More

    ಮಾದಕ ದ್ರವ್ಯ ಸೇವನೆಯಿಂದ ಸತ್ತವರ ಅಂತ್ಯಕ್ರಿಯೆ ನಿಷೇಧ..!

    ಮೋರಿಗಾಂವ್: ಇಂದಿನ ಯುವಕ-ಯುವತಿಯರು ಹತ್ತಾರು ಚಟಗಳಿಗೆ ದಾಸರಾಗುತ್ತಿದ್ದು, ಅನೇಕರು ಯೌವ್ವನದಲ್ಲೇ ತಮ್ಮ ಜೀವವನ್ನು ತೊರೆಯುತ್ತಿದ್ದಾರೆ. ಸರ್ಕಾರವು ಈ ಕುರಿತು ಹಲವಾರು ಕಾರ್ಯಕ್ರಮಗಳನ್ನು ಹಾಗೂ ಇದರ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದರೂ ಸಹಿತ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ.

    ಆದರೆ ಅಸ್ಶಾಂನ ಮೋರಿಗಾಂವ್ ಜಿಲ್ಲೆಯ ಮೊಯಿರಾಬರಿ ಟೌನ್ ಕಬ್ರಿಸ್ತಾನ್ ಸಮಿತಿಯು ಡ್ರಗ್ಸ್ ಸೇವನೆಯಿಂದ ಯಾರಾದರೂ ಒಂದು ವೇಳೆ ಮೃತಪಟ್ಟರೆ ಅಥವಾ ಮಾದಕ ದ್ರವ್ಯಗಳ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿರುವವರು ಮರಣ ಹೊಂದಿದರೆ ಅವರ ಅಂತ್ಯಕ್ರಿಯೆಯನ್ನು ನಿಷೇಧಿಸಿದೆ. ಇತ್ತೀಚೆಗೆ ನಡೆದ ಕಬ್ರಿಸ್ತಾನ್ ಸಮಿತಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಇದನ್ನೂ ಓದಿ: ಬಾಂಬ್ ಕಟ್ಟಿಕೊಂಡು ಬ್ಯಾಂಕ್​ಗೆ ನುಗ್ಗಿದ ಖದೀಮ: ಬಂಧನದ ಬಳಿಕ ಬಯಲಾಯ್ತು ಅಸಲಿಯತ್ತು!

    ಅಲ್ಲದೇ, “ಮೊರಿಗಾಂವ್ ಜಿಲ್ಲೆಯ ಮೊಯಿರಾಬರಿ ಟೌನ್ ಕಬ್ರಿಸ್ತಾನ್ ಸಮಿತಿಯು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದು, ಮಾದಕ ದ್ರವ್ಯ ಸೇವನೆಯಿಂದ ಸಾಯುವ ಅಥವಾ ಅಕ್ರಮ ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿರುವವರ ಶವವನ್ನು ಸ್ಮಶಾನದಲ್ಲಿ ಹೂಳಲು ನಾವು ಬಿಡುವುದಿಲ್ಲ. ನಮ್ಮ ಪ್ರದೇಶದಲ್ಲಿ ಡ್ರಗ್ಸ್ ಹಾವಳಿ ವಿರುದ್ಧ ಹೋರಾಡುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ” ಎಂದು ಮೊಯಿರಾಬರಿ ಟೌನ್ ಕಬ್ರಿಸ್ತಾನ್ ಸಮಿತಿ ಅಧ್ಯಕ್ಷ ಮೆಹಬೂಬ್ ಮುಕ್ತಾರ್ ಹೇಳಿದರು.

    ಮಾದಕ ವಸ್ತುಗಳ ಹಾವಳಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೆಹಬೂಬ್ ಮುಕ್ತಾರ್ ತಿಳಿಸಿದ್ದಾರೆ. ತಮ್ಮ ಪ್ರದೇಶದಲ್ಲಿ ಅನೇಕ ಯುವಕರು ಅಕ್ರಮ ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿದ್ದಾರೆ ಮತ್ತು ಅನೇಕ ಮಕ್ಕಳು ಮಾದಕ ವ್ಯಸನಿಗಳಾಗಿದ್ದಾರೆ ಎಂದು ಅವರು ಹೇಳಿದರು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts