More

    ಆಶಾ ಕಾರ್ಯಕರ್ತೆಯರೊಂದಿಗೆ ವಾಗ್ವಾದ

    ನಿಪ್ಪಾಣಿ: ತಾಲೂಕಿನ ಬೆನಾಡಿ ಗ್ರಾಮದಲ್ಲಿ ಸೀಲ್‌ಡೌನ್ ಮಾಡಿದ ಪ್ರದೇಶದಲ್ಲಿ ಕೆಲ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ನಿರಾಕರಿಸಿ ತಪಾಸಣೆಗೆ ಬಂದಿದ್ದ ಆಶಾ ಕಾರ್ಯಕರ್ತೆಯರೊಂದಿಗೆ ವಾಗ್ವಾದ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಗ್ರಾಮದ ಕೊರವಿ ಗಲ್ಲಿಯಲ್ಲಿನ 22 ವರ್ಷದ ಗರ್ಭಿಣಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗರ್ಭಿಣಿ ವಾಸಿಸುತ್ತಿದ್ದ ಪ್ರದೇಶವನ್ನು ಹಿರಿಯ ಆರೋಗ್ಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಸೀಲ್‌ಡೌನ್ ಮಾಡಿದರು.

    ಸೀಲ್‌ಡೌನ್ ಮಾಡಿದ ಪ್ರದೇಶದಲ್ಲಿ ಆರೋಗ್ಯ ಇಲಾಖೆಯ ಆದೇಶದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕತೆರ್ಯರಿಂದ ಥರ್ಮಲ್ ಸ್ಕ್ರೀನಿಂಗ್ ಮೂಲಕ ಅಲ್ಲಿನ ನಾಗರಿಕರ ಆರೋಗ್ಯ ತಪಾಸಣೆಗೆ ತೆರಳಿದ್ದರು. ಆಗ ಸ್ಥಳೀಯ ನಿವಾಸಿಗಳು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮುತ್ತಿಗೆ ಹಾಕಿ ನಮಗೆ ಏನೂ ಆಗಿಲ್ಲಾ. ಸುಮ್ಮನೆ ನಮ್ಮನ್ನು ಪರೀಕ್ಷಿಸಬೇಡಿ. ನಮಗೆ ಏನಾಗುತ್ತದೆ ಆಗಲಿ ಎಂದು ಬೈದು ಕಳುಹಿಸಿದರು.

    ಕ್ರಮಕ್ಕೆ ಒತ್ತಾಯ: ಗ್ರಾಮಸ್ಥರ ವರ್ತನೆಯಿಂದ ನೊಂದ ಕರೊನಾ ಸೇನಾನಿಗಳು ನಾವು ಸರ್ಕಾರದ ಆದೇಶದಂತೆ ಕೆಲಸ ಮಾಡುತ್ತಿದ್ದೇವೆ. ಜೀವದ ಬಗ್ಗೆ ಯೋಚಿಸದೇ ಸೀಲ್‌ಡೌನ್ ಮಾಡಿರುವ ಪ್ರದೇಶಕ್ಕೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡುತ್ತಿದ್ದೇವೆ. ಆದರೆ, ಈ ರೀತಿ ಅವಾಚ್ಯ ಶಬ್ದಗಳಿಂದ ಬೈದು ನಮ್ಮನ್ನು ತಳ್ಳಾಡಿದರೆ ನಾವು ಹೇಗೆ ಕೆಲಸ ಮಾಡುವುದು? ಸರ್ಕಾರ ರಕ್ಷಣೆ ನೀಡುವವರೆಗೆ ಕೆಲಸ ನಿರ್ವಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

    ಘಟನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳೀಯ ಗ್ರಾಮೀಣ ಪೊಲೀಸ್ ಠಾಣೆಗೆ ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts