More

    ಸಾಂಸ್ಕೃತಿಕ ರಸದೌತಣ ಬಡಿಸಿದ ಕಲಾವಿದರು

    ಗೋಣಿಕೊಪ್ಪ: ಶ್ರೀಮಂಗಲ ಗೌರಿ-ಗಣೇಶ ಉತ್ಸವ ಸಮಿತಿ ವತಿಯಿಂದ ಗ್ರಾಮ ಪಂಚಾಯಿತಿ ವೇದಿಕೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗಣೇಶೋತ್ಸವದಲ್ಲಿ ಪೊನ್ನಂಪೇಟೆ ಕಾವೇರಿ ಕಲಾಸಿರಿ ಮತ್ತು ನಾಟ್ಯಸಂಕಲ್ಪ ನೃತ್ಯ ತಂಡ ಸಾಂಸ್ಕೃತಿಕ ರಸದೌತಣ ನೀಡಿತು.

    ಗಾಯಕ ತಿರುಮಲೇಶ್ ‘ನುಡಿಯೇ ಕನ್ನಡ ನುಡಿ, ಬೊಂಬೆ ಹೇಳುತೈತೆ, ಯುಗ ಯುಗಗಳೇ ಸಾಗಲಿ, ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು ಕಿವಿಗೆ ಇಂಪು ನೀಡಿದವು. ಗಾಯಕಿ ಹೇಮಾ ಪತಂಗವಾಗಿ ಹಾರಾಡಬಲ್ಲೆ, ಕಣ್ಣ ಹೊಡಿಯಾಕೆ, ದೇವರಪುರ ಸಿದ್ದು ರೇ ರೇ ಭಜರಂಗಿ, ತಮಿಳು ಗೀತೆಗಳು, ಜಿತನ್ ಕುಂದುಲುಂಡು ಕ್ಯಾಮಾ, ಕೊಡವ ಗೀತೆ ಹಾಗೂ ರಿಮಿಕ್ಸ್ ಗೀತೆ ಹಾಡಿದರು.

    ಪವನ್ ಕುಮಾರ್ ಜೇನು ಕುರುಬ ಮಕ್ಕಾಳು ದೂರಿ ದೂರಿ ಹಾಡು ಮೋಡಿ ಮಾಡಿತು. ನಾಟ್ಯ ಸಂಕಲ್ಪ ನೃತ್ಯ ತಂಡದ ನಾಯಕಿ ಪ್ರೇಕ್ಷ ಅಶೋಕ್ ಭಟ್ ಅವರಿಂದ ಭರತ ನಾಟ್ಯ ಹಾಗೂ ವೆಸ್ಟರ್ನ್ ಡಾನ್ಸ್ ಮೂಡಿ ಬಂತು. ಎಂ.ಎಂ. ಚನ್ನನಾಯಕ, ಹಾಸ್ಯ ಚಟಾಕಿ ಹಾರಿಸಿದರು.
    ಪುಟಾಣಿಗಳಾದ ಟಿ.ಎಚ್.ತನಿಷ್ಕ, ಹಿತೈಷಿ ನಾಣಯ್ಯ, ಸ್ಪಂದನ, ತನ್ವಿ ಕಾವೇರಮ್ಮ, ಸಿ.ಚ್.ದಿಶಿಕಾ, ಎ.ಸಮೀಕ್ಷಾ, ಲೇಖನಾ ಅಕ್ಕಮ್ಮ, ಸಿಂಚನಾ ದೇವಯ್ಯ, ಕೆ.ಜಿ.ಹರ್ಷಿಕಾ, ಗಾಹ್ನವಿ, ವಂದನಾ ಹಾಗೂ ಲಹರಿ ಅವರು ನೃತ್ಯ ಮಾಡಿದರು.

    ಗೌರಿ ಗಣೇಶ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಅಜ್ಜಮಾಡ ಸಿ.ಜಯ, ಅಧ್ಯಕ್ಷ ಬಾಚಂಗಡ ದಾದಾ ದೇವಯ್ಯ, ಉಪಾಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಖಜಾಂಚಿ ಐಪುಮಾಡ ಶಂಭು, ಕಾರ್ಯದರ್ಶಿ ಚೋನೀರ ಕಾಳಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts