More

    ಬಸವೇಶ್ವರರ ಸಂದೇಶದಂತೆ ಬಿಜೆಪಿ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದೆ; ವಿಜಯಪುರದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌

    ವಿಜಯಪುರ: ವಿಧಾನಸಭೆ ಚುನವಾಣೆ ಹಿನ್ನೆಲೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರಾಜ್ಯಕ್ಕೆ ಭೇಟಿ ನೀಡಿದ್ದು, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರವನ್ನು ಕೈಗೊಂಡಿದ್ದಾರೆ. ಅಲ್ಲದೆ ಕನ್ನಡದಲ್ಲೇ ಭಾಷಣ ಮಾಡುವ ಮೂಲಕ ಮತದಾರರ ಗಮನ ಸೆಳೆದಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು 12ನೇ ಶತಮಾನದ ಬಸವಣ್ಣನವರ ಜನ್ಮ ಭೂಮಿಗೆ ಆಗಮಿಸಿದ್ದು ಪಾವನ ಆಗಿದೆ. ಇಂದು ನಾವೆಲ್ಲರೂ ಲೋಕತಂತ್ರ ಚುನಾವಣೆಯಲ್ಲಿ ಇದ್ದೇವೆ.ಜಗಜ್ಯೋತಿ ಬಸವೇಶ್ವರರು ಪಾರ್ಲಿಮೆಂಟ್ ಸ್ಥಾಪನೆ ಮಾಡಿದ್ದಾರೆ. ಭಾರತ ಅತೀ ದೊಡ್ಡ ಲೋಕತಂತ್ರದ ತಾಯಿ ಮೂಲ ವಿಶ್ವಗುರು ಸ್ಥಾಪಿಸಿದ ಅನುಭವ ಮಂಟಪ. ಇಂತಹ ಪುಣ್ಯ ಭೂಮಿಗೆ ಬಂದಿದ್ದು, ಕೋಟಿ ಕೋಟಿ ನಮನ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆ ನವೀಕರಣಕ್ಕೆ 45 ಕೋಟಿ ರೂ. ಖರ್ಚು!; ಬಿಜೆಪಿ ಆರೋಪ

    ಬಸವೇಶ್ವರರ ಸಂದೇಶ ಸಮಾನತೆಯ ಸಾರುವುದಾಗಿತ್ತು, ಕಾಯಕವೇ ಕೈಲಾಸ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಆ ಕೆಲಸ ಮಾಡುತ್ತಿದೆ. ಕರ್ನಾಟಕ ಹಾಗೂ ಉತ್ತರ ಪ್ರದೇಶಕ್ಕೆ ಸಾವಿರಾರು ವರ್ಷಗಳಿಂದ ಮಿತ್ರ ಸಂಭಂದ ಇದೆ. ಪ್ರಧಾನಮಂತ್ರಿಗಳ ಏಕ್ ಭಾರತ ಸೇತು ಭಾರತ ಎಂಬುದಕ್ಕೆ ಉದಾಹರಣೆ ಕರ್ನಾಟಕ ಹಾಗೂ ಉತ್ತರ ಪ್ರದೇಶ ಆಗಿವೆ ಎಂದು ಹಾಡಿ ಹೊಗಳಿದ್ದಾರೆ.

    ಆಂಜನೇಯ ಜನಿಸಿದ್ದು ಇದೇ ನೆಲದಲ್ಲಿ, ಹನುಮಾನ ಚಾಲಿಸ್ ಇಡಿ ದೇಶ ಪಠಣ ಮಾಡುತ್ತದೆ. ಇಡೀ ದೇಶ ಸಂತರ ಆಶೀರ್ವಾದೊಂದಿಗೆ ಡಬಲ್ ಇಂಜಿನ್ ಸರ್ಕಾರದ ಪರವಾಗಿ ಮತ ಕೇಳಲು ಬಂದಿದ್ದೇನೆ ಎಂದು ಹೇಳುತ್ತಾ ತಮ್ಮ ಪಕ್ಷಕ್ಕೆ ಮತದಾನ ಮಾಡಿ ಎಂದು ಹೇಳಿದ್ದಾರೆ.

    ಸುರಕ್ಷತೆಗೆ ಡಬಲ್​ ಇಂಜಿನ್​ ಸರ್ಕಾರವೇ ಗ್ಯಾರಂಟಿ: ಮಂಡ್ಯದಲ್ಲಿ ಸಿಎಂ ಯೋಗಿ ಅಬ್ಬರದ ಪ್ರಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts