ನವದೆಹಲಿ : ಅಸ್ಸಾಂನಲ್ಲಿ ಬಿಜೆಪಿ ಗೆಲುವಿನತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಹಾಗೂ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅಸ್ಸಾಂ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಬಿಜೆಪಿಗೆ ಭಾರೀ ಗೆಲುವು ಲಭಿಸಲು ರಾಜ್ಯದ ಜನರು ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಅಧಿಕಾರದಲ್ಲಿರುವುದರಿಂದ ಆಗುವ ಪ್ರಯೋಜನವನ್ನು ಅರಿತಿದ್ದಾರೆ. ಅದಕ್ಕಾಗೇ ಮತ್ತೆ ನಮ್ಮ ಪಕ್ಷವನ್ನು ಚುನಾಯಿಸಿದ್ದಾರೆ ಎಂದಿದ್ದಾರೆ.
#AssamAssemblyPoll: I thank the people of #Assam from the bottom of my heart for having reposed faith in #BJP and voted in support from across all the sections to give a second term with a spectacular decisive mandate. Credit goes to PM Sh @NarendraModi who
1/3 pic.twitter.com/ltRGO6OLx7— Dr Jitendra Singh (@DrJitendraSingh) May 2, 2021
ರಾಜ್ಯದಲ್ಲಿ ಬಿಜೆಪಿ ಆಡಳಿತದ ಬಗ್ಗೆ ಮಾತನಾಡಿರುವ ಸಿಂಗ್, “ಕಳೆದ 7 ವರ್ಷಗಳಲ್ಲಿ ಅಸ್ಸಾಂ ಕ್ರಾಂತಿಕಾರಿ ಪರಿವರ್ತನೆಯನ್ನು ಕಂಡಿದೆ. ಮುಂಚೆ, ರಾಜ್ಯವು ಯಾವಾಗಲೂ ಗಡಿ ನುಸುಳುವಿಕೆ, ಆತಂಕವಾದಿಗಳ ಅಬ್ಬರ ಅಥವಾ ಅರ್ಧಕ್ಕೆ ನಿಂತುಹೋದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸುದ್ದಿಯಲ್ಲಿರುತ್ತಿತ್ತು. ಆದರೆ ಈಗ ಈ ಎಲ್ಲ ವಿಷಯದಲ್ಲೂ ಬದಲಾವಣೆ ಆಗಿದೆ” ಎಂದಿದ್ದಾರೆ. (ಏಜೆನ್ಸೀಸ್)