More

    ಏ.20ರ ನಂತರ ಲಾಕ್​ಡೌನ್ ಸಡಿಲಿಕೆ: ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ರಿಂದ ಒಂದು ಮಹತ್ವದ ನಿರ್ಧಾರ..

    ನವದೆಹಲಿ: ಲಾಕ್​​ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಿರುವ ಕೇಂದ್ರ ಸರ್ಕಾರ ಏ.20ರ ನಂತರ ಕೆಲವು ವಿನಾಯಿತಿಗಳನ್ನು ನೀಡಬಹುದು ಎಂದು ಹೇಳಿದೆ.  ಕರೊನಾ ವೈರಸ್​ ಹೆಚ್ಚಾಗಿ ಬಾಧಿಸಿರುವ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆ ಲಾಕ್​ಡೌನ್​ ಸಡಲಿಕೆ ಮಾಡಬಹುದು ಎಂದು ಹೇಳಿದೆ.

    ಕರ್ನಾಟಕದಲ್ಲಿ ಸದ್ಯಕ್ಕೆ ಲಾಕ್​ಡೌನ್​ನಲ್ಲಿ ಸಡಿಲಿಕೆ ಇಲ್ಲ. ಯಥಾ ಸ್ಥಿತಿಯಲ್ಲೇ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಹಾಗೇ ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಕೂಡ ತಾವೂ ಸಹ ಲಾಕ್​ಡೌನ್​ನಲ್ಲಿ ಯಾವುದೇ ಸಡಿಲಿಕೆ ಮಾಡುವುದಿಲ್ಲ. ದೆಹಲಿಯಲ್ಲಿ ಏ.27ರವರೆಗೆ ಲಾಕ್​ಡೌನ್​ ಯಥಾ ಸ್ಥಿತಿಯಲ್ಲಿಯೇ ಇರಲಿದೆ ಎಂದಿದ್ದಾರೆ.

    ದೆಹಲಿಯಲ್ಲಿ ಒಟ್ಟು 11 ಜಿಲ್ಲೆಗಳಿವೆ. ಎಲ್ಲ ಜಿಲ್ಲೆಗಳೂ ಕರೊನಾ ಹಾಟ್​​ಸ್ಫಾಟ್​ಗಳೆಂದೇ ಗುರುತಿಸಲ್ಪಟ್ಟಿವೆ. ಕಂಟೇನ್ಮೆಂಟ್​ ವಲಯಗಳಲ್ಲಿ ನಿಯಮಗಳನ್ನು ಸಡಲಿಸಬೇಡಿ. ಲಾಕ್​ಡೌನ್​ ಕಟ್ಟುನಿಟ್ಟಾಗಿ ಮುಂದುವರಿಸಿ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಹಾಗಾಗಿ ದೆಹಲಿಯಲ್ಲಿ ಏ.27ರವರೆಗೂ ಕಟ್ಟುನಿಟ್ಟಾಗಿ ಲಾಕ್​ಡೌನ್​ ಇರಲಿದೆ ಎಂದಿದ್ದಾರೆ.

    ಏ.27ರಂದು ತಜ್ಞರೊಂದಿಗೆ ಸಭೆ ನಡೆಸುತ್ತೇವೆ. ಹಾಗೇ ದೆಹಲಿ ಪರಿಸ್ಥಿತಿ ಬಗ್ಗೆ ವ್ಯಾಪಕ ಪರಿಶೀಲನೆ ನಡೆಸುತ್ತೇವೆ. ಅದಾದ ಬಳಿಕವಷ್ಟೇ ಅಗತ್ಯವಿದ್ದರೆ ಲಾಕ್​ಡೌನ್​ನಲ್ಲಿ ಸಡಿಲಿಕೆ ಮಾಡುತ್ತೇವೆ ಎಂದಿದ್ದಾರೆ.

    ದೆಹಲಿಯಲ್ಲಿ ಇದುವರೆಗೆ 1900 ಕರೊನಾ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ 26 ಮಂದಿ ಐಸಿಯುವಿನಲ್ಲಿದ್ದಾರೆ. ಆರು ಜನ ವೆಂಟಿಲೇಟರ್​ ಸಪೋರ್ಟ್​ನಲ್ಲಿದ್ದಾರೆ. 43 ಮಂದಿ ಮೃತಪಟ್ಟಿದ್ದಾರೆ. ದೆಹಲಿಯ ಜನರ ಸುರಕ್ಷತಾ ದೃಷ್ಟಿಯಿಂದ ಲಾಕ್​ಡೌನ್​ ಹೀಗೇ ಮುಂದುವರಿಸುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್​)

    ಸದ್ಯಕ್ಕಿಲ್ಲ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ, ಕಾರ್ಯಕ್ರಮ ಮುಂದೂಡಿದ ತೀರ್ಥಕ್ಷೇತ್ರ ಟ್ರಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts