪಾಕ್​ ಪಂದ್ಯಕ್ಕೆ 13 ಆಟಗಾರರಿಂದ 11ರ ಬಳಗವನ್ನು ಆರಿಸಬೇಕಿದೆ.

    ಬೆಂಗಳೂರಿನ ವಿಶ್ವಕಪ್​ ಪಂದ್ಯಗಳು
    ದಿನಾಂಕ: ಪಂದ್ಯ (ಆರಂಭ)
    ಅ.20:ಆಸ್ಟ್ರೆಲಿಯಾ-ಪಾಕಿಸ್ತಾನ (ಮಧ್ಯಾಹ್ನ 2.00)
    ಅ. 26: ಇಂಗ್ಲೆಂಡ್​-ಶ್ರೀಲಂಕಾ (ಮಧ್ಯಾಹ್ನ 2.00)
    ನ. 4: ನ್ಯೂಜಿಲೆಂಡ್​-ಪಾಕಿಸ್ತಾನ (ಬೆಳಗ್ಗೆ 10.30)
    ನ. 9: ನ್ಯೂಜಿಲೆಂಡ್​-ಶ್ರೀಲಂಕಾ (ಮಧ್ಯಾಹ್ನ 2.00)
    ನ. 12: ಭಾರತ-ನೆದರ್ಲೆಂಡ್​ (ಮಧ್ಯಾಹ್ನ 2.00)

    *ಏಕದಿನ ಮುಖಾಮುಖಿ: 107
    ಆಸೀಸ್​: 69, ಪಾಕ್​ 34, ಟೈ: 1, ರದ್ದು: 3
    *ವಿಶ್ವಕಪ್​ ಮುಖಾಮುಖಿ: 10
    ಆಸ್ಟ್ರೆಲಿಯಾ: 6, ಪಾಕಿಸ್ತಾನ: 4
    ಆರಂಭ: ಮಧ್ಯಾಹ್ನ 2.00
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

    ವಿಶ್ವಕಪ್​ನಲ್ಲಿ ಮುಂದಿನ 3 ಪಂದ್ಯಗಳಿಗೆ ಕೇನ್​ ವಿಲಿಯಮ್ಸನ್​ ಅಲಭ್ಯ; ಭಾರತಕ್ಕೂ ಸಿಹಿಸುದ್ದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts