More

    ಖಗೋಳ ವಿದ್ಯಮಾನ ತಿಳಿಯಲು ಶಿಕ್ಷಕ ವಿ.ವಸಂತಕುಮಾರ್ ಸಲಹೆ

    ಕಂಪ್ಲಿ: ಖಗೋಳದಲ್ಲಿ ಜರುಗುವ ಅಪರೂಪದ ವಿದ್ಯಮಾನಗಳನ್ನು ಅರಿತುಕೊಳ್ಳುವಲ್ಲಿ ವಿದ್ಯಾರ್ಥಿಗಳು ಜಾಗೃತಿ ತೋರಬೇಕು ಎಂದು ಕಣ್ವಿಮ್ಮಲಾಪುರ ಗ್ರಾಮದ ಸಹಿಪ್ರಾ ಶಾಲೆ ವಿಜ್ಞಾನ ಶಿಕ್ಷಕ ವಿ.ವಸಂತಕುಮಾರ್ ಹೇಳಿದರು.

    ಶೂನ್ಯ ನೆರಳು

    ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಮಂಗಳವಾರ ಶೂನ್ಯ ನೆರಳಿನ ದಿನ ಕುರಿತು ಜಾಗೃತಿ ಉಪನ್ಯಾಸ ನೀಡಿದರು. ಸೂರ್ಯ ನಮ್ಮ ತಲೆಯ ಮೇಲೆ ನೇರವಾಗಿ ಬಂದಾಗ ನೆರಳು ನೇರವಾಗಿ ನಮ್ಮ ಮೇಲೆಯೇ ಇರುತ್ತದೆ. ನೆರಳು ಗೋಚರವಾಗದಿರುವುದಕ್ಕೆ ಶೂನ್ಯ ನೆರಳು ಎನ್ನಲಾಗುತ್ತದೆ.

    ಇದನ್ನೂ ಓದಿ:ವಿದ್ಯಮಾನಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಳ್ಳಿ

    ನಮ್ಮ ಜಿಲ್ಲೆಯಲ್ಲಿ ಮೇ 1ರಂದು ಸಂಪೂರ್ಣ ಶೂನ್ಯ ನೆರಳನ್ನು ಗಮನಿಸಬಹುದಾಗಿದೆ. ಖಗೋಳದಲ್ಲಿ ಜರುಗುವ ಕೌತುಕದ ಮಾಹಿತಿ ಅರಿಯುವಲ್ಲಿ ವಿದ್ಯಾರ್ಥಿಗಳು ಜಾಗೃತಿ ತೋರಬೇಕು. ವೈಜ್ಞಾನಿಕ ಮತ್ತು ವೈಚಾರಿಕ ಪ್ರಜ್ಞೆಯನ್ನು ಅಳವಡಿಸಿಕೊಳ್ಳಬೇಕು ಎಂದರು.

    ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ ಮೋರೆ, ವಿದ್ಯಾರ್ಥಿಗಳಾದ ಹುಲಿಗೆಮ್ಮ, ಎಸ್.ದೇವಿ, ಬಿ.ಯಶೋಧಾ, ಪಾರ್ವತಿ, ಕಾವೇರಿ, ಶ್ರೀನಿವಾಸ್, ಮನೋಜ್, ಅಭಿಷೇಕ್, ರಾಘವೇಂದ್ರ, ವಿನಯ್, ಸಂದೀಪ್, ಪ್ರವೀಣ್, ದೀಲೀಪ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts