More

    ನಿಮ್ಮ ಹಣ ಸುರಕ್ಷಿತವಾಗಿರಲಿದೆ, ಯಾರಿಗೂ ನಷ್ಟವಾಗುವುದಿಲ್ಲ: ಯೆಸ್​ ಬ್ಯಾಂಕ್​ ಗ್ರಾಹಕರಿಗೆ ವಿತ್ತ ಸಚಿವೆ ಭರವಸೆ

    ನವದೆಹಲಿ: ಯೆಸ್​ ಬ್ಯಾಂಕ್​ ಆರ್ಥಿಕವಾಗಿ ದಿವಾಳಿಯಾಗಿರುವ ಬೆನ್ನಲ್ಲೇ ಆತಂಕಕ್ಕೀಡಾಗಿರುವ ಗ್ರಾಹಕರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಧೈರ್ಯ ತುಂಬಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿ, ನಿಮ್ಮ ಹಣ ಸುರಕ್ಷಿತವಾಗಿರಲಿದೆ ಎಂದು ಯೆಸ್​ ಬ್ಯಾಂಕ್​ನ ಪ್ರತಿಯೊಬ್ಬ ಠೇವಣಿದಾರರಿಗೆ ನಾನು ಖಚಿತಪಡಿಸಲು ಬಯಸುತ್ತೇನೆ. ನಾನು ನಿರಂತರವಾಗಿ ಆರ್​ಬಿಐ ಸಂಪರ್ಕದಲ್ಲಿದ್ದೇನೆ ಎಂದು ನಿರ್ಮಾಲಾ ಸೀತಾರಾಮನ್​ ತಿಳಿಸಿದರು.

    ಯೆಸ್​ ಬ್ಯಾಂಕ್​ ಠೇವಣಿದಾರರಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ಆರ್​ಬಿಐ ಗವರ್ನರ್​ ನನಗೆ ಖಚಿತ ಭರವಸೆ ನೀಡಿದ್ದಾರೆ. ಆರ್​ಬಿಐ ಮತ್ತು ಸರ್ಕಾರ ಎರಡು ಕೂಡ ಯೆಸ್​ ಬ್ಯಾಂಕ್​ ಸಮಸ್ಯೆಯನ್ನು ವಿವರವಾಗಿ ಪರಿಶೀಲಿಸಲಿದೆ ಎಂದರು.

    ಯೆಸ್​ ಬ್ಯಾಂಕ್​ ಸಮಸ್ಯೆಗೆ ಶೀಘ್ರ ಪರಿಹಾರ ನೀಡಲು ಆರ್​ಬಿಐ ಕಾರ್ಯನಿರ್ವಹಿಸುತ್ತಿದೆ. ಠೇವಣಿದಾರು, ಬ್ಯಾಂಕ್​ ಮತ್ತು ಆರ್ಥಿಕತೆಯ ಹಿತಾಶಕ್ತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗಿದೆ. 50 ಸಾವಿರ ರೂ. ಒಳಗೆ ವಿತ್​ಡ್ರಾ ಮಾಡಿಕೊಳ್ಳಲು ಯೆಸ್​ ಬ್ಯಾಂಕ್​ ಗ್ರಾಹಕರಿಗೆ ತಕ್ಷಣ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

    ಸುಸ್ಥಿ ಸಾಲಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಯೆಸ್​ ಬ್ಯಾಂಕ್​ ಅನ್ನು ಭಾರತೀಯ ರಿಸರ್ವ್​ ಬ್ಯಾಂಕ್​(ಆರ್​ಬಿಐ) ತನ್ನ ಸುಪರ್ದಿಗೆ ತೆಗೆದುಕೊಂಡು, ಬ್ಯಾಂಕ್​ ಆಡಳಿತ ಮಂಡಳಿಯನ್ನು ಸೂಪರ್​ ಸೀಡ್​ ಆಗಿ ಮಾಡಿದೆ. ನಗದು ವಿತ್​ಡ್ರಾ ಮಿತಿಯನ್ನು 50 ಸಾವಿರಕ್ಕೆ ನಿಗದಿಗೊಳಿಸಲಾಗಿದ್ದು, ಸಾವಿರಾರು ಗ್ರಾಹಕರು ಹಣ ತೆಗದುಕೊಳ್ಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಷೇರು ಮಾರುಕಟ್ಟೆಯಲ್ಲೂ ಯೆಸ್​ ಬ್ಯಾಂಕ್​ ಪಾಲು ತೀವ್ರ ಕುಸಿತ ಕಂಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts