More

    ಕಿರಿಯರ ಏಷ್ಯಾಕಪ್ ಫೈನಲ್‌ಗೆ ಭಾರತ ತಂಡ; ಇಂದು ಶ್ರೀಲಂಕಾ ಎದುರು ಫೈನಲ್ ಹೋರಾಟ

    ಶಾರ್ಜಾ: ಸರ್ವಾಂಗೀಣ ನಿರ್ವಹಣೆ ತೋರಿದ ಭಾರತ ತಂಡ 19 ವಯೋಮಿತಿ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಬಾಂಗ್ಲಾದೇಶ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿತು. ಶಾರ್ಜಾ ಸ್ಟೇಡಿಯಂನಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ 103 ರನ್‌ಗಳಿಂದ ಜಯ ದಾಖಲಿಸಿತು. ಶುಕ್ರವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಎದುರಾಗಲಿವೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಶೇಖ್ ರಶೀದ್ (90*ರನ್, 108 ಎಸೆತ, 3 ಬೌಂಡರಿ, 1 ಸಿಕ್ಸರ್) ಶತಕ ವಂಚಿತ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್‌ಗೆ 243 ರನ್ ಪೇರಿಸಿತು. ಪ್ರತಿಯಾಗಿ ಬಾಂಗ್ಲಾ 38.2 ಓವರ್‌ಗಳಲ್ಲಿ 140 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ ತಂಡದ ಪರ ರಾಜ್ಯವರ್ಧನ್ ಹಂಗಾರ್ಕೆರ್, ರವಿ ಕುಮಾರ್, ರಾಜಾ ಬಾವಾ, ವಿಕ್ಕಿ ಒಸ್ವಾಲ್ ತಲಾ 2 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾಗೆ ಕಡಿವಾಣ ಹಾಕಿದರು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ 22 ರನ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿತು.

    ಭಾರತ: 8 ವಿಕೆಟ್‌ಗೆ 243 (ಶೇಖ್ ರಶೀದ್ 90*, ಯಶ್ ಧುಲ್ 26, ರಾಜಾ ಬಾವಾ 23, ವಿಕ್ಕಿ ಒಸ್ವಾಲ್ 28*, ರಾಕಿಬುಲ್ ಹಸನ್ 41ಕ್ಕೆ 3, ತಂಜಿಮ್ ಹಸನ್ 51ಕ್ಕೆ 1), ಬಾಂಗ್ಲಾದೇಶ: 38.2 ಓವರ್‌ಗಳಲ್ಲಿ 140 (ಮಹಫಿಜುಲ್ ಇಸ್ಲಾಂ 26, ಅರಿುಲ್ ಇಸ್ಲಾಂ 42, ರಾಜ್ಯವರ್ಧನ್ ಹಂಗಾರ್ಕೆರ್ 36ಕ್ಕೆ 2,ರವಿ ಕುಮಾರ್ 22ಕ್ಕೆ 2, ರಾಜಾ ಬಾವಾ 26ಕ್ಕೆ 2, ವಿಕ್ಕಿ ಒಸ್ವಾಲ್ 25ಕ್ಕೆ 2).

    * ಇಂದು ಫೈನಲ್
    ಭಾರತ-ಶ್ರೀಲಂಕಾ
    ಆರಂಭ: ಬೆಳಗ್ಗೆ 11

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts