More

    ವಿದ್ಯಾರ್ಥಿಗಳ ಅಂತರ್ಜಾಲ ಶಿಕ್ಷಣಕ್ಕೆ ನೆರವು

    ಶಿಗ್ಗಾಂವಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜ್ಞಾನತಾಣ ಕಾರ್ಯಕ್ರಮದಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣ ನೀಡಲು ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಹೇಳಿದರು.

    ಪಟ್ಟಣದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಜ್ಞಾನತಾಣ ಕಾರ್ಯಕ್ರಮದಡಿ ಸಂಸ್ಥೆ ವತಿಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಟ್ಯಾಬ್ ಮತ್ತು ಲ್ಯಾಪ್​ಟಾಪ್​ಗಳನ್ನು ವಿತರಿಸಿ ಅವರು ಮಾತನಾಡಿದರು.

    ಜ್ಞಾನತಾಣ ಕಾರ್ಯಕ್ರಮ ಭವಿಷ್ಯದಲ್ಲಿ ಕಲಿಕೆಯ ಗಮನದಲ್ಲಿಟ್ಟುಕೊಂಡು ನಿರ್ವಿುಸಲಾದ ಕಾರ್ಯಕ್ರಮವಾಗಿದೆ. ಸೌಲಭ್ಯ ವಂಚಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ಅಂತರ್ಜಾಲ ಶಿಕ್ಷಣ ಒದಗಿಸುವ ಅಪೂರ್ವ ಕಾರ್ಯಕ್ರಮವಾಗಿದ್ದು, ಆನ್​ಲೈನ್ ಶಿಕ್ಷಣ ವಂಚಿತ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ವರದಾನವಾಗಲಿದೆ ಎಂದರು.

    ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಮಾತನಾಡಿ, 2009ರಲ್ಲಿ ಪಟ್ಟಣದಲ್ಲಿ ಕಾರ್ಯಾರಂಭ ಮಾಡಿರುವ ಧರ್ಮಸ್ಥಳ ಸಂಸ್ಥೆ ತಾಲೂಕಿನಲ್ಲಿ ಹಲವು ಅಭಿವೃದ್ಧಿ ಕೆಲಸದಲ್ಲಿ ಭಾಗಿಯಾಗಿದೆ. ಸಂಸ್ಥೆಯಿಂದ ಟ್ಯಾಬ್ ಪಡೆದುಕೊಳ್ಳುತ್ತಿರುವ ಪಾಲಕರು ಆನ್​ಲೈನ್ ತರಗತಿಯ ಸಮಯದಲ್ಲಿ ಮಕ್ಕಳ ಪಕ್ಕದಲ್ಲಿದ್ದು ಅವರ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾ ಇಡಬೇಕು. ಅಂತರ್ಜಾಲದ ದುಷ್ಪರಿಣಾಮ ಮಕ್ಕಳ ಮೇಲೆ ಪ್ರಭಾವ ಬೀರದಂತೆ ಎಚ್ಚರ ವಹಿಸಿ ಎಂದರು.

    ಜನಜಾಗೃತಿ ಸಂಘದ ಮಾಜಿ ಅಧ್ಯಕ್ಷ ಮೋಹನ ಮೆಣಸಿನಕಾಯಿ ಮಾತನಾಡಿದರು. ಕೃಷ್ಣ ಮಧುವನ, ಸಾವಿತ್ರಿ, ಅರುಣ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

    100 ಟ್ಯಾಬ್, 40 ಲ್ಯಾಪ್​ಟಾಪ್ ವಿತರಣೆ ಗುರಿ

    ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಮುಖೇಶ ಮಾತನಾಡಿ, ಜ್ಞಾನತಾಣ ಕಾರ್ಯಕ್ರಮವು ಪೂಜ್ಯರ ಅಭಿಲಾಷೆಯಂತೆ ಗ್ರಾಮೀಣ ಭಾಗದ ಮಕ್ಕಳಲ್ಲಿ ಅಂತರ್ಜಾಲ ಶಿಕ್ಷಣದ ಮಹತ್ವ ತಿಳಿಸಲು ಮಾಡಿರುವ ಪ್ರಯತ್ನವಾಗಿದೆ. ಇದರಲ್ಲಿ ಕ್ಷೇತ್ರ ಧರ್ಮಸ್ಥಳ, ಫಲಾನುಭವಿ ಕುಟುಂಬಗಳು ಮತ್ತು ಉಪಕರಣ ಪೂರೈಕೆದಾರರು ಪಾಲುದಾರರಾಗಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಅರ್ಹ, ಆಸಕ್ತ 5ನೇ ತರಗತಿಯಿಂದ 10ನೇ ತರಗತಿಯವರೆಗೆ ಇಂಗ್ಲಿಷ್, ವಿಜ್ಞಾನ, ಗಣಿತದ ವಾರ್ಷಿಕ ಪಠ್ಯಗಳನ್ನು ಟ್ಯಾಬ್​ಗಳಿಗೆ ಜೋಡಿಸಿ, ಮಕ್ಕಳ ಉಪಯೋಗಕ್ಕಾಗಿ ನೀಡಲಾಗುವುದು. ಶಾಲೆಯಲ್ಲಿ ಕಲಿತಂತೆ, ಮನೆಯಲ್ಲಿಯೂ ನಿಗದಿತ ಪಠ್ಯಗಳನ್ನು ಪ್ರತಿನಿತ್ಯ ಅಧ್ಯಯನ ಮಾಡಬಹುದಾಗಿದೆ. ಈ ಕಾರ್ಯಕ್ರಮದಡಿ ತಾಲೂಕಿನಲ್ಲಿ ಸಂಘದ ಫಲಾನುಭವಿಗಳಿಗೆ ಸಹಾಯಧನದಡಿ ದರದಲ್ಲಿ ಮೊದಲಿಗೆ 100 ಟ್ಯಾಬ್ ಮತ್ತು 50 ಲ್ಯಾಪ್​ಟಾಪ್ ನೀಡುವ ಗುರಿಯನ್ನು ಗ್ರಾಮಾಭಿವೃದ್ಧಿ ಸಂಸ್ಥೆ ಹೊಂದಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts