More

    ಆಶಾ ಕಾರ್ಯಕರ್ತೆಯರ ಕಾರ್ಯಕ್ಕೆ ಶ್ಲಾಘನೆ

    ಅಥಣಿ: ವಿವಿಧ ಸಹಕಾರಿ ಸಂಸ್ಥೆಗಳಿಂದ ಕರೊನಾ ವೈರಸ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ನೀಡಲಾದ ತಲಾ 3 ಸಾವಿರ ರೂ. ಸಹಾಯಧನದ ಚೆಕ್‌ಅನ್ನು ಡಿಸಿಎಂ ಲಕ್ಷ್ಮಣ ಸವದಿ ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿತರಿಸಿದರು.

    ಬಳಿಕ ಮಾತನಾಡಿದ ಡಿಸಿಎಂ, ಆಶಾ ಕಾರ್ಯಕರ್ತೆಯರ ಕಾರ್ಯ ಗುರುತಿಸಿ ಅಭಿನಂದಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಸರ್ಕಾರದೊಂದಿಗೆ ಸಹಕಾರಿ ಸಂಘಗಳು ಕೈ ಜೋಡಿಸಿರುವುದು ಸಂತಸದ ವಿಚಾರ ಎಂದರು. ರವಿ ಪೂಜಾರಿ, ಮುರುಗೇಶ ಬಾನಿ, ಉಮೇಶರಾವ ಬಂಟೋಡ್ಕರ್, ವಿನಾಯಕ ಲಕ್ಷಾಣಿ, ಪ್ರಕಾಶ ಕೊರಬು ಇತರರು ಇದ್ದರು.


    ಕೊಕಟನೂರ ವರದಿ: ಕರೊನಾ ವೈರಸ್ ನಿಯಂತ್ರಿಸಲು ನಿರಂತರವಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ಎಂದು ಜಿಪಂ ಸದಸ್ಯ ಸಿದ್ಧಪ್ಪ ಮುದಕಣ್ಣವರ ಹೇಳಿದರು. ಗ್ರಾಮದ ಕಾಡಸಿದ್ಧೇಶ್ವರ ಮಠದ ಸಮುದಾಯ ಭವನದಲ್ಲಿ 16 ಸಹಕಾರಿ ಸಂಘಗಳು ಹಾಗೂ ಸೌಹಾರ್ದ ಸಹಕಾರಿಗಳ ವತಿಯಿಂದ ಕರೊನಾ ಸೇನಾನಿಗಳಾದ 37 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಪ್ರೋತ್ಸಾಹ ಧನದ ಚೆಕ್ ವಿತರಿಸಿ ಮಾತನಾಡಿದರು.

    ಗುರುಮೂರ್ತಯ್ಯ ಕಾಡದೇವರಮಠ, ಗ್ರಾಪಂ ಅಧ್ಯಕ್ಷೆ ಸವಿತಾ ಹೊನವಾಡಕರ, ಜಿಪಂ ಮಾಜಿ ಸದಸ್ಯ ಬಸವರಾಜ ಬುಟಾಳಿ, ವಿಠ್ಠಪ್ಪ ದೇಸಾಯಿ, ಅನೀಲ ಮುಳಿಕ, ರಮೇಶ ಮುದಕಣ್ಣವರ, ಕುಮಾರ ವೀರಗೌಡ, ಮೈಬುಬ್ ಮೋಮಿನ್, ರವಿ ಪೂಜಾರಿ, ಇತರರು ಇದ್ದರು. ವಕೀಲ ಸುಭಾಷ ಪಾಟಣಕರ ಸ್ವಾಗತಿಸಿದರು. ಶೇಖರ ಬಾನೆ ನಿರೂಪಿಸಿದರು. ಮಹಾಲಿಂಗ ಮಲಾಬಾದಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts