More

    ಪರೀಕ್ಷೆಗಳೇನೋ ಮುಗಿಯಿತು, ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಯಾವಾಗ? ಶಿಕ್ಷಣ ಸಚಿವರ ಪ್ರತಿಕ್ರಿಯೆ ಹೀಗಿದೆ…

    ಬೆಂಗಳೂರು: ಮಹಾಮಾರಿ ಕರೊನಾ ವೈರಸ್​ ಭೀತಿಯ ನಡುವೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದು ಯಶಸ್ವಿಯಾಗಿ ಮುಗಿದಿದೆ. ಪರೀಕ್ಷೆ ಏನೋ ಮುಗಿಯಿತು ಫಲಿತಾಂಶ ಯಾವಾಗ ಎಂಬ ಯೋಚನೆಯಲ್ಲಿರುವವರಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.​

    ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಗಸ್ಟ್ ಮೊದಲ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಹಾಗೂ ಜುಲೈ ಮೂರನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.

    ಇದನ್ನೂ ಓದಿ: VIDEO/PHOTOS| ಬಿಕಿನಿ ಬಾಡಿಬಿಲ್ಡಿಂಗ್​ ವಿಡಿಯೋ ಹರಿಬಿಟ್ಟ ನಟಿ ಚಿತ್ರಾಲ್​ಗೆ ನೆಟ್ಟಿಗರು ಹೀಗೆನ್ನಬಹುದಾ?

    ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಲಾಗುವುದು. ಪ್ರಸ್ತುತ ಪರೀಕ್ಷೆ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ ಸಚಿವರು, 55 ವರ್ಷ ಮೇಲ್ಪಟ್ಟ ಮತ್ತು ಹೃದಯ ಸಂಬಂಧಿ ಅಥವಾ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಶಿಕ್ಷಕರಿಗೆ ಮೌಲ್ಯಮಾಪನ ಕಾರ್ಯದಿಂದ ವಿನಾಯಿತಿ ನೀಡಲಾಗುತ್ತದೆ ಎಂದರು.

    ಇದಕ್ಕೂ ಮುನ್ನ ಅಂತಿಮ ಪರೀಕ್ಷಾ ದಿನವಾದ ಇಂದು ಬೆಂಗಳೂರು ಜಿಲ್ಲೆ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ, ಚಂದಾಪುರ, ಸರ್ಜಾಪುರ, ದೊಮ್ಮಸಂದ್ರ ಸೇರಿದಂತೆ ಹಲವು ಶಾಲೆಗಳ ಪರೀಕ್ಷಾ ಕೇಂದ್ರಗಳಿಗೆ ಖುದ್ದು ಶಿಕ್ಷಣ ಸಚಿವರೇ ಭೇಟಿ‌ ನೀಡಿ ಕೊರೊನಾ ವಿರುದ್ಧ ಪರೀಕ್ಷಾ ಕೇಂದ್ರಗಳಲ್ಲಿ ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲನೆ ನಡೆಸಿ ವಿಧ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

    ಇದನ್ನೂ ಓದಿ: ಕರೊನಿಲ್ ಕುರಿತು ಜನರ ಹಾದಿ ತಪ್ಪಿಸಬೇಡಿ : ಬಾಬಾ ರಾಮ್​ದೇವ್​ಗೆ ಮಹಾರಾಷ್ಟ್ರ ಸರ್ಕಾರ ಎಚ್ಚರಿಕೆ

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಇಂದು ಎಸ್ಸೆಸ್ಸೆಲ್ಸಿಯ ಕೊನೆಯ ಪರೀಕ್ಷೆಯಾಗಿದ್ದು ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಇಂದು ಗಡಿಭಾಗ ಆನೇಕಲ್ ತಾಲ್ಲೂಕಿಗೆ ಭೇಡಿ ಕೊಟ್ಟು ಪರಿಶೀಲನೆ ನಡೆಸಿದ್ದು, ಎಲ್ಲಾ ಪರೀಕ್ಷೆಗಳು ಚೆನ್ನಾಗಿ ನಡೆದಿದ್ದು ಶೇಕಡಾ 98% ರಷ್ಟು ಹಾಜರಾತಿಯಾಗಿದೆ. ಮಕ್ಕಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದಿದ್ದು ಇದು ಕೇವಲ ಶಿಕ್ಷಣ ಇಲಾಖೆಯ ಪರೀಕ್ಷೆ ಆಗಿರಲಿಲ್ಲ ಗೃಹ ಇಲಾಖೆ, ಸಾರಿಗೆ ಇಲಾಖೆ, ಆರೋಗ್ಯ ಇಲಾಖೆ, ಸ್ಕೌಟ್ ಎಂಡ್ ಗೈಡ್ಸ್, ಪೋಷಕರು ಸೇರಿದಂತೆ ಎಲ್ಲರ ಸಹಕಾರದಿಂದ ಪರೀಕ್ಷೆಗಳು ನಿರಾತಂಕವಾಗಿ ನಡೆದಿದೆ ಎಂದರು.

    ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶವು ಆಗಸ್ಟ್ ಮೊದಲವಾರದಲ್ಲಿ ಹಾಗು ಪಿಯುಸಿ ಫಲಿತಾಂಶವು ಜುಲೈ ಮೂರನೇ ವಾರದಲ್ಲಿ ಬರುವುದು ಬಹುತೇಕ ಖಚಿತ. ಇನ್ನು ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಿಂದ ಹೊರಗುಳಿದಿದ್ದ 33 ಮಕ್ಕಳಿಗೆ ಪರೀಕ್ಷೆಯಲ್ಲಿ ಆಗಸ್ಟ್ ತಿಂಗಳ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಿ ಆ ವಿದ್ಯಾರ್ಥಿಗಳನ್ನು ಫ್ರೆಶ್ ಕ್ಯಾಂಡಿಡೇಟ್ ಅಂತ ಪರಿಗಣನೆ ಮಾಡಲಾಗುತ್ತದೆ ಎಂದು ಹೇಳಿದರು.

    ಇದನ್ನೂ ಓದಿ: ಹೃದಯಾಘಾತದಿಂದ ಚಾಲಕ ಸಾವು

    ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್ ಈ ವರ್ಷ ಶುಲ್ಕವನ್ನು ಯಾವುದೇ ಕಾರಣಕ್ಕೂ ಹೆಚ್ಚಿಸುವಂತಿಲ್ಲ. ಮಾನವೀಯ ಕಾರಣಕ್ಕಾಗಿ ಶುಲ್ಕ ಹೆಚ್ಚು ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಒಂದು ವೇಳೆ ಹೆಚ್ಚು ಮಾಡಿದರೆ ದೂರು ನೀಡುವಂತೆ ಸೂಚನೆ ನೀಡಲಾಗಿದ್ದು ಆ ರೀತಿ ಏನಾದ್ರು ತೊಂದರೆ ಕೊಟ್ರೆ ಪೋಷಕರು ದೂರು ನೀಡಲಿ ಅದಕ್ಕಾಗಿ ಸಹಾಯವಾಣಿಯನ್ನು ಕೂಡ ತೆರೆಯಲಾಗಿದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

    ಅತಿ ಉದ್ದದ ‘ಶೇಷ್​​ನಾಗ್’ ರೈಲ್ವೆ ಸಂಚಾರ: ಭಾರತೀಯ ರೈಲ್ವೆಯ ಮತ್ತೊಂದು ಸಾಧನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts