More

    ಕರೊನಾ ಸೋಂಕಿನ ತಾತ್ಕಾಲಿಕ ಬಂದ್​ನಿಂದ ಬೇಸರವೇ? ಮೇಷ ರಾಶಿಯವರು ಹೀಗೆ ಮಾಡಿದರೆ ಬೋರ್​ ಆಗುವುದಿಲ್ಲ

    ನವದೆಹಲಿ: ಕಿಲ್ಲರ್ ಕರೊನಾದಿಂದಾಗಿ ಜನರು ಮನೆಯಲ್ಲಿಯೇ ಜಾಂಡ ಹೂಡುವಂತಹ ಸ್ಥಿತಿ ಇಡೀ ದೇಶವಲ್ಲದೆ, ಜಾಗತಿಕವಾಗಿ ನಿರ್ಮಾಣವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾ ಮನೆಯಲ್ಲಿಯೇ ಇರುವುದೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಬೇಸರ ಅನಿಸದೇ ಇರದು.

    ಇದಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ. ಬೇಸರವನ್ನು ತೊಡೆದುಹಾಕುವ ಪ್ರಯತ್ನವಾಗಿ ಆಸ್ಟ್ರೋಲಜಿ(ಜ್ಯೋತಿಷ್ಯಶಾಸ್ತ್ರ) ಮೀಮ್ಸ್​ ಖಾತೆಯು ಆಯಾ ರಾಶಿಗೆ ಅನುಗುಣವಾಗಿ ಒಳ್ಳೆಯ ಸಲಹೆಗಳನ್ನು ನೀಡಿದ್ದು, ಅದನ್ನು ಪಾಲಿಸಿದರೇ ನಿಮ್ಮ ಬೇಸರವೆಲ್ಲ ಮಂಗಮಾಯವಾಗಲಿದೆ.

    12 ರಾಶಿಗಳಿಗೆ ಹಾಸ್ಯಾತ್ಮಕ ಸಲಹೆಯುಳ್ಳ ಪಟ್ಟಿಯೊಂದನ್ನು ಬರಹಗಾರ್ತಿ ಕರ್ಟೆನಿ ಪರ್ಕಿನ್ಸ್​ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, ಸಲಹೆಯೊಂದನ್ನು ನೀಡಿದ್ದು, ಮೀಮ್ಸ್​ ಖಾತೆ ಹೊರತಾಗಿ ಆರೋಗ್ಯ ಸಲಹೆಗಾಗಿ ವೈದ್ಯರನ್ನೇ ಸಂಪರ್ಕಿಸಿ, ಜೋತಿಷ್ಯವನ್ನು ನಂಬುವುದಕ್ಕಿಂತ ಹೆಚ್ಚಾಗಿ ವೈದ್ಯರನ್ನೇ ನಂಬಿ ಎಂದು ತಿಳಿಸಿದ್ದಾರೆ.

    ಇನ್ನು ರಾಶಿ ವಿಚಾರಕ್ಕೆ ಬರುವುದಾದರೆ, ಮೊದಲಿಗೆ ಮೇಷ ರಾಶಿಯವರು ಹಠಾತ್ ಪ್ರವೃತ್ತಿ, ಭಾವೋದ್ರಿಕ್ತ ಹಾಗೂ ಅಧಿಕಾರ ಚಲಾಯಿಸುವ ಸ್ವಭಾವ ಹೊಂದಿರುವುದರಿಂದ ಅವರು ಜಂಪಿಂಗ್​ ಜಾಕ್ಸ್ ಮಾಡುವುದು ಉತ್ತಮ ಎಂದು ಕರ್ಟೆನಿ ತಿಳಿಸಿದ್ದಾರೆ. ಅತಿಯಾದ ಜನರಿಲ್ಲದ ಸಮಯದಲ್ಲಿ ನಿಮ್ಮ ನೆರೆಹೊರೆಯ ಸುತ್ತಾ ಅಡ್ಡಾಡಿ ಮತ್ತು ನಿಮ್ಮನ್ನು ಯಾರಾದರೂ ನೋಡಿದ್ದಲ್ಲಿ ಅವರಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಿ ಎಂದಿದ್ದಾರೆ.

    ಇನ್ನುಳಿದ ರಾಶಿಗಳ ಬಗ್ಗೆ ತಿಳಿಯಲು ವಿಜಯವಾಣಿ ವೆಬ್​ಸೈಟ್​ ಅನ್ನು ಫಾಲೋ ಮಾಡುತ್ತಿರಿ. (ಏಜೆನ್ಸೀಸ್​)

    ಕರೊನಾ ಸೋಂಕಿನ ತಾತ್ಕಾಲಿಕ ಬಂದ್​ನಿಂದ ಬೇಸರವೇ? ಮೇಷ ರಾಶಿಯವರು ಹೀಗೆ ಮಾಡಿದರೆ ಬೋರ್​ ಆಗುವುದಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts