More

    ಸ್ಮಾರ್ಟ್​ಫೋನ್ ಬಳಕೆದಾರರೇ ಜೋಕೆ| ಇರಲಿ ಆರೋಗ್ಯದ ಬಗ್ಗೆ ಎಚ್ಚರಿಕೆ!

    ಸ್ಮಾರ್ಟ್ ಫೋನ್ ಎಷ್ಟು ಪ್ರಯೋಜನಕರವೋ ಅಷ್ಟೇ ಹಾನಿಕಾರಕವೂ ಹೌದು. ಏಕೆಂದರೆ ಇದರ ಕಾರಣದಿಂದಲೇ ಜಗತ್ತಿನಾದ್ಯಂತ ಸುಮಾರು 34 ಲಕ್ಷ ಜನ ಕುತ್ತಿಗೆನೋವಿನಿಂದ ಬಳಲುತ್ತಿದ್ದಾರೆ ಎಂದಿದ್ದಾರೆ ಸಂಶೋಧಕರು.

    ತಲೆ ತಗ್ಗಿಸಿ ನಿರಂತರವಾಗಿ ಸ್ಮಾರ್ಟ್ ಫೋನ್ ಬಳಸುವುದರಿಂದ ಕುತ್ತಿಗೆನೋವು ಮತ್ತು ಇತರ ಸಮಸ್ಯೆಗಳು ತಲೆದೋರುತ್ತವೆ. ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ಮತ್ತು ಥಾಯ್ಲೆಂಡ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, ಸ್ಮಾರ್ಟ್ ಫೋನ್ ಬಳಸುವಾಗ ಕುತ್ತಿಗೆ, ಮಂಡಿ, ಕಾಲು ವಿವಿಧ ಭಂಗಿಗಳಲ್ಲಿರುತ್ತವೆ. ಇದರಿಂದ ನಿಧಾನವಾಗಿ ಹಲವು ನರದೌರ್ಬಲ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.

    ಥಾಯ್ಲೆಂಡ್​ನ 18ರಿಂದ 25 ವರ್ಷದೊಳಗಿನ 30 ಮಂದಿ ಸ್ಮಾರ್ಟ್ ಫೋನ್ ಬಳಕೆದಾರರನ್ನು ಈ ಸಂಶೋಧನೆಗೆ ಒಳಪಡಿಸಲಾಯಿತು. ಇವರು ದಿನದಲ್ಲಿ ಎಂಟು ಗಂಟೆ ಸ್ಮಾರ್ಟ್ ಫೋನ್​ನಲ್ಲಿ ಮುಳುಗಿರುತ್ತಾರೆ. ಸ್ಮಾರ್ಟ್ ಫೋನ್​ನಲ್ಲಿ ಏನಾದರೂ ನೋಡುವಾಗ, ಸಂದೇಶ ಬರೆಯುವಾಗ ಬಳಕೆದಾರರು ಕುತ್ತಿಗೆ ಬಗ್ಗಿಸುತ್ತಾರೆ. ಅಕ್ಕಪಕ್ಕಕ್ಕೆ ಕುತ್ತಿಗೆ ಹೊರಳಿಸುತ್ತಾರೆ. ದೇಹದ ಭಾಗ ಮತ್ತು ಕಾಲನ್ನು ಕೂಡ ವಿಚಿತ್ರವಾಗಿ ಇರಿಸಿಕೊಂಡಿರುತ್ತಾರೆ ಎಂದು ಸಂಶೋಧಕರು ಹೇಳುತ್ತಾರೆ.

    ಇದರಿಂದ ಒತ್ತಡ ಬೀಳುವುದಲ್ಲದೆ ಬೆನ್ನಿನ ಹುರಿಯ ಸುತ್ತ ಸಣ್ಣ ಕೋಶಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟುಮಾಡುತ್ತದೆ. ಸ್ಮಾರ್ಟ್​ಫೋನ್​ನ ಮಿತ ಬಳಕೆ ಮತ್ತು ಬಳಸುವಾಗ ದೇಹಭಂಗಿಯ ಕಡೆ ಗಮನ ಹರಿಸುವುದರಿಂದ ಸಮಸ್ಯೆಯನ್ನು ತುಸು ಕಡಿಮೆ ಮಾಡಬಹುದು ಎನ್ನುತ್ತಾರೆ ಸಂಶೋಧಕರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts