More

    ಕೇಜ್ರಿವಾಲ್​ ಭಯೋತ್ಪಾದಕ ಎಂದು ಆರೋಪಿಸಿದ ಬಿಜೆಪಿ ನಾಯಕರಿಗೆ ಉತ್ತರ ನೀಡಿದ ಹರ್ಷಿತಾ ಕೇಜ್ರಿವಾಲ್​

    ನವದೆಹಲಿ: ಚುನಾವಣೆ ಪ್ರಚಾರದ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರನ್ನು ಬಿಜೆಪಿ ನಾಯಕರು ಭಯೋತ್ಪಾದಕ ಎಂದು ಆರೋಪ ಮಾಡಿದ್ದಕ್ಕೆ ಅವರ ಪುತ್ರಿ ಪ್ರತಿಕ್ರಿಯೆ ನೀಡಿದ್ದಾರೆ.

    ಎಲ್ಲರೂ ರಾಜಕೀಯ ಕೊಳಕು ಎನ್ನುತ್ತಾರೆ. ಆದರೆ ಇದನ್ನು ಮೀರಿ ಬಿಜೆಪಿ ನಾಯಕರು ತಂದೆ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಕೇಜ್ರಿವಾಲ್​ ಅವರ 24 ವರ್ಷದ ಪುತ್ರಿ ಹರ್ಷಿತಾ ಕೇಜ್ರಿವಾಲ್​ ಹೇಳಿದ್ದಾರೆ.

    ಆರೋಗ್ಯ ಸೌಲಭ್ಯಗಳನ್ನು ಮುಕ್ತಗೊಳಿಸಿ ಜನರಿಗೆ ತಲುಪಿಸಿದರೆ ಅದು ಭಯೋತ್ಪಾದನೆಯೇ? ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ಅದು ಭಯೋತ್ಪಾದನೆಯೇ? ವಿದ್ಯುತ್ ಮತ್ತು ನೀರು ಸರಬರಾಜು ವ್ಯವವಸ್ಥೆ ಸುಧಾರಿಸಿದರೆ ಅದು ಭಯೋತ್ಪಾದನೆಯೇ? ”ಎಂದು ಹರ್ಷಿತಾ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.

    ನನ್ನ ತಂದೆ ನನ್ನನ್ನು ಬೆಳಗ್ಗೆ 6 ಗಂಟೆಗೆ ಎಬ್ಬಿಸಿ ಭಗವದ್ಗೀತೆ ಓದಿಸುತ್ತಿದ್ದರು. ಇದು ಭಯೋತ್ಪಾದನೆಯೇ? ಬಿಜೆಪಿ ನಾಯಕರ ಈ ಪ್ರಶ್ನೆಗೆ ಫೆ.11ರ ಫಲಿತಾಂಶ ಉತ್ತರ ನೀಡಲಿದೆ. ಬಿಜೆಪಿ ನಾಯಕರು ನನ್ನ ತಂದೆ ವಿರುದ್ಧ ಏನೇ ಆರೋಪ ಮಾಡಲಿ, ಬಿಜೆಪಿಯ 200 ಸಂಸದರು ಮತ್ತು 11 ರಾಜ್ಯಗಳ ಮುಖ್ಯಮಂತ್ರಿಗಳು ಬಂದು ದೆಹಲಿಯಲ್ಲಿ ನಮ್ಮ ವಿರುದ್ಧ ಪ್ರಚಾರ ಮಾಡಲಿ. ನಮ್ಮ ಪರವಾಗಿ ದೆಹಲಿಯ 2 ಕೋಟಿ ಸಾಮಾನ್ಯ ಜನರು ಪ್ರಚಾರ ಮಾಡುತ್ತಿದ್ದಾರೆ. ಮತದಾರರು ಬಿಜೆಪಿಯ ಆರೋಪದ ಮೇಲೆ ಅಥವಾ ತಂದೆ ಕೇಜ್ರಿವಾಲ್​ ಮಾಡಿದ ಕೆಲಸದ ಮೇಲೆ ಮತಚಲಾವಣೆ ಮಾಡಿದ್ದಾರೆಯೇ ಎಂಬುದು ಫೆ.11ರ ನಂತರ ಗೊತ್ತಾಗುತ್ತದೆ ಎಂದು ಅವರು ಹೇಳಿದ್ದಾರೆ.

    ಬಿಜೆಪಿ ಶಾಸಕ ಪರ್ವೇಶ್ ವರ್ಮಾ ಅವರು ದೆಹಲಿಯ ಶಹೀನ್​ ಬಾಗ್​ನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರಿಗೆ ಬೆಂಬಲ ನೀಡಿ ಅವರು ಭಯೋತ್ಪಾದಕರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ನಂತರ ಆಗ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕೇಜ್ರಿವಾಲ್ ಓರ್ವ ಅರಾಜಕತಾವಾದಿ. ಅರಾಜಕತಾವಾದಿ ಮತ್ತು ಭಯೋತ್ಪಾದಕನ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಹೇಳಿದ್ದರು. (ಏಜೇನ್ಸಿಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts