More

    ದೆಹಲಿಯ ಕ್ರಿಕೆಟ್ ಸ್ಟೇಡಿಯಂ ಆವರಣದಲ್ಲಿ ತಲೆ ಎತ್ತಲಿದೆ ಈ ನಾಯಕನ 6 ಅಡಿ ಪ್ರತಿಮೆ…!

    ನವದೆಹಲಿ: ಕೇವಲ ರಾಜಕೀಯ ಅಷ್ಟೇ ಅಲ್ಲದೆ ಕ್ರೀಡಾ ಆಡಳಿತದಲ್ಲೂ ದಿವಂಗತ ಅರುಣ್ ಜೇಟ್ಲಿ ಹೆಸರು ಮಾಡಿದ್ದರು. ಕಳೆದ ವರ್ಷದ ನಿಧನರಾದ ಜೇಟ್ಲಿ ನೆನೆಪಿಗಾಗಿ ನವದೆಹಲಿಯ ಫಿರೋಷ್ ಷಾ ಕೋಟ್ಲ ಮೈದಾನದ ಹೆಸರನ್ನು ಅರುಣ್ ಜೇಟ್ಲೆ ಮೈದಾನ ಎಂದು ಮರು ನಾಮಕಾರಣ ಮಾಡಲಾಗಿದೆ. ಇದೀಗ ಸ್ಟೇಡಿಯಂ ಆವರಣದಲ್ಲಿ ಜೇಟ್ಲಿ ಅವರ 6 ಅಡಿ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಡಿಸೆಂಬರ್ 28ಕ್ಕೆ ಜೇಟ್ಲಿ ನಿಧನರಾಗಿ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ಪ್ರತಿಮೆ ನಿರ್ಮಿಸಲಾಗಿದ್ದು, ಗೃಹ ಸಚಿವ ಅಮಿತ್ ಷಾ ಪ್ರತಿಮೆಯನ್ನು ಅನಾವರಣಗೊಳಿಸುವ ಸಾಧ್ಯತೆಗಳಿವೆ.

    ದೆಹಲಿಯ ಕ್ರಿಕೆಟ್ ಸ್ಟೇಡಿಯಂ ಆವರಣದಲ್ಲಿ ತಲೆ ಎತ್ತಲಿದೆ ಈ ನಾಯಕನ 6 ಅಡಿ ಪ್ರತಿಮೆ...!ಅರುಣ್ ಜೇಟ್ಲಿ, 1999 ರಿಂದ 2013ರವರೆಗೆ 14 ವರ್ಷಗಳ ಕಾಲ ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2014ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜೇಟ್ಲಿ ದೆಹಲಿ ಕ್ರಿಕೆಟ್ ಆಡಳಿತದಿಂದ ದೂರ ಉಳಿದಿದ್ದರು. ಸದ್ಯ ಡಿಡಿಸಿಎಗೆ ಜೇಟ್ಲಿ ಅವರ ಮಗ ರೋಹನ್ ಅಧ್ಯಕ್ಷರಾಗಿದ್ದಾರೆ. ಅಕ್ಟೋಬರ್ 17 ರಂದು ನಡೆದ ಚುನಾವಣೆಯಲ್ಲಿ ರೋಹನ್ ಅವಿರೋಧವಾಗಿ ಆಯ್ಕೆಯಾದರು. ಈ ಪ್ರತಿಮೆಯನ್ನು ರಾಮ್ ಸುತಾರ್ ಫೈನ್ ಆರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ನಿರ್ಮಿಸುತ್ತಿದೆ. ಕಳೆದ ಅಕ್ಟೋಬರ್‌ನಲ್ಲಿ ನಡೆದ ಡಿಡಿಸಿಎ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಪ್ರತಿಮೆ ಸ್ಥಾಪಿಸುವ ತೀರ್ಮಾನ ಕೈಗೊಳ್ಳಲಾಯಿತು.

    ಭಾರತದ ಅತ್ಯಂತ ಹಳೇ ಸ್ಟೇಡಿಯಂಗಳಲ್ಲಿ ಒಂದಾದ ಫಿರೋಷ್ ಷಾ ಕೋಟ್ಲ ಮೈದಾನವನ್ನು 1883ರಲ್ಲಿ ನಿರ್ಮಿಸಲಾಯಿತು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಬಿಷನ್ ಸಿಂಗ್ ಬೇಡಿ, ಮೋಹಿಂದರ್ ಅಮರ್‌ನಾಥ್, ಗೌತಮ್ ಗಂಭೀರ್‌ರಂಥ ದಿಗ್ಗಜ ಆಟಗಾರರ ಹೆಸರನ್ನು ಸ್ಟೇಡಿಯಂ ಸ್ಟಾೃಂಡ್‌ಗಳಿಗೆ ಇಡಲಾಗಿದೆ. ಇದೀಗ ಹೊಸ ಸ್ಟಾೃಂಡ್‌ಗೆ ಚೇತನ್ ಚೌಹಾನ್ ಹೆಸರಿಡುವ ಸಾಧ್ಯತೆಗಳಿವೆ. ಡಿಡಿಸಿಎ ಉಪಾಧ್ಯಕ್ಷರೂ ಆಗಿದ್ದ ಚೇತನ್, ಅಗಸ್ಟ್ 16 ರಂದು ನಿಧನರಾದರು.

    ಪ್ರಧಾನಿ ನರೇಂದ್ರ ಮೋದಿಗಿಂತ ವಿರಾಟ್ ಕೊಹ್ಲಿ ಪ್ರಭಾವಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts