More

    ಹಾವೇರಿ ಜಿಲ್ಲೆಗೆ ಕೆಸಿಸಿ ಬ್ಯಾಂಕ್ ತರಲು ಯತ್ನ

    ಸವಣೂರ: ಕೆಸಿಸಿ ಬ್ಯಾಂಕ್ ಅನ್ನು ಹಾವೇರಿ ಜಿಲ್ಲೆಗೆ ತರಲು ಪ್ರಯತ್ನ ಮಾಡುವುದರೊಂದಿಗೆ ಬರಗಾಲ ಪೀಡಿತ ಪ್ರದೇಶದ ಪರಿಹಾರವನ್ನು ಕೂಡಲೇ ನೀಡಲಾಗುವುದು ಎಂದು ಉಪ ಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.

    ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ 70ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಸ್ಥಳೀಯ ಕಲ್ಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಸುಭಾಸ ಗಡೆಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಿವಾನಂದ ರಾಮಗೇರಿ ಕಾರ್ಯಕ್ರಮ ಉದ್ಘಾಟಿಸಿದರು.

    ನಿರ್ದೇಶಕರಾದ ಈರಣ್ಣ ಜಾವುರ, ಎಫ್.ಎಂ. ಯರೇಶಿಮಿ, ಟಿಎಪಿಎಂಎಸ್ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ, ಪಿಎಲ್​ಡಿ ಬ್ಯಾಂಕ್ ನಿರ್ದೇಶಕ ಬಿ.ಎಸ್. ಸವೂರ, ಸಹಕಾರ ಸಂಘಗಳ ನಿಬಂಧಕಿ ಪುಷ್ಪಾ ಕಡಿವಾಳ, ಮಾರಾಟ ಸಂಘಗಳ ನಿಬಂಧಕರು ಎಫ್.ಡಿ. ರಾಯಣ್ಣವರ, ವಿವಿಧ ಸಂಘಗಳ ಅಧ್ಯಕ್ಷರಾದ ಸರೋಜಾ ರಾಯ್ಕರ, ಬಸವರೆಡ್ಡಿ ರೆಡ್ಡೇರ, ಕೋಟೆಪ್ಪ ವಗನವರ, ಎನ್.ವಿ. ಕಲಕೋಟಿ, ಮಹಾರುದ್ರಪ್ಪ ಆಲದಕಟ್ಟಿ, ದುದ್ದುಸಾಬ್ ಜಕಾತಿ, ಎಂ.ಎಚ್. ಮರಡೂರ, ಬಸವರಾಜ ಶೀಲವಂತರ, ಎನ್.ಸಿ. ಸಿದ್ದಣ್ಣವರ, ಪ್ರವೀಣ ಕರಿಗೌಡ್ರ, ಕೆಸಿಸಿ ಬ್ಯಾಂಕ್ ಹಿರಿಯ ನಿರೀಕ್ಷಕ ಎನ್.ಎಸ್. ಪೂಜಾರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts