More

    ವಸ್ತುಗಳ ಗುಣಮಟ್ಟ ಪರಿಶೀಲಿಸಿ ಅಧಿಕೃತ ಸ್ವೀಕೃತಿ ಪಡೆಯಿರಿ; ಡಿಸಿ ಸೆಲ್ವಮಣಿ ಸಲಹೆ

    ಶಿವಮೊಗ್ಗ: ಗ್ರಾಹಕರು ಖರೀದಿಸುವ ವಸ್ತು ಅಥವಾ ಉತ್ಪನ್ನಗಳ ಗುಣಮಟ್ಟ, ವಿಶೇಷತೆಗಳನ್ನು ಪರಿಶೀಲಿಸಿ ಕಡ್ಡಾಯವಾಗಿ ಅಧಿಕೃತ ಸ್ವೀಕೃತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
    ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಜಿಲ್ಲಾ ಬಳಕೆದಾರರ ವೇದಿಕೆ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
    ಖರೀದಿ ಮಾಡುವ ವಸ್ತುಗಳ ಮೇಲೆ ಸಂಬಂಧಿಸಿದ ಇಲಾಖೆಯ ಅಂಗಿಕೃತ ಆಗ್‌ಮಾರ್ಕ್ ಅನ್ನು ಗಮಿನಿಸಬೇಕು. ಖರೀದಿ ಮಾಡಿದ ಸರಕು ಮತ್ತು ಸೇವೆಗಳಲ್ಲಿ ಲೋಪಗಳು ಕಂಡುಬಂದರೆ ಅಥವಾ ತಮ್ಮ ಹಕ್ಕುಗಳ ಮತ್ತು ನ್ಯಾಯಸಮ್ಮತವಾಗಿಲ್ಲದಿದ್ದರೆ ಅದರ ವಿರುದ್ಧ ನ್ಯಾಯ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು.
    ಸೇವೆ, ಸರಕುಗಳಲ್ಲಿ ಲೋಪ ಉಂಟಾದಲ್ಲಿ ಗ್ರಾಹಕರು ತಮ್ಮ ಸಮೀಪದ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ತೆರಳಿ ದೂರು ಸಲ್ಲಿಸಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಗ್ರಾಹಕರ ಸೇವೆಗಳ ಅರಿವು ಹೊಂದಿರಬೇಕು. ವಸ್ತು ಅಥವಾ ಉತ್ಪನ್ನಗಳ ಮೇಲೆ ನಮೂದಿಸಿರುವ ಕಿರು ಮಾಹಿತಿ ಗಮನಿಸುತ್ತಿರಬೇಕು ಎಂದು ಸಲಹೆ ನೀಡಿದರು.
    ಗ್ರಾಹಕರ ಆಯೋಗದಲ್ಲಿ ಪ್ರಕರಣಗಳ ಪರಿಣಾಮಕಾರಿ ವಿಲೇವಾರಿ ವಿಷಯ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯ ಡಿ.ಯೋಗಾನಂದ ಭಾಂಡ್ಯ ವಿಶೇಷ ಉಪನ್ಯಾಸ ನೀಡಿದರು. ವೇದಿಕೆ ಅಧ್ಯಕ್ಷ ಟಿ.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್, ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಎಸ್.ನಾಗರಾಜ್, ಪ್ರೊ. ಎಚ್.ಎಂ.ಸುರೇಶ್, ಸಿ.ಎಲ್.ರಮೇಶ್, ಶೀಲಾ ಸುರೇಶ್, ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ್, ಎಂ.ಎಂ.ಜಯಸ್ವಾಮಿ, ಎಸ್.ಮಂಜುನಾಥ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts