More

    ಮಕ್ಕಳ ಮೇಲೆ ಒತ್ತಡ ಹೇರಬೇಡಿ: ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪಾಲಕರಿಗೆ ಪ್ರಧಾನಿ ಮೋದಿ ಸಲಹೆ

    ನವದೆಹಲಿ: ವಾರ್ಷಿಕ ಪರೀಕ್ಷಾ ಪೇ ಚರ್ಚಾ ಅಂಗವಾಗಿ ಪ್ರಧಾನಿ ಮೋದಿ ಅವರಿಂದು (ಜ.27) ವಿದ್ಯಾರ್ಥಿಗಳು ಮತ್ತು ಅವರ ಪಾಲಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅಂಕಗಳನ್ನು ಗಳಿಸುವಂತೆ ಮಕ್ಕಳ ಮೇಲೆ ಪಾಲಕರು ಒತ್ತಡ ಹೇರಬಾರದು ಎಂದು ಸಲಹೆಯನ್ನು ನೀಡಿದರು.

    ಮಕ್ಕಳ ಮೇಲೆ ಒತ್ತಡ ಹೇರದಂತೆ ಪಾಲಕರನ್ನು ನಾನು ಒತ್ತಾಯಿಸುತ್ತೇನೆ. ಆದರೆ, ಅದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಗಳ ಮೇಲೆ ಕೀಳರಿಮೆ ಭಾವ ಇಟ್ಟುಕೊಳ್ಳಬಾರದು ಎಂದು ಪ್ರಧಾನಿ ಮೋದಿ ಹೇಳಿದರು.

    ಕುಟುಂಬದ ಸದಸ್ಯರು ತುಂಬಾ ನಿರೀಕ್ಷೆ ಇಟ್ಟುಕೊಳ್ಳುವುದು ತುಂಬಾ ಸಹಜ ಮತ್ತು ಅದರಲ್ಲಿ ಯಾವುದೇ ತಪ್ಪು ಕೂಡ ಇಲ್ಲ. ಆದರೆ, ಸಾಮಾಜಿಕ ಘನತೆಗಾಗಿ ಈ ರೀತಿಯ ನಿರೀಕ್ಷೆ ಇಟ್ಟುಕೊಂಡರೆ, ಅದು ಕಳವಳಕಾರಿ ಸಂಗತಿ ಎಂದರು.

    ಪ್ರಸ್ತುತ ನಡೆದ ಆರನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ನವದೆಹಲಿಯ ತಾಲ್ಕೊಟರಾ ಒಳಂಗಾಣ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸ್ಮಾರ್ಟ್​ ವರ್ಕ್​ ಅಥವಾ ಹಾರ್ಡ್​ ವರ್ಕ್​ ಎರಡರಲ್ಲಿ ಯಾವುದು ತುಂಬಾ ಮುಖ್ಯ? ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದನು. ಇದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ ಕೆಲವು ಅಷ್ಟೇನೂ ಸ್ಮಾರ್ಟ್​ ವರ್ಕ್​ ಮಾಡುವುದಿಲ್ಲ ಮತ್ತು ಕೆಲವರು ಬುದ್ಧಿವಂತಿಕೆಯಿಂದ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ನಾವು ಈ ಅಂಶಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಯಬೇಕು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ಅದಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

    ಬಾಯಾರಿದ ಕಾಗೆ ಎಂಬ ಕಥೆಯನ್ನು ಉಲ್ಲೇಖಿಸುವ ಮೂಲಕ ಕಠಿಣ ಪರಿಶ್ರಮ ಮತ್ತು ಸ್ಮಾರ್ಟ್ ಕೆಲಸದ ನಡುವೆ ವ್ಯತ್ಯಾಸವನ್ನು ಹೇಗೆ ಗುರುತಿಸುವುದು ಎಂಬುದರ ಕುರಿತು ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಅಲ್ಲದೆ, ಗಮನದ ಮಹತ್ವವನ್ನು ಎತ್ತಿ ತೋರಿಸಲು ಅವರು ಕ್ರಿಕೆಟ್ ಸಾದೃಶ್ಯವನ್ನು ಸಹ ಬಳಸಿದರು.

    ಕ್ರಿಕೆಟ್‌ನಲ್ಲಿರುವಂತೆ ಬ್ಯಾಟರ್ ತನಗೆ ಎಸೆದ ಚೆಂಡಿನ ಮೇಲೆ ತನ್ನ ಗಮನವನ್ನು ಕೇಂದ್ರಿಕರಿಸುತ್ತಾನೆ. ಬೌಂಡರಿಯಲ್ಲಿ ಅಭಿಮಾನಿಗಳು ಕೂಗುತ್ತಿದ್ದರು ಅದರ ಬಗ್ಗೆ ಗಮನ ನೀಡದೆ ಚೆಂಡಿನ ಮೇಲೆ ಮಾತ್ರ ತನ್ನ ಗಮನವನ್ನು ಇಟ್ಟಿರುತ್ತಾನೆ. ಅದರಂತೆ ವಿದ್ಯಾರ್ಥಿಗಳು ತಮ್ಮ ಕೆಲಸದ ಮೇಲೆ ಗಮನ ಹರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಒತ್ತಡಗಳಿಗೆ ಒಳಗಾಗಬೇಡಿ, ನಿಮ್ಮ ಕೆಲಸದ ಮೇಲೆ ಗಮನ ಇಟ್ಟಿರಿ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಸಮಯ ನಿರ್ವಹಣೆಯ ಮಹತ್ವದ ಬಗ್ಗೆ ತಿಳಿಸಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳು ತಾಯಂದಿರಿಂದ ಕೌಶಲ್ಯವನ್ನು ಕಲಿಯಬೇಕು ಎಂದು ಸಲಹೆ ನೀಡಿದರು. ನಿಮ್ಮ ತಾಯಿಯ ಸಮಯ ನಿರ್ವಹಣೆ ಕೌಶಲ್ಯವನ್ನು ನೀವು ಎಂದಾದರೂ ಗಮನಿಸಿದ್ದೀರಾ? ತಾಯಿಯು ತಾನು ಮಾಡುವ ಅಗಾಧವಾದ ಕೆಲಸವು ಅವರಿಗೆ ಎಂದಿಗೂ ಹೊರೆಯಾಗುವುದಿಲ್ಲ. ನೀವು ನಿಮ್ಮ ತಾಯಿಯನ್ನು ಗಮನಿಸಿದರೆ, ನಿಮ್ಮ ಸಮಯವನ್ನು ಹೇಗೆ ಉತ್ತಮವಾಗಿ ನಿರ್ವಹಿಸುವುದು ಎಂದು ನಿಮಗೆ ಅರ್ಥವಾಗುತ್ತದೆ ಎಂದು ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಹೇಳಿದರು.

    ಪ್ರತಿಪಕ್ಷಗಳು ಮತ್ತು ಮಾಧ್ಯಮಗಳ ಟೀಕೆಗಳನ್ನು ನೀವು ಹೇಗೆ ಎದುರಿಸುತ್ತೀರಿ ಎಂದು ಕೆಲವು ವಿದ್ಯಾರ್ಥಿಗಳು ಕೇಳಿದರು. ಅದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವದಲ್ಲಿ ಟೀಕೆ ಶುದ್ಧೀಕರಣ ಇದ್ದಂತೆ ಎಂದರು.

    ಈ ವರ್ಷ 38 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷಾ ಪೆ ಚರ್ಚಾದಲ್ಲಿ (ಪಿಪಿಸಿ) ಭಾಗವಹಿಸಲು ನೋಂದಾಯಿಸಿಕೊಂಡಿದ್ದರು. (ಏಜೆನ್ಸೀಸ್​)

    PHOTO FEATURE | ‘ಕೃಷಿ ಮೇಳ’ದ ಅದ್ದೂರಿ ಮೆರವಣಿಗೆ, ನಂದಿಕೋಲು ಪೂಜೆ ಜನರ ಕಣ್ಮನ ಸೆಳೆದದ್ದು ಹೀಗೆ…

    ಮೆರವಣಿಗೆಯೊಂದಿಗೆ ಕೃಷಿ ಮೇಳಕ್ಕೆ ಚಾಲನೆ; ಮೈಸೂರಿನಲ್ಲಿ ಮೂರು ದಿನಗಳ ಕಾಲ ಕೃಷಿ ಹಬ್ಬ

    ರಾಜ್ಯ ಮಟ್ಟದ ಕೃಷಿ ಮೇಳಕ್ಕೆ ಸಿಎಂ ಬೊಮ್ಮಾಯಿ ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts