More

    ಗ್ರಾಪಂ ಸಿಬ್ಬಂದಿಗೆ ಇ-ಹಾಜರಾತಿ ಕಡ್ಡಾಯ

    ಬೆಂಗಳೂರು: ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗೆ ಆನ್‌ಲೈನ್ ಹಾಜರಿ ಆಧರಿಸಿ ವೇತನ ಪಾವತಿಸುವ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ.

    ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯನಿರ್ವಹಣೆ ಸುಗಮಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪಂಚತಂತ್ರ 2.0 ತಂತ್ರಾಂಶ ಅನುಷ್ಠಾನಗೊಳಿಸಲಾಗಿದೆ.

    ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಪ್ರತಿ ನಿತ್ಯ ತಮ್ಮ ಹಾಜರಾತಿ ನಮುದಿಸಲು ಪಂಚತಂತ್ರ 2.0 ತಂತ್ರಾಂಶದಲ್ಲಿ ಇ-ಹಾಜರಾತಿ ಮಾಡ್ಯೂಲ್‌ನಲ್ಲಿ ಅನುಷ್ಠಾನಗೊಳಿಸಲಾಗಿದೆ. ಜತೆಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಾಸಿಕ ವೇತನವನ್ನು ಪಂಚತಂತ್ರ 2.0 ತಂತ್ರಾಂಶದ ಮೂಲಕ ಆನ್ ಲೈನ್‌ನಲ್ಲಿ ಪಾವತಿಸಲಾಗುತ್ತದೆ.

    ಅನೇಕರು ಇ-ಹಾಜರಾತಿ ನಿಯಮಿತವಾಗಿ ಪಾಲನೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಪಂಚಾಯಿತಿ ಸಿಬ್ಬಂದಿಗಳ ವೇತನವನ್ನು ಪಂಚತಂತ್ರ 2.0 ತಂತ್ರಾಂಶದ ಇ-ಹಾಜರಾತಿ ಮಾಡ್ಯೂಲ್‌ನಲ್ಲಿ ಅಳವಡಿಸಲಾಗುವ ಹಾಜರಾತಿ ವಿವರಗಳನ್ನು ಆಧರಿಸಿ ಪಾವತಿಸಲಾಗುತ್ತದೆ. ಹಾಗಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಕಡ್ಡಾಯವಾಗಿ ಪಂಚತಂತ್ರ 2.0 ತಂತ್ರಾಂಶ ಮತ್ತು ಮೊಬೈಲ್ ಆಪ್ ಮೂಲಕ ಪ್ರತಿದಿನದ ತಮ್ಮ ಹಾಜರಾತಿಯನ್ನು ತಪ್ಪದೇ ಅಳವಡಿಸಲು ಪಂಚಾಯತ್ ರಾಜ್ ಆಯುಕ್ತರು ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts