More

    ಶ್ರೀರಾಮನ ಮೇಲಿನ ಭಕ್ತಿ;101 ಕ್ವಿಂಟಾಲ್ 11 ಬಗೆಯ ಧಾನ್ಯಗಳಿಂದ 120 ಅಡಿ ಎತ್ತರದ ರಾಮ-ಸೀತೆಯ ಭಾವಚಿತ್ರ!

    ನವದೆಹಲಿ: ಜನವರಿ 22 ರಂದು, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆನಡೆಯುತ್ತಿದೆ. ಈಗಾಗಲೇ ಸಕಲ ಸಿದ್ಧತೆ ನಡೆಯುತ್ತಿದ್ದು, ಅಣ್ಯಾತಿಗಣ್ಯರಿಗೆ ಅಹ್ವಾನವನ್ನು ನೀಡಲಾಗಿದೆ. ಶ್ರೀರಾಮನ ಪ್ರತಿಮೆ ಲೋಕಾರ್ಪಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜಗತ್ತಿನಾದ್ಯಂತ ರಾಮಭಕ್ತರು ತಮ್ಮ ಭಕ್ತಿಯನ್ನು ವಿಭಿನ್ನ ರೀತಿಯಲ್ಲಿ ತೋರಿಸುತ್ತಿದ್ದಾರೆ. ಈ ಅನುಕ್ರಮದಲ್ಲಿ ನೇಪಾಳದಲ್ಲಿ ರಾಮಭಕ್ತರು ಬಿಡಿಸಿದ ಚಿತ್ರ ಇದೀಗ ವಿಶ್ವದ ಗಮನ ಸೆಳೆಯುತ್ತಿದೆ.

    ನೇಪಾಳದ ಜನಕ್‌ಪುರದಲ್ಲಿ, ಕೇವಲ ಧಾನ್ಯಗಳಿಂದ ನಿರ್ಮಿಸಲಾದ ಬೃಹತ್ ಭಾವಚಿತ್ರವು ವಿಶ್ವದಾಖಲೆ ಮಾಡಲು ಸಿದ್ಧವಾಗಿದೆ. 11 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ರಾಮ ಮತ್ತು ಸೀತೆಯ ಭಾವಚಿತ್ರವನ್ನು ರಚಿಸಲಾಗಿದೆ. ತ್ರೇತಾಯುಗದ ವಿವಾಹ ಸಮಾರಂಭದ ನೆನಪಿಗಾಗಿ ಈ ಮಹಾಯಜ್ಞದಲ್ಲಿ ಒಟ್ಟು 10 ಕಲಾವಿದರು ಭಾಗವಹಿಸಿದ್ದರು. ನೇಪಾಳದ ಇಬ್ಬರು ಕಲಾವಿದರು ಮತ್ತು ಭಾರತದ ಎಂಟು ಕಲಾವಿದರು ರಂಗಭೂಮಿ ಮೈದಾನದಲ್ಲಿ ಸೀತಾರಾಮ್ ಅವರ ಭಾವಚಿತ್ರವನ್ನು ರಚಿಸಿದರು.

    120 ಅಡಿ ಎತ್ತರದ ರಾಮ-ಸೀತೆಯ ಭಾವಚಿತ್ರ ವಿಶೇಷತೆ: 120 ಅಡಿ ಉದ್ದ ಮತ್ತು 91.5 ಅಡಿ ಅಗಲದ ಈ ಬೃಹತ್ ಚಿತ್ರವನ್ನು ರಚಿಸಲು 11 ವಿಧದ 101 ಕ್ವಿಂಟಾಲ್ ಧಾನ್ಯಗಳನ್ನು ಬಳಸಲಾಗಿದೆ. ಚಿತ್ರಕಲೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸಲಾಗಿಲ್ಲ. 

    ಈ ಅದ್ಭುತ ಕಲಾಕೃತಿಯನ್ನು ನೋಡಲು ದೂರದೂರುಗಳಿಂದ ಭಕ್ತರು ಆಗಮಿಸುತ್ತಾರೆ. ನೇಪಾಳದಲ್ಲಿ ಮಾರ್ಗ ಶುಕ್ಲ ಪಂಚಮಿಯನ್ನು ಜನಕಪುರ ಧಾಮ್‌ನಲ್ಲಿರುವ ಜಾನಕಿ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ಅಲ್ಲಿ ಸೀತಾರಾಮರ ವಿವಾಹ ಸಮಾರಂಭವನ್ನು ಏಳು ದಿನಗಳವರೆಗೆ ಆಚರಿಸಲಾಗುತ್ತದೆ. ನೇಪಾಳ ಮತ್ತು ಭಾರತದಿಂದ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಈ ವರ್ಷ, ಡಿಸೆಂಬರ್ 17 ರಿಂದ, ದೇವಾಲಯದಲ್ಲಿ ದೊಡ್ಡ ಪ್ರಮಾಣದ ವಿವಾಹ ಸಮಾರಂಭವನ್ನು ನಡೆಸಲಾಗುತ್ತಿದೆ.

    ಭಾರತದ ಗಡಿ ರಕ್ಷಕರಾಗಿ ಜೇನುಹುಳಗಳು; ಭಾರತ, ಬಾಂಗ್ಲಾದೇಶದ ಬೇಲಿಯಲ್ಲಿ ಬಿಎಸ್ಎಫ್ ಜತೆ ಕಾವಲು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts