More

    VIDEO| ಬಾಹ್ಯಾಕಾಶದಲ್ಲಿ ಅತಿ ಉದ್ದದ ಹಾರಾಟ ನಡೆಸಿದ ಏಕೈಕ ಮಹಿಳೆ; 328 ದಿನಗಳ ನಂತರ ಭೂಮಿಗೆ ಮರಳಿದ ಅಮೆರಿಕ ಗಗನಯಾತ್ರಿ

    ನವದೆಹಲಿ: ಬಾಹ್ಯಾಕಾಶದಲ್ಲಿ 328 ದಿನ ಕಳೆದ ಅಮೆರಿಕದ ಗಗನಯಾತ್ರಿ ಕ್ರಿಸ್ಟಿನಾ ಕೋಚ್ ವಿಶ್ವದ ಎರಡನೇ ಅತಿ ದೊಡ್ಡ ಗಗನಯಾತ್ರೆ ಕೈಗೊಂಡವರು ಎಂದು ದಾಖಲೆ ಬರೆದಿದ್ದಾರೆ. ಅಮೆರಿಕದ ಗಗನಯಾತ್ರಿಗಳ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದಿದ್ದಾರೆ.

    “ದಂಡಯಾತ್ರೆ 61” ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ)ದ ಫ್ಲೈಟ್ ಇಂಜಿನಿಯರ್ ಕ್ರಿಸ್ಟಿನಾ ಕೋಚ್ ಅವರು ಶುಕ್ರವಾರ ಟೆಕ್ಸಾಸ್​ ಹೂಸ್ಟನ್ನಲ್ಲಿರುವ ಎಲಿಂಗ್ಟನ್ ಮೈದಾನಕ್ಕೆ ಮರಳಿದರು.

    ಬಾಹ್ಯಾಕಾಶದಲ್ಲಿ ಅತಿ ಉದ್ದದ ಹಾರಾಟ ನಡೆಸಿದ ಏಕೈಕ ಮಹಿಳೆ ಎಂಬ ದಾಖಲೆ ಮಾಡಿದ ನಾಸಾ ಗಗನಯಾತ್ರಿ ಕ್ರಿಸ್ಟಿನಾ ಕೋಚ್ ಗುರುವಾರ ಭೂಮಿಗೆ ಮರಳಿದರು.

    ಕಜುಕಿಸ್ತಾನ – ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಗೆ ಪ್ಯಾರಚೂಟ್​ ಮೂಲಕ ಇಳಿದ ಸುಮಾರು 24 ಗಂಟೆಗಳ ನಂತರ ನಾಸಾ ವಿಮಾನದಲ್ಲಿ ಹೂಸ್ಟನ್‌ನ ಎಲಿಂಗ್ಟನ್ ಮೈದಾನಕ್ಕೆ ಕ್ರಿಸ್ಟಿನಾ ಕೋಚ್ ಆಗಮಿಸಿದರು.

    ಪರಿಭ್ರಮಣ ಪ್ರಯೋಗಾಲಯ (orbiting laboratory)ದಲ್ಲಿದ್ದ ಕೋಚ್​ ಅವರು, ಸುಮಾರು 22 ಕೋಟಿ ಕಿ.ಮೀ.ಗಳನ್ನು ಸಂಚರಿಸಿದ್ದಾರೆ. ಇದು 291 ಬಾರಿ ಚಂದ್ರನ ಸುತ್ತಲು ಸುತ್ತಿದಂತೆ. ಈ ದೊಡ್ಡ ಪ್ರಯಾಣದಲ್ಲಿ ಡಜನ್​ಗಟ್ಟಲೆ ವಾಹನಗಳು ಬಾಹ್ಯಾಕಾಶಕ್ಕೆ ಆಗಮಿಸಿದ್ದನ್ನು ಮತ್ತು ಬಾಹ್ಯಾಕಾಶ ನೌಕೆಗಳ ನಿರ್ಗಮನವನ್ನು ನೋಡಿದ್ದಾರೆ.

    ಅಲ್ಲದೆ ಇವರು ಸ್ಪೇಸ್​ ಸ್ಟೇಷನ್​ನಲ್ಲಿ ಕುಕೀಸ್​ ಮಾಡಿಕೊಂಡ ಮೊದಲ ಮಹಿಳೆ ಎಂಬ ದಾಖಲೆಯು ಅವರದ್ದು. 2019ರ ಡಿಸೆಂಬರ್​ನಲ್ಲಿ “ನಾವು ಈ ಬಾರಿಯ ಕ್ರಿಸ್​ಮಸ್​ಗೆ ಇಲ್ಲಿಯೇ ಸ್ಪೇಸ್​ ಕುಕೀಸ್​ ಮತ್ತು ಹಾಲು ತಯಾರು ಮಾಡಿದ್ದೇವೆ. ಎಲ್ಲರಿಗೂ ರಜೆ ದಿನಗಳು ಸಂತೋಷ ತರಲಿ ಎಂದು ಅಂತಾರಾಷ್ಟ್ರೀಯ ಸ್ಪೇಸ್​ ಸ್ಟೇಷನ್​ನಿಂದ ಹಾರೈಸುತ್ತೇನೆ” ಎಂದು ಟ್ವೀಟ್​ ಮಾಡಿದ್ದರು.

    ಭೂಮಿಗೆ ಮರಳಿ ಬಂದ ಮೇಲೆ ತಮ್ಮ ಪ್ರಯಾಣದ ಬಗ್ಗೆ, ಈ ನನ್ನ ಪ್ರಯಾಣ ಎಲ್ಲರದ್ದೂ ಹೌದು. ಎಲ್ಲರ ಕನಸನ್ನು ಕೊಂಡೊಯ್ಯುವ ಈ ಅವಕಾಶ ನನಗೆ ದೊರೆತಿದೆ. ನಮ್ಮ ಮಿಷನ್​ನಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು.ನಾನು ಭೂಮಿಗೆ ಕೃತಜ್ಞತೆಯಿಂದ ಮರಳುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts