More

    ಕ್ರೀಡೆಯಲ್ಲಿ ಪ್ರತಿಸ್ಪರ್ಧೆಯ ಮನಸ್ಸು ಗೆಲ್ಲಿ

    ಕೂಡ್ಲಿಗಿ: ಕ್ರೀಡೆಗಳು ಆರೋಗ್ಯವಾಗಿರಲು ಸಹಾಯ ಮಾಡುತ್ತವೆ. ಅಲ್ಲದೆ ಮನಸ್ಸನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ ಎಂದು ವೃತ್ತ ಆರಕ್ಷಕ ನಿರೀಕ್ಷಕ ತಳವಾರ ಸುರೇಶ್ ಹೇಳಿದರು.

    ಕ್ರೀಡೆಗಳಿಂದ ಮನಸ್ಸು ಉಲ್ಲಾಸ

    ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಶನಿವಾರ ಕೂಡ್ಲಿಗಿ ಉಪವಾಲಿಬಾಲ್ ಅಸೋಸಿಯೇಷನ್ ಹಾಗೂ ಅಲ್-ಟೆಕ್ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಗಳಲ್ಲಿ ಸೋಲು, ಗೆಲುವು ಸಾಮಾನ್ಯ. ಎರಡನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಅಲ್ಲದೆ ಕ್ರೀಡೆಯಿಂದ ಪ್ರತಿಸ್ಪರ್ಧೆಗಳ ಹೃದಯವನ್ನು ಗೆಲ್ಲುವಂತಾಗಲಿ. ಇದರಿಂದ ಪರಸ್ಪರ ಸ್ನೇಹ, ಬಾಂಧವ್ಯಗಳು ವೃದ್ಧಿಸುತ್ತವೆ ಎಂದರು.

    ಇದನ್ನೂ ಓದಿ: ಮಗುವಿಗೆ ಸ್ಕ್ರೂ, ಬ್ಯಾಟರಿ ತಿನ್ನಿಸಿ ಕೊಲೆ ಮಾಡಿದ ಯುವತಿ; ಬಂಧನ

    ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಗಳ ತೀರ್ಪುಗಳು ಕ್ಲಿಷ್ಟಕರವಾಗಿರುತ್ತವೆ. ಆದರೆ ತೀರ್ಪುಗಾರರು ನ್ಯಾಯಯುತ ಜಡ್ಜ್‌ಮೆಂಟ್ ನೀಡಬೇಕು. ರಾಜ್ಯದಿಂದ ಅನೇಕ ತಂಡಗಳು ಸ್ಪರ್ಧೆಗೆ ಬಂದಿವೆ. ಎಲ್ಲರೂ ಕ್ರೀಡಾ ಮನೋಭಾವದಿಂದ ಆಟವಾಡಿ ಎಂದು ಸಲಹೆ ನೀಡಿದರು.
    ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪಾಲ್ತೂರ್ ಶಿವರಾಜ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಉಪ ಪ್ರಾಚಾರ್ಯ ಹುಲಿಕೇರಿ ಬಸವರಾಜಪ್ಪ, ಉಪನ್ಯಾಸಕ ಇಮಾಮ್ ಸಾಹೇಬ್, ಅಲ್ ಟೆಕ್ ನ ಇಬ್ರಾಹಿಂ ಅಲಿ, ಷಣ್ಮುಖಪ್ಪ, ಎಚ್.ಡಿ. ಉಡುಚಪ್ಪ, ಭಾಸ್ಕರ್‌ನಾಯ್ಕ, ಕೂಡ್ಲಿಗಿ ವಾಲಿಬಾಲ್ ಅಸೋಸಿಯೇಷನ್‌ನ ವೆಂಕಟೇಶ್, ಕುಮಾರಸ್ವಾಮಿ, ಇಸ್ಮಾಯಿಲ್, ದಾದು ಇತರರಿದ್ದರು. ಸ್ಪರ್ಧೆಯಲ್ಲಿ ರಾಜ್ಯದ 15ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts