More

    ಪರ್ವತಗಳ ನಾಡು ನೇಪಾಳದಲ್ಲಿ 6.4 ತೀವ್ರತೆಯಲ್ಲಿ ಕಂಪಿಸಿದ ಭೂಮಿ: 64 ಮಂದಿ ದುರಂತ ಸಾವು

    ಕಾಠ್ಮಂಡು: ಪಕ್ಕದ ನೇಪಾಳ ರಾಷ್ಟ್ರದಲ್ಲಿ ಶುಕ್ರವಾರ (ನ. 3) ರಾತ್ರಿ 6.4ರ ತೀವ್ರತೆಯಲ್ಲಿ ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಸುಮಾರು 64 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.

    ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಅಧಿಕಾರಿಗಳ ಪ್ರಕಾರ ನೇಪಾಳದ ಜಾಜರ್​ಕೋಟ್​ ಜಿಲ್ಲೆಯ ಲಾಮಿದಾಂದಾ ಏರಿಯಾವನ್ನು ಭೂಕಂಪನದ ಕೇಂದ್ರ ಬಿಂದು ಗುರುತಿಸಲಾಗಿದೆ. ಭೂಮಿ ನಡುಗಿದ ಪರಿಗೆ ಮನೆಯೊಳಗೆ ಇದ್ದ ಮಂದಿ ಭಯಭೀತರಾಗಿ ಹೊರಗಟೆ ಓಡೋಡಿ ಬಂದು ಕಿರುಚಾಡಿದ್ದಾರೆ. ಭೂಕಂಪನಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮನೆಯ ಗೋಡೆಗಳು ಬಿರುಕು ಬಿಟ್ಟುರುವ ದೃಶ್ಯಗಳು ವಿಡಿಯೋದಲ್ಲಿದೆ.

    ಜಾಜರ್​ಕೋಟ್​ ಜಿಲ್ಲೆಯಲ್ಲಿ 34 ಮಂದಿ ಮೃತಪಟ್ಟಿದ್ದರೆ, ಪಕ್ಕದ ರುಕುಮ್​ ಪಶ್ವಿಮ ಜಿಲ್ಲೆಯಲ್ಲಿ 35 ಸಾವುಗಳಾಗಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣದ ರಕ್ಷಣಾ ಕಾರ್ಯಾಕ್ಕಾಗಿ ದೇಶದ ಎಲ್ಲ ಮೂರು ಭದ್ರತಾ ಸಂಸ್ಥೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ನೇಪಾಳ ಪ್ರಧಾನ ಮಂತ್ರಿ ಪುಷ್ಪ ಕಮಲ್​ ದಹಲ್​ ಅವರ ಕಚೇರಿ ತಿಳಿಸಿದೆ.

    ಡೈಲೇಖ್, ಸಾಲ್ಯಾನ್ ಮತ್ತು ರೋಲ್ಪಾ ಜಿಲ್ಲೆಗಳು ಸೇರಿದಂತೆ ಇತರ ಜಿಲ್ಲೆಗಳಿಂದಲೂ ಗಾಯಗಳು ಮತ್ತು ಆಸ್ತಿ ಹಾನಿಯ ವರದಿಗಳು ಬರುತ್ತಿವೆ ಎಂದು ನೇಪಾಳದ ಗೃಹ ಸಚಿವಾಲಯ ತಿಳಿಸಿದೆ. ಗಾಯಗೊಂಡವರಿಗೆ ಜಾಜರ್​ಕೋಟ್​ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಜಾಜರ್​ಕೋಟ್​ ಜಿಲ್ಲೆ ರಾಜಧಾನಿ ಕಾಠ್ಮಂಡುವಿನಿಂದ ಸುಮಾರು 500 ಕಿ.ಮೀ ದೂರದಲ್ಲಿದೆ.

    ಅಂದಹಾಗೆ ಈ ಭೂಕಂಪನ ಎಂಬುದು ಹಿಮಾಲಯದ ಸರಣಿಯನ್ನು ಹೊಂದಿರುವ ನೇಪಾಳದಲ್ಲಿ ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಅ. 3ರಂದು ಸರಣಿ ಭೂಕಂಪನ ಸಂಭವಿಸಿತ್ತು. 6.2 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದರ ಪರಿಣಾಮ ನೇಪಾಳ ಮಾತ್ರವಲ್ಲದೆ, ಭಾರತದ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವೆಡೆ ಭೂಮಿ ನಡುಗಿದ ಅನುಭವವಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದರು.

    ಒಂದು ವರ್ಷ ಹಿಂದೆ ಹೋಗಿ ನೋಡುವುದಾದರೆ, 2022ರ ನವೆಂಬರ್​ ತಿಂಗಳಲ್ಲಿ ದೋತಿ ಜಿಲ್ಲೆಯಲ್ಲಿ 6.3 ತೀವ್ರತೆಯಲ್ಲಿ ಸಂಭವಿಸಿದ ಪ್ರಬಲ ಭೂಕಂಪನಕ್ಕೆ 6 ಮಂದಿ ಅಸುನೀಗಿದ್ದರು. ದೇಶವನ್ನು ತಲ್ಲಣಗೊಳಿಸಿದ ಭೂಕಂಪಗಳ ಸರಣಿಗಳಲ್ಲಿ ಇದು ಕೂಡ ಒಂದಾಗಿದೆ. 2015ರಲ್ಲಿ ನೇಪಾಳ ಭೂಕಂಪನಕ್ಕೆ ತತ್ತರಿಸಿ ಹೋಗಿತ್ತು. ಏಕೆಂದರೆ, ಆ ವರ್ಷ 7.8 ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು. ಇದರ ಪರಿಣಾಮ 12 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟು, ಅನೇಕ ಕುಟುಂಬಗಳು ಸರ್ವನಾಶವಾಗಿದ್ದವು. ಅಲ್ಲದೆ, ದೇಶದ 10 ಲಕ್ಷಕ್ಕೂ ಅಧಿಕ ಕಟ್ಟಡಗಳಿಗೆ ಹಾನಿಯಾಗಿತ್ತು. (ಏಜೆನ್ಸೀಸ್​)

    ಕೈಗೆ ನಾನೇ ಸಿಎಂ ಬಿಸಿತುಪ್ಪ!: ಪವರ್ ಶೇರಿಂಗ್ ವಾರ್; ವರಿಷ್ಠರ ಎಚ್ಚರಿಕೆಗೂ ಡೋಂಟ್​ಕೇರ್

    ಎನ್​ಪಿಎಸ್ ಸಿಬ್ಬಂದಿಯಲ್ಲಿ ಮೂಡಿದ ಹೊಸ ಆಶಾಭಾವ: ಕೇಂದ್ರ ಸರ್ಕಾರದ ನಿರ್ದೇಶನ, 8 ಅಧಿಕಾರಿಗಳಿಗೆ ಹಳೇ ಪಿಂಚಣಿ ಯೋಜನೆ ಲಾಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts