More

    ವಿಟಿಯುನಲ್ಲಿ ಜಾಗೃತಿ ಕಾರ್ಯಾಗಾರ

    ಬೆಳಗಾವಿ: ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ವೆಬಿನಾರ್ ಮೂಲಕ ಮಹಿಳಾ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
    ಧಾರವಾಡ ಪೀಠದ ಉಚ್ಚ ನ್ಯಾಯಾಲಯದ ವಕೀಲೆ ಚೇತನಾ ಬಿರ್ಜೆ ಮಾತನಾಡಿ, ಸಂವಿಧಾನದಡಿ ಮಹಿಳೆಯರ ಹಕ್ಕುಗಳು ಹಾಗೂ ಲೈಂಗಿಕ ಕಿರುಕುಳ ಕುರಿತು ಅರಿವು ಮೂಡಿಸಿದರು.

    ಮಹಿಳೆಯರ ಹಕ್ಕುಗಳು ಹಾಗೂ ಅವರ ಘನತೆ ಕಾಪಾಡುವ ಕುರಿತು ಸಂವಿಧಾನ ಕಲಂ 14 ರಿಂದ 18, 19 ರಿಂದ 21 ಹಾಗೂ 32 ಮತ್ತು 39 ರಡಿ ಸಮಾನ ನ್ಯಾಯ ಮತ್ತು ಉಚಿತ ಕಾನೂನು ನೆರವು ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಕಾಯ್ದೆ, ಬಾಲ್ಯ ವಿವಾಹ ನಿರ್ಬಂಧ ಕಾಯ್ದೆ-1929, ಹಿಂದು ವಿವಾಹ ಕಾಯ್ದೆ-1955, ಹೆರಿಗೆ ಪ್ರಯೋಜನ ಕಾಯ್ದೆ-1961 ಕುರಿತು ಮಾಹಿತಿ ನೀಡಿದರು.

    ವಿವಿ ಕುಲಪತಿ ಡಾ.ಕರಿಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವರಾದ ಡಾ.ಎ.ಎಸ್.ದೇಶಪಾಂಡೆ, ಪ್ರೊ.ಸತೀಶ ಅಣ್ಣಿಗೇರಿ, ಹಣಕಾಸು ಅಧಿಕಾರಿ ಎಂ.ಎ.
    ಸಪ್ನಾ, ನಿವೃತ್ತ ನ್ಯಾಯಾಧೀಶ ಅಜೀತ ಸೋಲಾಪುರಕರ, ಹೇಮಂತಕುಮಾರ್, ಕಾಲೇಜುಗಳ ಆಂತರಿಕ ಸಮಿತಿಯ (ಸಿಐಸಿಸಿ)ಅಧ್ಯಕ್ಷರು, ಅಂಗಸಂಸ್ಥೆಯ ಕಾಲೇಜುಗಳ-400ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು. ವಿತಾವಿ ಮಹಿಳಾ ಘಟಕದ ಮುಖ್ಯಸ್ಥೆ ಟಿ.ಸಿ.ತನುಜಾ ಸ್ವಾಗತಿಸಿದರು. ಸರಸ್ವತಿ ಭೂಸನೂರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts