More

    ಸದ್ಯಕ್ಕಿಲ್ಲ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ, ಕಾರ್ಯಕ್ರಮ ಮುಂದೂಡಿದ ತೀರ್ಥಕ್ಷೇತ್ರ ಟ್ರಸ್ಟ್​

    ನವದೆಹಲಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ನೆರವೇರಿಸಬೇಕಾಗಿದ್ದ ಭೂಮಿಪೂಜೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

    ರಾಮಮ ಮಂದಿರ ನಿರ್ಮಾಣಕ್ಕಾಗಿ ರಚಿಸಲಾಗಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಈ ನಿರ್ಧಾರ ಪ್ರಕಟಿಸಿದೆ.
    ಏಪ್ರಿಲ್​ 30ರಂದು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಕಾಮಗಾರಿ ಆರಂಭಿಸಲು ಉದ್ದೇಶಿಸಿ ಭೂಮಿಪೂಜೆ ಕಾರ್ಯಕ್ರಮವನ್ನು ಟ್ರಸ್ಟ್​ ಹಮ್ಮಿಕೊಂಡಿತ್ತು. ಆದರೆ, ದೇಶವನ್ನು ಕರೊನಾ ಸಂಕಷ್ಟದಿಂದ ಪಾರು ಮಾಡಲು ಲಾಕ್​ಡೌನ್​ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಕಾರ್ಯಕ್ರಮ ನಡೆಸಲಾಗದು. ಹೀಗಾಗಿ ಮುಂದೂಡಲು ನಿರ್ಧರಿಸಲಾಯಿತು ಎಂದು ಟ್ರಸ್ಟ್​ ಸದಸ್ಯರು ತಿಳಿಸಿದ್ದಾರೆ.

    ಆದರೆ, ಕಾರ್ಯಕ್ರಮದ ಮುಂದಿನ ದಿನಾಂಕವನ್ನು ದೇಶ ಕರೊನಾ ಸಂಕಷ್ಟದಿಂದ ಪಾರಾಗಿ ಸಹಜ ಸ್ಥಿತಿಗೆ ಬಂದ ಬಳಿಕವಷ್ಟೇ ನಿಗದಿಪಡಿಸಲಾಗುವುದು. ಈ ಹಿಂದೆ ಸಭೆ ಸೇರಿದ್ದ ಸಾಧು-ಸಂತರು ಏಪ್ರಿಲ್​ 30ರಂದು ಭೂಮಿ ಪೂಜೆ ನಡೆಸಲು ಉದ್ದೇಶಿಸಿದ್ದರು. ಆದರೆ, ಕಾರ್ಯಕ್ರಮದ ರೂಪು-ರೇಷೆ ಅಂತಿಮಗೊಂಡಿರಲಿಲ್ಲ. ಆದರೆ, ಲಾಕ್​ಡೌನ್​ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡುವುದು ಅನಿವಾರ್ಯವಾಗಿದೆ ಎಂದು ಟ್ರಸ್ಟ್​ ಪ್ರಕಟಿಸಿದೆ.

    ‘ಪಿಎಂ ಕೇರ್ಸ್​’ ಗೆ ದೇಣಿಗೆ: ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಕರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದು, ಪ್ರಧಾನಮಂತ್ರಿಗಳ ‘ಪಿಎಂ ಕೇರ್ಸ್​’ ನಿಧಿಗೆ 11 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದೆ.

    ಲಾಕ್​​ಡೌನ್​ ಆಗಿ ಮನೆಯಲ್ಲಿದ್ದವರಿಗೆ ನಿಮ್ಮೂರಲ್ಲೇ ಉದ್ಯೋಗಾವಕಾಶ ಎಲ್ಲ ಜಿಲ್ಲೆಗಳಲ್ಲೂ ಬೇಕಾಗಿದ್ದಾರೆ ತಾಂತ್ರಿಕ ಸಹಾಯಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts