More

    15 ಎಆರ್‌ಟಿಒಗಳಿಗೆ ಆರ್‌ಟಿಒ ಹುದ್ದೆಗೆ ಬಡ್ತಿ: ಹೈಕೋರ್ಟ್‌ ತೀರ್ಪಿನ ಷರತ್ತಿಗೆ ಒಳಪಟ್ಟು ಸ್ಥಳ ನಿಯೋಜಿಸಿದ ಸರ್ಕಾರ

    ಬೆಂಗಳೂರು: ಬಹುದಿನಗಳಿಂದ ಕಾಯುತ್ತಿದ್ದ 15 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ (ಎಆರ್‌ಟಿಒ) ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಹುದ್ದೆಗೆ ಮುಂಬಡ್ತಿ ನೀಡಿ ಬುಧವಾರ ಆದೇಶಿಸಿರುವ ರಾಜ್ಯ ಸರ್ಕಾರ, ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ನಿಯುಕ್ತಿಗೊಳಿಸಿದೆ. ಕೆಲವರ ವಿರುದ್ಧ ಹೈಕೋರ್ಟ್ ಹಾಗೂ ಕೆಎಟಿಗಳಲ್ಲಿ ವಿಚಾರಣೆ ಬಾಕಿ ಇರುವುದರಿಂದ ಅವರ ಮುಂಬಡ್ತಿ ನ್ಯಾಯಾಲಯದ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

    ಜೆ.ಬಿ.ಮಿಸ್ಕಿತ್-ಮಡಿಕೇರಿ, ಟಿ.ಜಿ.ಹೇಮಾವತಿ-ಮಂಡ್ಯ, ಪಿ.ರವಿಶಂಕರ್-ಉಡುಪಿ, ಪಿ.ಉಮೇಶ್-ಬೆಂಗಳೂರು ಪೂರ್ವ, ಆರ್.ಎಲ್.ಹೊಸಮನಿ-ಬಾಗಲಕೋಟೆ, ಬಿ.ಶ್ರೀನಿವಾಸ ಪ್ರಸಾದ್-ಬೆಂಗಳೂರು ಪಶ್ಚಿಮ, ಬಿ.ಎಂ.ಸುರೇಶ್-ಬೆಂಗಳೂರು ಕೇಂದ್ರ, ಜೆ.ವೆಂಕಟೇಶಲು-ಚಂದಾಪುರ, ಶ್ರೀಕಾಂತ್ ಬಡಿಗೇರ್-ನೆಲಮಂಗಲ, ಎಚ್.ರಾಜಣ್ಣ-ಆಟೋ ರಿಕ್ಷಾ ಶಾಂತಿನಗರ, ಎ.ವಿವೇಕಾನಂದ-ಚಿಕ್ಕಬಳ್ಳಾಪುರ, ಬಿ.ಎಂ.ಕಾಳಸಿಂಗೆ- ಚಿತ್ರದುರ್ಗ, ನಾಗೇಶ್ ಮುಂಡಾಸ್-ಬೆಳಗಾವಿ, ಎನ್.ಎಂ.ಸುಬ್ಬಯ್ಯ-ಬೆಂಗಳೂರು ದಕ್ಷಿಣ, ಎಸ್.ಎಸ್.ಮಿಲಿಂದ ಕುಮಾರ್-ಯಾದಗಿರಿ ಆರ್‌ಟಿಒ ಕಚೇರಿಗಳಿಗೆ ನಿಯುಕ್ತಿಗೊಳಿಸಲಾಗಿದೆ.

    ಬೆಂಗಳೂರು ಪೂರ್ವ ಕಚೇರಿ ಆರ್‌ಟಿಒ ಬಿ.ಕೆ.ನೇಾನಂದ, ಬೆಂಗಳೂರು ಪಶ್ಚಿಮ ಆರ್‌ಟಿಒ ಎಂ.ಪ್ರಭುಸ್ವಾಮಿ ಮಾ.31ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಅವರ ಹುದ್ದೆಗೆ ಕ್ರಮವಾಗಿ ಪಿ.ಉಮೇಶ್ ಹಾಗೂ ಬಿ.ಶ್ರೀನಿವಾಸ ಪ್ರಸಾದ್ ಅವರನ್ನು ನಿಯೋಜಿಸಲಾಗಿದೆ.

    ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?

    ಕರ್ನಾಟಕ ಚುನಾವಣೆ-2023: ಚುನಾವಣಾಪೂರ್ವ ಸಮೀಕ್ಷೆಗಳು ಪ್ರಕಟ; ಯಾರಿಗೆ ಎಷ್ಟು? ಇಲ್ಲಿದೆ ಪೂರ್ತಿ ವಿವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts