ಬೆಂಗಳೂರು: ಮುಂಬರುವ ಟಿ20 ವಿಶ್ವಕಪ್‌ಗೆ ಬುಧವಾರ ಪ್ರಕಟಗೊಂಡಿರುವ ಭಾರತ ತಂಡ ಹಲವು ಅಚ್ಚರಿಗಳ ಪ್ಯಾಕೇಜ್ ಆಗಿದೆ. ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಅಚ್ಚರಿಯ ರೀತಿಯಲ್ಲಿ 4 ವರ್ಷಗಳ ಬಳಿಕ ಟಿ20 ತಂಡಕ್ಕೆ ಮರಳಿದ್ದರೆ, ಸೀಮಿತ ಓವರ್ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದ ಯಜುವೇಂದ್ರ ಚಾಹಲ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಭಾರತದ ಯಶಸ್ವಿ ಬೌಲರ್ ಆಗಿರುವ ಚಾಹಲ್‌ರನ್ನು ಕಡೆಗಣಿಸಿ, ಅಶ್ವಿನ್‌ಗೆ ಮಣೆ ಹಾಕಿರುವ ಹಿಂದಿನ ಕಾರಣವನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ ವಿವರಿಸಿದ್ದಾರೆ.
‘ಅಶ್ವಿನ್ ಅವರೊಂದು ಆಸ್ತಿ. ಅವರು ಐಪಿಎಲ್‌ನಲ್ಲಿ ಉತ್ತಮ ನಿರ್ವಹಣೆ ತೋರಿದ್ದಾರೆ. ಅವರಂಥ ಅನುಭವಿ ಆಟಗಾರ ನಮಗೆ ಬೇಕಿತ್ತು. ಗಾಯಾಳು ವಾಷಿಂಗ್ಟನ್ ಸುಂದರ್ ಗೈರಿನಲ್ಲಿ ನಮಗೆ ಓರ್ವ ಆ್-ಸ್ಪಿನ್ನರ್ ಬೇಕಿತ್ತು. ಅಶ್ವಿನ್ ತಂಡದಲ್ಲಿರುವ ಏಕೈಕ ಆ್ ಸ್ಪಿನ್ನರ್. ಮಿಸ್ಟರಿ ಸ್ಪಿನ್ನರ್ ಆಗಿರುವ ವರುಣ್ ಚಕ್ರವರ್ತಿ ಕೂಡ ವಿಶ್ವಕಪ್‌ನಲ್ಲಿ ಸರ್ಪ್ರೈಸ್ ಪ್ಯಾಕೇಜ್ ಆಗಿರಲಿದ್ದಾರೆ. ಯುಜಿಗಿಂತ (ಚಾಹಲ್) ನಾವು ರಾಹುಲ್ ಚಹರ್‌ಗೆ ಆದ್ಯತೆ ನೀಡಿದೆವು. ಯುಎಇ ಪಿಚ್‌ಗಳಲ್ಲಿ ವೇಗವಾಗಿ ಸ್ಪಿನ್ ಬೌಲಿಂಗ್ ಮಾಡಬಲ್ಲ ಬೌಲರ್ ನಮಗೆ ಬೇಕಾಗಿತ್ತು’ ಎಂದು ಚೇತನ್ ಶರ್ಮ ವಿವರಿಸಿದ್ದಾರೆ.
ದುಬೈ ಮೈದಾನ ಸಾಕಷ್ಟು ದೊಡ್ಡದಾಗಿದ್ದು, ಅಶ್ವಿನ್ ಅವರಂಥ ಬೌಲರ್ ವೈವಿಧ್ಯಮಯ ಬೌಲಿಂಗ್ ಮೂಲಕ ಪವರ್‌ಪ್ಲೇಯಲ್ಲಿ ಎದುರಾಳಿಯನ್ನು ಕಂಗೆಡಿಸಬಲ್ಲರು. ಕಳೆದ ಕೆಲ ವರ್ಷಗಳಿಂದ ಅಶ್ವಿನ್ ಅವರನ್ನು ಟಿ20 ತಂಡಕ್ಕೆ ಪರಿಗಣಿಸದ ನಾಯಕ ಕೊಹ್ಲಿ ಕೂಡ ಇದಕ್ಕೆ ಸಮ್ಮತಿಸಿದ್ದಾರೆ. ಅಶ್ವಿನ್ ಆಯ್ಕೆ ಸರ್ವಸಮ್ಮತವಾದ ನಿರ್ಧಾರವಾಗಿದೆ ಚೇತನ್ ಶರ್ಮ ಹೇಳಿದ್ದಾರೆ.
The Squad is Out! 🙌
What do you make of #TeamIndia for ICC Men's T20 World Cup❓ pic.twitter.com/1ySvJsvbLw
— BCCI (@BCCI) September 8, 2021
34 ವರ್ಷದ ಅಶ್ವಿನ್ 2017ರಲ್ಲಿ ಕೊನೆಯದಾಗಿ ಭಾರತ ತಂಡದ ಪರ ಟಿ20 ಪಂದ್ಯ ಆಡಿದ್ದರು. ಅಶ್ವಿನ್ ಭಾರತ ಪರ 46 ಟಿ20 ಪಂದ್ಯ ಆಡಿದ್ದು, 52 ವಿಕೆಟ್ ಕಬಳಿಸಿದ್ದಾರೆ. 15 ಸದಸ್ಯರ ತಂಡದಲ್ಲಿ ಒಟ್ಟು ಐವರು ಸ್ಪಿನ್ನರ್‌ಗಳಿದ್ದಾರೆ. ರವೀಂದ್ರ ಜಡೇಜಾ, ರಾಹುಲ್ ಚಹರ್, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ಇತರ ಸ್ಪಿನ್ನರ್‌ಗಳು.
ಐಸಿಸಿ ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾ ಪ್ರಕಟ: ಚಹಾಲ್ ಔಟ್, ಅಶ್ವಿನ್ ಅಚ್ಚರಿಯ ಆಯ್ಕೆ