More

    ಭಾರತದ ಆಗಸದಲ್ಲಿ ಇಂದು ರಾತ್ರಿ ಖಗೋಳ ಚಮತ್ಕಾರ; ಒಂದೇ ಗೆರೆಯಲ್ಲಿ ಚಂದ್ರ ಮತ್ತಿತರ ಐದು ಗ್ರಹಗಳ ದರ್ಶನ

    ನವದೆಹಲಿ: ಭಾರತದ ಆಗಸದಲ್ಲಿ ಭಾನುವಾರ ರಾತ್ರಿ ಖಗೋಳ ಚಮತ್ಕಾರವೊಂದು ಸಂಭವಿಸಲಿದೆ. ಸುಂದರವಾದ ಅರ್ಧ ಚಂದ್ರನ ಜತೆಗೆ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿಗಳು ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳಲಿವೆ. ಈ ಚಮತ್ಕಾರ ಬರಿಗಣ್ಣಿಗೇ ಗೋಚರವಾಗಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

    ಇಂದು ರಾತ್ರಿ ಈ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ವಿಫಲರಾದರೆ ಮತ್ತೊಮ್ಮೆ ಈ ಅವಕಾಶ ಸಿಗುವುದಿಲ್ಲ. ಏಕೆಂದರೆ, ಈ ಚಮತ್ಕಾರದ ಬಳಿಕ ಚಂದ್ರ ಮತ್ತು ಇತರೆ ಗ್ರಹಗಳು ಚದುರಿಹೋಗಲಿವೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ರೆಸ್ಟೊರೆಂಟ್​ ಬಾಗಿಲು ಮುಚ್ಚಿಸಿದ ಪೊಲೀಸರ ವಿರುದ್ಧ ಮಾಲೀಕನ ಸೇಡು; ಎಫ್​ಐಆರ್​ ದಾಖಲು

    ಅಮೆರಿಕದಲ್ಲಿ ಜು.25ರವರೆಗೆ ಗೋಚರ: ಅಮೆರಿಕದಲ್ಲಿ ಮುಂಜಾನೆ ವೇಳೆ ಚಂದ್ರ ಮತ್ತು ಈ ಐದು ಗ್ರಹಗಳು ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳಲಿವೆ. ಜು.25ರವರೆಗೆ ಚಂದ್ರನಿಲ್ಲದೆ ಗ್ರಹಗಳು ಮಾತ್ರ ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಖಗೋಳಶಾಸ್ತ್ರ ಶಿಕ್ಷಕ ಜೆಫ್ರಿ ಹಂಟ್​ ತಿಳಿಸಿದ್ದಾರೆ.

    ನೋಡುವುದು ಹೇಗೆ: ಸೂರ್ಯೋದಯಕ್ಕೆ ಒಂದು ಗಂಟೆ ಮುಂಚಿತವಾಗಿ ಆಗಸದತ್ತ ಮುಖ ಮಾಡಿದರೆ ಪ್ರದೀಪ್ಯಮಾನವಾಗಿ ಬೆಳಗುತ್ತಿರುವ ಗ್ರಹಗಳು ಕಾಣಿಸುತ್ತವೆ. ಶುಕ್ರ ಗ್ರಹ ಈಶಾನ್ಯ ಭಾಗದಲ್ಲಿದ್ದರೆ ಆಗ್ನೇಯ ಭಾಗದಲ್ಲಿ ಮಂಗಳ ಗ್ರಹ ಏಕಾಂಗಿಯಾಗಿ ಕಾಣಿಸಿಕೊಳ್ಳಲಿದೆ. ಗುರು ಮತ್ತು ಶನಿಗ್ರಹಗಳು ನೈಋತ್ಯ ಭಾಗದಲ್ಲಿ ಕಾಣಿಸಿಕೊಳ್ಳಲಿವೆ. ಇವೆಲ್ಲವೂ ಕೇವಲ 3ರಿಂದ 4 ನಿಮಿಷಗಳವರೆಗೆ ಕಾಣಿಸುತ್ತವೆ ಎಂದು ಹಂಟ್​ ವಿವರಿಸಿದ್ದಾರೆ.

    15 ಸಾವಿರ ರೂ. ಪಡೆದು ಅಪ್ರಾಪ್ತ ಬಾಲಕಿಗೆ ಗರ್ಭಪಾತ ಮಾಡಿ ಭ್ರೂಣವನ್ನು ಕಸದ ತೊಟ್ಟಿಗೆ ಎಸೆದ ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts