More

    ಜಿಪಂ ಅಧ್ಯಕ್ಷರಾಗಿ ಅಶ್ವಿನಿ ಆಯ್ಕೆ ಸಾಧ್ಯತೆ?

    ಗುಂಡ್ಲುಪೇಟೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಶಿವಮ್ಮ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ತಾಲೂಕಿನ ತೆರಕಣಾಂಬಿ ಕ್ಷೇತ್ರದ ಸದಸ್ಯೆ ಅಶ್ವಿನಿ ವಿಶ್ವನಾಥ್ ಆಯ್ಕೆಯಾಗುವುದು ನಿಚ್ಚಳವಾಗಿದ್ದು, ತಾಲೂಕಿಗೆ 8ನೇ ಬಾರಿ ಜಿಪಂ ಅಧ್ಯಕ್ಷ ಪಟ್ಟ ದೊರೆಯುವ ಸಾಧ್ಯತೆ ಇದೆ.

    ಮೊದಲ ಅವಧಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಎಂ.ರಾಮಚಂದ್ರು ಬಿಜೆಪಿಗೆ ಸೇರ್ಪಡೆಯಾಗಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪಾಳ್ಯ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಶಿವಮ್ಮ ಅಧ್ಯಕ್ಷರಾಗಿದ್ದರು.
    ಕಾಂಗ್ರೆಸ್ ಒಳಒಪ್ಪಂದದಂತೆ 20 ತಿಂಗಳ ಅಧಿಕಾರಾವಧಿಯ ನಂತರ ಶಿವಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸ್ಥಾನಕ್ಕೆ ಪರಿಶಿಷ್ಟ ವರ್ಗದ ತೆರಕಣಾಂಬಿ ಕ್ಷೇತ್ರದ ಅಶ್ವಿನಿ ವಿಶ್ವನಾಥ್ ಹಾಗೂ ಹರದನಹಳ್ಳಿ ಕ್ಷೇತ್ರದ ರಾಮಚಂದ್ರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ವಿಜೇತರಾದ ರಮೇಶ್ ಆಕಾಂಕ್ಷಿಯಾಗಿದ್ದಾರೆ. ಒಳ ಒಪ್ಪಂದದಂತೆ ಅಶ್ವಿನಿ ವಿಶ್ವನಾಥ್ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.

    7 ಬಾರಿ ಒಲಿದಿದ್ದ ಅಧ್ಯಕ್ಷ ಪಟ್ಟ: ಈವರೆಗೆ ಜಿಲ್ಲಾ ಪರಿಷತ್ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ತಾಲೂಕಿನ ಸದಸ್ಯರ ವಿವರ
    ಅವಿಭಜಿತ ಮೈಸೂರು ಜಿಲ್ಲಾ ಪರಿಷತ್‌ನ ಎರಡನೇಯ ಅಧ್ಯಕ್ಷರಾಗಿ 1989ರಲ್ಲಿ ತಾಲೂಕಿನ ತೆರಕಣಾಂಬಿ ಕ್ಷೇತ್ರದ ಸದಸ್ಯ ಎಂ.ಪಿ.ವೃಷಭೇಂದ್ರಪ್ಪ ಆಯ್ಕೆಯಾಗಿದ್ದರು. ಮೈಸೂರಿನಿಂದ ಚಾಮರಾಜನಗರ ಜಿಲ್ಲೆ ಪ್ರತ್ಯೇಕಗೊಂಡ ನಂತರ ತಾಲೂಕಿನ ಬರಗಿ ಕ್ಷೇತ್ರದ ಬಿ.ಎಂ.ಮುನಿರಾಜು 2000ರಲ್ಲಿ ಎರಡನೇ ಅಧ್ಯಕ್ಷರಾಗಿ ಹಾಗೂ 2010ರಲ್ಲಿ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2003ರಲ್ಲಿ ತೆರಕಣಾಂಬಿ ಕ್ಷೇತ್ರದ ಲಕ್ಷ್ಮಮ್ಮ ಜಯರಾಮನಾಯ್ಕ, 2007 ರಿಂದ 09ರವರೆಗೆ ಇದೇ ಕ್ಷೇತ್ರದ ಶೈಲಜಾ ಮಲ್ಲೇಶ್.
    2011ರಲ್ಲಿ ಬರಗಿ ಕ್ಷೇತ್ರದ ರಾಜೇಶ್ವರಿ ಶ್ರೀನಿವಾಸ್,  2016ರಲ್ಲಿ ಕಬ್ಬಹಳ್ಳಿ ಕ್ಷೇತ್ರದ ದೇವಮ್ಮಣ್ಣಿ ಸುಬ್ಬಣ್ಣ ಅಧ್ಯಕ್ಷರಾಗಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts