More

    ಇನ್ನಷ್ಟು ಹತ್ತಿರವಾಯ್ತು ಮೌಂಟ್​ ಎವರೆಸ್ಟ್​…!

    ನವದೆಹಲಿ: ಲಾಕ್​ಡೌನ್​ನಿಂದ ಪ್ರಕೃತಿಗಾದಷ್ಟು ಉಪಕಾರ ಇನ್ನಾರಿಗೂ ಆಗಿಲ್ಲವೇನೋ..? ವಾಯು ಗುಣಮಟ್ಟ 20 ವರ್ಷಗಳಷ್ಟು ಹಿಂದಿನಷ್ಟು ಚೆನ್ನಾಗಿದೆ. ಗಂಗಾನದಿ ನೀರು ಶುಭ್ರವಾಗಿದೆ. ಕಾವೇರಿ, ಕಪಿಲೆಯರು ಕೂಡ ನಳನಳಿಸುತ್ತಿದ್ದಾರೆ. ಅಷ್ಟೇ ಏಕೆ ಬೆಂಗಳೂರಿನ ವೃಷಭಾವತಿ ನದಿ ಕೂಡ ಸ್ವಚ್ಛಗೊಂಡಿದೆ…!

    ವಾತಾವರಣ ತಿಳಿಯಾಗಿರುವುದರಿಂದ ಪಂಜಾಬ್​ನ ಜಲಂಧರ್​ನಿಂದ 200 ಕಿ.ಮೀ. ದೂರದಲ್ಲಿರುವ ಹಿಮಾಲಯ ಪರ್ವತಶ್ರೇಣಿಯನ್ನು ನೋಡಬಹುದು. ಸಿಲಿಗುರಿಯಿಂದ ಕಾಂಚನ್​ಜುಂಗಾ ಪರ್ವತ ಕಾಣುತ್ತದೆ. ಇವುಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿವೆ.

    ಇದನ್ನೂ ಓದಿ; ತಂಬಾಕಿನಲ್ಲಿದೆ ಕರೊನಾ ಗುಣಪಡಿಸುವ ಶಕ್ತಿ, ಸಿಗರೇಟ್​ ಕಂಪನಿ ತಯಾರಿಸಿದೆ ಲಸಿಕೆ…! 

    ಇದೀಗ ಅಂಥದ್ದೇ ಮತ್ತೊಂದು ವಿದ್ಯಮಾನ ಜರುಗಿದೆ. ಕಾಠ್ಮಂಡು ಕಣಿವೆಯಿಂದ ಜಗತ್ತಿನ ಅತ್ಯಂತ ಎತ್ತರದ ಪರ್ವತ ಮೌಂಟ್​ ಎವರೆಸ್ಟ್​ ಕಣ್ತುಂಬಿಕೊಳ್ಳಬಹುದು….!
    ಹಿಮಾಲಯ ಪರ್ವತಶ್ರೇಣಿಯೇ ಅತ್ಯಂತ ಸ್ಪಷ್ಟವಾಗಿ ಕಾಣುತ್ತಿದೆ. ಅದರಲ್ಲೂ ಎವರೆಸ್ಟ್​ ಪರ್ವತದ ತುದಿಯನ್ನು ಕೂಡ ಅಷ್ಟೇ ನಿಖರವಾಗಿ ಗುರುತಿಸಬಹುದು. ಹಲವು ವರ್ಷಗಳ ಬಳಿಕ ಇಂಥದ್ದೊಂದು ದೃಶ್ಯ ಗೋಚರವಾಗಿದೆ ಎನ್ನುತ್ತಾರೆ ಕಾಠ್ಮಂಡು ಕಣಿವೆಯ ಜನರು.

    ಕಾಠ್ಮಂಡು ಕಣಿವೆಯ ಚೋಬಾರ್​ ಪ್ರದೇಶ ಹಿಮಾಲಯ ಪರ್ವತಶ್ರೇಣಿಯಿಂದ ಅಂದಾಜು 200 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಮೌಂಟ್​ ಎವರೆಸ್ಟ್​ಅನ್ನು ಬರಿಗಣ್ಣಿನಿಂದ ಸ್ಪಷ್ಟವಾಗಿ ನೋಡಬಹುದು. ಇದರ ಚಿತ್ರಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಇದನ್ನೂ ಓದಿ; ಕೋತಿಗಳ ಮೇಲೆ ಯಶಸ್ವಿಯಾಯ್ತು ಕರೊನಾ ಲಸಿಕೆ…!

    ವಾಯುಮಾಲಿನ್ಯ ಕಡಿಮೆಯಿದ್ದ ದಿನಗಳಲ್ಲಿ ಹಿಮಾಲಯವನ್ನು ಬಹುದೂರದಿಂದಲೇ ನೋಡಬಹುದಾಗಿತ್ತು. ಆದರೆ, ವಾಯುಮಾಲಿನ್ಯ ಹೆಚ್ಚುತ್ತ ಸಾಗಿದಂತೆ ಅಂಥ ದೃಶ್ಯಗಳೇ ಮರೆಯಾದವು.

    ನೇಪಾಳಿ ಜನರು ಮೌಂಟ್​ ಎವರೆಸ್ಟ್​ ಅನ್ನು ‘ಸಾಗರ ಮಾತಾ’ ಎಂದೇ ಕರೆಯುತ್ತಾರೆ. ಲಾಕ್​ಡೌನ್​ನಿಂದಾಗಿ ದೇವತೆ ನಮಗೆ ದರ್ಶನ ನೀಡಿದಂತಾಗಿದೆ. ಮೌಂಟ್​ ಎವರೆಸ್ಟ್​ ನಮಗೆ ಮತ್ತಷ್ಟು ಹತ್ತಿರವಾಗಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸುತ್ತಾರೆ.

    ಕೋವಿಡ್​ ಕಾಲದಲ್ಲಿ ರೈಲಿನಲ್ಲಿ ಸಂಚರಿಸುವುದೆಂದರೆ ವಿದೇಶ ಪ್ರಯಾಣಕ್ಕಿಂತೇನೂ ಕಡಿಮೆಯಿಲ್ಲ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts