More

    ಕರೊನಾ ವೈರಸ್​ ಸೋಂಕು ಶಂಕಿತ ಮಾನಸಿಕ ಅಸ್ವಸ್ಥನಿಂದ ದಾದಿ ಮೇಲೆ ಹಲ್ಲೆ

    ಕೊಚ್ಚಿ: ಕರೊನಾ ವೈರಸ್​ ಸೋಂಕು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಮಾನಸಿಕ ಅಸ್ವಸ್ಥನೊಬ್ಬ ದಾದಿ ಮೇಲೆ ಹಲ್ಲೆ ನಡೆಸಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿರುವ ಘಟನೆ ಕೊಲ್ಲಂನಲ್ಲಿ ನಡೆದಿದೆ.

    ಕೊಲ್ಲಂ ಜಿಲ್ಲೆಯ ಪದಪ್ಪಕರ ಗ್ರಾಮದ ವ್ಯಕ್ತಿ ದಾದಿ ಮೇಲೆ ಹಲ್ಲೆ ನಡೆಸಿ ಆತ್ಮಹತ್ಯೆಗೆ ಯತ್ನಿಸಿದವರು ಎಂದು ತಿಳಿದು ಬಂದಿದೆ.

    ಇವರು ಪದಪ್ಪಕರ ಆಶ್ರಮದ ಮಹಿಳಾ ಹಾಸ್ಟೆಲ್​ನಲ್ಲಿ ಕೆಲಸ ಮಾಡುತ್ತಿದ್ದರು. ಈತನಲ್ಲಿ ಕರೊನಾ ವೈರಸ್​ ಸೋಂಕು ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಸಂಜೆ ಕೊಲ್ಲಂ ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಬೆಳಗ್ಗೆ ಆತ ಕುಡಿಯಲು ನೀರು ಕೇಳಿದ. ನರ್ಸ್​ ನೀರು ಕೊಟ್ಟರು. ನಂತರ ಚಹಾ ಬೇಕು ಎಂದು ಬೇಡಿಕೆ ಇಟ್ಟ. ಅಲ್ಲದೆ ನಮ್ಮ ಸಂಬಂಧಿಯೊಬ್ಬರು ಚಹಾ ತರುತ್ತಾರೆ. ಅದನ್ನೇ ಕುಡಿಯುತ್ತೇನೆ ಎಂದು ಹೇಳಿದ. ಸಂಬಂಧಿಕರು ಚಹಾ ತರುವುದು ವಿಳಂಬವಾಗುತ್ತಿದ್ದಂತೆ ಆಕ್ರೋಶಗೊಂಡ ಆತ ದಾದಿ ಮೇಲೆ ಹಲ್ಲೆ ನಡೆಸಿದ. ನಂತರ ಕೊಠಡಿಗೆ ತೆರಳಿ ಪಂಚೆ ಬದಲಿಸಿ ಪ್ಯಾಂಟ್​ ಧರಿಸಿ ಬಂದು ನೇಣು ಹಾಕಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ. ಅಲ್ಲದೆ ನರ್ಸ್​ ಕುತ್ತಿಗೆ ಹಿಸುಕಲು ಮುಂದಾದ.

    ಅಲ್ಲದೆ ಆತ ಆಸ್ಪತ್ರೆಯಿಂದ ತೆರಳಲು ಯತ್ನಿಸಿದ. ಕೂಡಲೇ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಆಗಮಿಸಿ ಆತನನ್ನು ವಶಕ್ಕೆ ಪಡೆದರು. ನಂತರ ಆತನನ್ನು ತಿರುವನಂತಪುರದಲ್ಲಿ ಕ್ವಾರಂಟೈನಲ್ಲಿ ಇಡಲು ನಿರ್ಧರಿಸಿ ರವಾನಿಸಲಾಗಿದೆ. (ಏಜೆನ್ಸೀಸ್​)

    ಡೆಬಿಟ್​ ಕಾರ್ಡ್​ ಬಳಸಿ ಅನ್ಯ ಬ್ಯಾಂಕ್​ ಎಟಿಎಂನಲ್ಲಿ ಹಣ ಡ್ರಾಗೆ ವಿಧಿಸುತ್ತಿದ್ದ ಶುಲ್ಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts