More

    ಗೆಹ್ಲೋಟ್​ ಬೆಂಬಲಿಗರಿರುವ ರೆಸಾರ್ಟ್​ನಲ್ಲಿ ಐಷಾರಾಮಕ್ಕೇನೂ ಕೊರತೆಯಿಲ್ಲ…!

    ಜೈಪುರ: ಸಿಎಂ ಅಶೋಕ್​ ಗೆಹ್ಲೋಟ್​ ಅಧಿಕೃತ ನಿವಾಸದಿಂದ 25 ಕಿ.ಮೀ. ದೂರದಲ್ಲಿದೆ ಬೆಂಬಲಿಗ ಶಾಸಕರು ಬೀಡುಬಿಟ್ಟಿರುವ ಫೇರ್​ಮೌಂಟ್​ ರೆಸಾರ್ಟ್​.

    ದೆಹಲಿ- ಜೈಪುರ ರಸ್ತೆಯಲ್ಲಿರುವ ರೆಸಾರ್ಟ್​ನಲ್ಲಿ ಐಷಾರಾಮಕ್ಕೇನೂ ಕೊರತೆಯಿಲ್ಲ. ಮೊಘಲ್ ಶೈಲಿಯ ಅರಮನೆಗಳ ಮಾದರಿಯಲ್ಲಿಯೇ ಇದು ನಿರ್ಮಿಸಲ್ಪಟ್ಟಿದೆ. ಜತೆಗೆ, ಗ್ರಾಹಕರಿಗೆ ಅತ್ಯಂತ ವೈಭವೋಪೇತ, ಪಂಚಾತಾರಾ ಸೇವೆಗಳು ಇಲ್ಲಿವೆ.

    ಇದನ್ನೂ ಓದಿ; ಕೋವಿಡ್​ ಕೇರ್​ ಸೆಂಟರ್​ನಲ್ಲಿ ಹಾಸಿಗೆ ಹಂಚಿಕೆಗೆ ಕೇಂದ್ರಿಕೃತ ವ್ಯವಸ್ಥೆ; ಸಚಿವ ಸುಧಾಕರ್​ ಭರವಸೆ 

    ಈ ರೆಸಾರ್ಟ್​ನಲ್ಲಿ 245ಕ್ಕೂ ಅಧಿಕ ರೂಮ್​ಗಳಿದ್ದು, ಕಾಂಗ್ರೆಸ್​ನ 100ಕ್ಕೂ ಅಧಿಕ ಶಾಸಕರು ಇಲ್ಲಿದ್ದಾರೆ ಎಂದು ಹೇಳಲಾಗಿದೆ. ​ಇಲ್ಲಿನ ಸಾಮಾನ್ಯ ಕೊಠಡಿಯ ಬಾಡಿಗೆ ಪ್ರತಿದಿನಕ್ಕೆ 8,500 ರೂ.ಗಳಿಂದ ಆರಂಭವಾಗುತ್ತದೆ ಎಂದು ರೆಸಾರ್ಟ್​ನ ವೆಬ್​ಸೈಟ್​ನಲ್ಲಿ ಹೇಳಲಾಗಿದೆ.

    ಪ್ರವಾಸಿಗರ ದಟ್ಟಣೆ ಹೆಚ್ಚಿರುವ ದಿನಗಳಲ್ಲಿ ಈ ಮೊತ್ತ ಎರಡು ಅಥವಾ ಮೂರು ಪಟ್ಟು ಹೆಚ್ಚಾಗುತ್ತದೆ. ಕೋವಿಡ್​ ಕಾರಣದಿಂದಾಗಿ ಬಹುತೇಕ ಪಂಚತಾರಾ ಹೋಟೆಲ್​ಗಳಲ್ಲೂ ಬಾಡಿಗೆಯನ್ನು ಗಣನೀಯವಾಗಿ ಕೆಳಗಿಳಿಸಲಾಗಿದೆ. ವಾರಾಂತ್ಯದವರೆಗೆ ಕೊಠಡಿ ಲಭ್ಯವಿಲ್ಲ ಎಂದು ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗಿದೆ.

    ಇದನ್ನೂ ಓದಿ; ರಾಜ್ಯಪಾಲರೆದುರು ಬಹುಮತ ಸಾಬೀತು ಪಡಿಸಿ; ಗೆಹ್ಲೋಟ್​ಗೆ ಸವಾಲು ಹಾಕಿದ ಸಚಿನ್​ ಪೈಲಟ್​ ಬಣ 

    ಅತ್ಯಂತ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಈ ರೆಸಾರ್ಟ್​ನಲ್ಲಿ ಸ್ವಿಮ್ಮಿಂಗ್​ ಪೂಲ್​, ಸ್ಪಾ, ರೆಸ್ಟೋರಂಟ್​, ಬಾರ್​ ಸೇವೆಗಳಿವೆ. ವಿವಿಧ ಹೊರಾಂಗಣ ಚಟುವಟಿಕೆಗಳಿಗೂ ಅವಕಾಶವಿದೆ. ಗ್ರಾಹಕರಿಲ್ಲದೇ ಕಂಗೆಟ್ಟಿರುವ ಹೋಟೆಲ್​​ ಉದ್ಯಮಕ್ಕೆ ಈ ರೆಸಾರ್ಟ್​ ರಾಜಕೀಯ ಕೊಂಚ ರಿಲೀಫ್​ ನೀಡಬಹುದೇನೋ?

    ಪೊಲೀಸರೇ ನನ್ನ ಎನ್​ಕೌಂಟರ್​ ಮಾಡ್ತಾರೆ…! ರಕ್ಷಣೆಗೆ ಸುಪ್ರೀಂಕೋರ್ಟ್​ ಮೊರೆ ಹೋದ ಸಬ್​ ಇನ್​ಸ್ಪೆಕ್ಟರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts