More

    ಸಂಘ ಲಾಭದ ಹಳಿಗೆ ತರಲು ಕಾಯ್ದೆ

    ಅಥಣಿ: ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಮತ್ತು ನಿಯಮಗಳು 1960 ಹಾಗೂ ಕರ್ನಾಟಕ ಸೌಹಾರ್ದ ಸಹಕಾರ ಸಂಘಗಳ ಕಾಯ್ದೆ 1997 ಮತ್ತು ನಿಯಮಗಳು 2004ಕ್ಕೆ ಪ್ರಸ್ತುತಕ್ಕೆ ಅನುಗುಣವಾಗಿ ಕಾನೂನಾತ್ಮಕವಾಗಿ ತಿದ್ದುಪಡಿ ತರಲು ಸಮಿತಿ ರಚನೆಯಾಗಿದೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಕೃಷಿಯೇತರ ಪತ್ತಿನ ವಿವಿಧೋದ್ದೇಶಗಳ ಸಹಕಾರಿ ಸೌಹಾರ್ದ ಸಂಘಗಳ ಉಳಿವಿಗಾಗಿ ಶ್ರಮಿಸುವುದಾಗಿ ಸಮಿತಿ ಅಧ್ಯಕ್ಷ ಮತ್ತು ಶಾಸಕ ಲಕ್ಷ್ಮಣ ಸವದಿ ಹೇಳಿದರು.

    ಪಟ್ಟಣದ ಶಿವಣಗಿ ಭವನದಲ್ಲಿ ಬಾಗಲಕೋಟೆ ಜಿಲ್ಲೆ ಕೃಷಿಯೇತರ ಪತ್ತಿನ ಸಹಕಾರಿ ಸಂಘಗಳ/ಸಹಕಾರಿ ಒಕ್ಕೂಟ ಮತ್ತು ಅಥಣಿ ತಾಲೂಕು ಸಹಕಾರಿ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಕೃಷಿಯೇತರ ಪತ್ತಿನ ಸಹಕಾರಿ ಸಂಘಗಳ ಪದಾಧಿಕಾರಿ-ಕಾರ್ಯದರ್ಶಿ-ಸಿಬ್ಬಂದಿಗೆ ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ನಷ್ಟದಲ್ಲಿರುವ ಸಹಕಾರಿಗಳ ಸಂಘಗಳ ಲಾಭದ ಹಳಿಗೆ ತರಲು ಕೈಗೊಳ್ಳಬೇಕಾದ ಸಾಲ ಮರುಪಾವತಿ ಸಾಮರ್ಥ್ಯ, ಆಡಳಿತ ಮಂಡಳಿ ಪರಿಣಾಮಕಾರಿಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಉಪಕ್ರಮಗಳು ಕಾನೂನಿನಲ್ಲಿ ಅಡಕವಾಗಲಿವೆ. ಸಾಲಗಾರರ ಮೇಲೆ ಜೀವ ವಿಮೆ ಇಳಿಸುವುದು. ಠೇವಣಿ ಇಟ್ಟವರಿಗೆ ಠೇವಣಿ ಭದ್ರತೆ ಹಾಗೂ ವಿಮೆ ಸೌಲಭ್ಯ ಕಲ್ಪಿಸುವುದು. ಸಾಲಗಾರ ಮರುಪಾವತಿ ಮಾಡದಿದ್ದರೆ ಆ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಮೇಲೆ ಜಂಟಿ ಕ್ರಿಮಿನಲ್ ಮೊಕದ್ದಮೆ ಹೂಡುವ ಚರ್ಚೆ ನಡೆದಿದೆ ಎಂದರು.

    ಬೆಂಗಳೂರು, ಮೈಸೂರು, ಬೆಳಗಾವಿ, ಮಂಗಳೂರು, ಕಲ್ಬುರ್ಗಿಯಲ್ಲಿ ವಿಭಾಗಮಟ್ಟದ ಸಹಕಾರಿ ನ್ಯಾಯಾಲಯ ಸ್ಥಾಪಿಸಲು ಸಮಿತಿ ಚರ್ಚಿಸಿದೆ ಎಂದರು. ಬೆಳಗಾವಿ ಪ್ರಾಂತದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಡಾ.ಸುರೇಶಗೌಡ ಮಾತನಾಡಿ, ಸರ್ಕಾರ 10 ಕೋಟಿ ರೂ. ಅನುದಾನವನ್ನು ಎಸ್ಸಿ/ಎಸ್ಟಿ ಜನರಿಗೆ ಸಾಲ ಸೌಲಭ್ಯಒದಗಿಸುತ್ತಿದೆ ಎಂದರು.

    ಸಹಕಾರ ಸಂಘಗಳ ಮಹಾಮಂಡಳದ ನಿರ್ದೇಶಕ ಡಾ.ಸಂಜಯ ಹೊಸಮಠ ಮಾತನಾಡಿದರು. ಬಾಗಲಕೋಟೆಯ ಕೃಷಿಯೇತರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಮುಚಖಂಡಯ್ಯ ಹಂಗರಗಿ, ಅಥಣಿ ತಾಲೂಕು ಒಕ್ಕೂಟದ ಅಧ್ಯಕ್ಷ ಎಂ.ಡಿ.ತೊದಲಬಾಗಿ, ಮುರುಘೇಶ ಬಾನಿ, ಚೇತನ ಮಳಗೀಕರ, ಜಿಲ್ಲಾ ಉಪನಿಬಂಧಕ ಎಂ.ಎನ್.ಮಣಿ, ಡಾ.ಮಲ್ಲಪ್ಪ ರವುತನ್ನವರ, ರಾಘವೇಂದ್ರ ನೂಲಿ, ಸಿದ್ದಣ್ಣ ಹಲಕಾಟಿ, ಎಸ್.ಆರ್.ಬಟಕುರ್ಕಿ, ಸುರೇಶ ಗೊಟಖಿಂಡಿ, ಶಿವಾನಂದ ದಿವಾನಮಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts