More

    ಆರ್ಯುವೇದ ಚಿಕಿತ್ಸೆ ಅತ್ಯುತ್ತಮವಾದದ್ದು

    ಗೋಣಿಕೊಪ್ಪ: ವಿಶ್ವ ಪೈಲ್ಸ್ ದಿನಾಚರಣೆ ಅಂಗವಾಗಿ ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಲಯನ್ಸ್ ಕ್ಲಬ್ ಮತ್ತು ರೋಟರಿ ಕ್ಲಬ್ಗಳ ಸಹಯೋಗದಲ್ಲಿ ಬುಧವಾರ ವಿರಾಜಪೇಟೆಯ ರೋಟರಿ ಸಭಾಂಗಣದಲ್ಲಿ ಸಾರ್ವಜನಿಕರಿಗಾಗಿ ಒಂದು ದಿನ ಆಯುರ್ವೇದ ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.

    ರೋಟರಿ ಕ್ಲಬ್ ಅಧ್ಯಕ್ಷ ಬನ್ಸಿ ಪೂವಣ್ಣ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ಕರ್ಣಂಡ ಯು. ಜಯ ಹಾಗೂ ಜೆ.ಎಸ್‌ಎಸ್ ಆಯುರ್ವೇದ ಕಾಲೇಜಿನ ಸಹ ಪ್ರಾಧ್ಯಪಕ ಡಾ.ಅಯ್ಯಣ್ಣ ಆರೋಗ್ಯ ತಪಾಸಣೆಗೆ ಚಾಲನೆ ನೀಡಿದರು.

    ಲಯನ್ಸ್ ಕ್ಲಬ್ ಅಧ್ಯಕ್ಷ ಕರ್ಣಂಡ ಯು.ಜಯ ಮಾತನಾಡಿ, ಆರ್ಯುವೇದವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎರಡು ವರ್ಷಗಳಿಂದ ರೋಟರಿ ಮತ್ತು ಲಯನ್ಸ್ ಸಂಸ್ಥೆ ಆರೋಗ್ಯ ಶಿಬಿರವನ್ನು ಆಯೋಜಿಸುತ್ತಿದೆ. ಆರ್ಯುವೇದ ಚಿಕಿತ್ಸೆ ಅತ್ಯುತ್ತಮವಾಗಿದ್ದು, ಪೌರಾಣಿಕ ಹಿನ್ನಲೆಯುಳ್ಳ ಅನೇಕ ಸಿದ್ದ ವೈದ್ಯರು ರಾಸಾಯನಿಕ ವಸ್ತುಗಳನ್ನು ಬಳಸದೆ ಪ್ರಕೃತಿಯಿಂದ ಲಭಿಸಿದ ವಸ್ತುಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.

    ರೋಟರಿ ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಸುಮಾರು 100ಕ್ಕು ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಕೊಂಡರು. ಬೆನ್ನು ಮೂಳೆ ಚಿಕಿತ್ಸೆ, ಮೂಲವ್ಯಾಧಿ, ಭಗಂದರ, ಫಿಶರ್, ಚರ್ಮರೋಗ, ಮೂತ್ರಕೋಶದ ಸೋಂಕು, ಉರಿಮೂತ್ರ, ಹರ್ನೀಯ, ಪಿತ್ತಕೋಶದಲ್ಲಿ ಕಲ್ಲು ಮುಂತಾದ ವ್ಯಾದಿಗಳಿಗೆ ಸಲಹೆ ಮತ್ತು ವಿಶೇಷ ಚಿಕಿತ್ಸೆ ನೀಡಲಾಯಿತು.

    ಲಯನ್ಸ್ ಕ್ಲಬ್ ವಿರಾಜಪೇಟೆ ಶಾಖೆಯ ಕಾರ್ಯದರ್ಶಿ ಪಟ್ಟಡ ವಿಕ್ರಂ, ಕೋಶಾಧಿಕಾರಿ ಕೆ.ಪಿ.ನಿಯಾಜ್, ರೋಟರಿ ಕ್ಲಬ್ ವಿರಾಜಪೇಟೆ ಶಾಖೆಯ ಕಾರ್ಯದರ್ಶಿ ಬಿ.ಬಿ.ಮಾದಪ್ಪ, ಸದಸ್ಯೆ ದೀನಾ ಪೂವಣ್ಣ, ರೋಟರಿ ಶಾಲೆ ಪ್ರಾಂಶುಪಾಲೆ ವಿಶಾಲಾಕ್ಷೀ, ಜೆಎಸ್‌ಎಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಡಾ.ಪೂರ್ಣಿಮಾ, ಡಾ.ರವೀಂದ್ರ, ಡಾ.ಸುಶ್ಮಿತಾ, ಡಾ.ಮೇಘನಾ, ಡಾ. ರಾಘವೇಂದ್ರ ಮತ್ತು ಡಾ.ರೋಹಿತ್ ಸೇರಿದಂತೆ ಒಟ್ಟು 18 ತಜ್ಞ ವೈದ್ಯರು, ಉಭಯ ಸಂಸ್ಥೆಗಳ ಸದಸ್ಯರು ಶಿಬಿರದಲ್ಲಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts