More

    ಉದ್ಯೋಗ ಖಾತ್ರಿಗೆ ಫೇಸ್ ಅಥೇಂಟಿಕೇಶನ್ ಹಾಜರಿ

    ಬೆಂಗಳೂರು: ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪಾರದರ್ಶಕತೆ ತರಲು ಫೇಸ್ ಅಥೇಂಟಿಕೇಶನ್ ಮೂಲಕ ಹಾಜರಾತಿ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ.

    ಉದ್ಯೋಗ ಖಾತ್ರಿಯಲ್ಲಿ ಭಾರೀ ಅವ್ಯವಹಾರ ನಡೆಯುತ್ತದೆ. ಯಂತ್ರೋಪಕರಣ ಬಳಸಿ ಕಾಮಗಾರಿ ಕೈಗೊಂಡು ಮಾನವ ದಿನಗಳಿಗೆ ಮೋಸ ಮಾಡಲಾಗುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಇದಕ್ಕೆ ಕಡಿವಾಣ ಹಾಕಲು ಜನವರಿ ತಿಂಗಳಿಂದ ನರೇಗಾ ಕೂಲಿ ಕಾರ್ಮಿಕರು ಕಾಮಗಾರಿ ಸ್ಥಳದಲ್ಲಿ ಕೂಲಿ ಕೆಲಸದಲ್ಲಿ ತೊಡಗುವ ಮುನ್ನ ಆಧಾರ್ ಹಾಗೂ ಫೇಸ್ ಅಥೆಂಟೆಕೇಶನ್ ಮೂಲಕ ಹಾಜರಾತಿ ಪ್ರಕ್ರಿಯೆ ಪ್ರಾರಂಭಿಸಲು ಈಗಾಗಲೇ ಪ್ರಯೋಗ ನಡೆಯುತ್ತಿದೆ.

    ಎನ್‌ಎಂಎಂಎಸ್ ಟ್ರಯಲ್ ಆಪ್ ಬಿಡುಗಡೆ ಮಾಡಿದ್ದು, ತಾಲೂಕುಮಟ್ಟದ ಸಿಬ್ಬಂದಿಗಳು ಇದರ ಪ್ರಯೋಗ ಮಾಡುತ್ತಿದ್ದಾರೆ. ಮೊದಲು ಕೂಲಿಕಾರ್ಮಿಕರ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಕೆವೈಸಿ ಆದ ಮೇಲೆ ಇಂಟರ್‌ನೆಟ್ ಇಲ್ಲದೇ ಇದ್ದರೂ ೇಸ್ ಅಥೆಂಟಿಕೇಶನ್ ಆಗುತ್ತದೆ. ಇದರಿಂದ ಉದ್ಯೋಗ ಖಾತ್ರಿಯಲ್ಲಿ ವಂಚನೆ ನಡೆಯುವುದನ್ನು ತಡೆಗಟ್ಟಬಹುದಾಗಿದೆ.

    ನಿಖರವಾಗಿಲ್ಲ: ಜನವರಿಯಿಂದ ಜಾರಿ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ. ಈ ಕುರಿತು ಟ್ರಯಲ್ ನಡೆಯುತ್ತಿದ್ದು, ಅಧಿಕಾರಿಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಬೇಕಾಗುತ್ತದೆ. ಮಾರ್ಗಸೂಚಿ ಬಿಡುಗಡೆ ಮಾಡಿದ ಬಳಿಕ ಫೇಸ್ಅಥೆಂಟಿಕೇಶನ್ ಹಾಜರಿ ಕಡ್ಡಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts